ತುಮಕೂರು ಜಿಲ್ಲಾಡಳಿತದ ವತಿಯಿಂದ ಕೋವಿಡ್ ನಿಂದ ಮೃತಪಟ್ಟವರ ಅಸ್ತಿ ವಿಸರ್ಜನಾ ಕಾರ್ಯಕ್ರಮ.

ತುಮಕೂರು ಜಿಲ್ಲಾಡಳಿತದ ವತಿಯಿಂದ ಕೋವಿಡ್ ನಿಂದ ಮೃತಪಟ್ಟವರ ಅಸ್ತಿ ವಿಸರ್ಜನಾ ಕಾರ್ಯಕ್ರಮ.

 

ತುಮಕೂರು_ಕರೋನ ಎರಡನೇ ಅಲೆ ದೇಶದಾದ್ಯಂತ ಆರ್ಭಟ ನಡೆಸಿ ಸಾಕಷ್ಟು ಸಾವುನೋವುಗಳಿಗೆ ಎಡೆಮಾಡಿತ್ತು. ಇನ್ನು ಕೊರೊನಾ ಸೋಂಕು ತುಮಕೂರು ಜಿಲ್ಲೆಯಲ್ಲಿ ಸಾಕಷ್ಟು ಸಾವು ನೋವು ಉಂಟುಮಾಡಿತ್ತು.

 

ಕೋವಿಡ್ ಎರಡನೇ ಅಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಕರುನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಅಸ್ತಿಗಳನ್ನು ವಾರಸುದಾರರಿಲ್ಲದೆ , ಸಂಬಂಧಿಕರು ಅಂತಿಮ ವಿಧಿವಿಧಾನಗಳನ್ನು ಪೂರೈಸಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಕರೋನಾ ಸೊಂಕಿನಿಂದ ಮೃತಪಟ್ಟವರ ಅಂತಿಮ ವಿಧಿವಿಧಾನಗಳನ್ನು ತುಮಕೂರು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಮಂಡ್ಯದ ಶ್ರೀರಂಗಪಟ್ಟಣದ ಸಂಗಮದಲ್ಲಿ ನೆರವೇರಿಸಲು ಜಿಲ್ಲಾಡಳಿತ ಮುಂದಾಗಿದೆ.

 

 

ಇದಕ್ಕೆ ಸಂಬಂಧಿಸಿದಂತೆ ಮಂಗಳವಾರ ಬೆಳಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ದೇಶನ ಮೇರೆಗೆ ತುಮಕೂರು ತಹಸಿಲ್ದಾರ್ ಮೋಹನ್ ಕುಮಾರ್, ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತುಮಕೂರು ಘಟಕದ ಜಿಲ್ಲಾಧ್ಯಕ್ ನರಸಿಂಹರಾಜು ಹಾಗೂ ಕಂದಾಯ ಅಧಿಕಾರಿಗಳ ತಂಡ ಅಸ್ತಿ ವಿಸರ್ಜನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು.

 

 

ಕಳೆದ ಐದು ಆರು ತಿಂಗಳಿನಿಂದ ಕೋವಿಡ್ ಎರಡನೇ ಹಳೆಯಲ್ಲಿ ಬೆಂಗಳೂರು ಕೋಲ್ಕತ್ತಾ ಪೋರಬಂದರ್ ಸೇರಿದಂತೆ ವಿವಿಧ ರಾಜ್ಯಗಳ ವ್ಯಕ್ತಿಗಳು ಪಟ್ಟಿದ್ದು. ಕಳೆದ ಐದು _ಆರು ತಿಂಗಳಿನಿಂದ ಅಸ್ತಿಯನ್ನು ಹಾಗೆ ಸಂಗ್ರಹಿಸಿಡಲಾಗಿತ್ತು ಇದಕ್ಕೆ ಸಂಬಂಧಿಸಿದಂತೆ ಕುಟುಂಬವರ್ಗದವರನ್ನು ಹಲವು ಬಾರಿ ಸಂಪರ್ಕ ಮಾಡಿದರು ಮುಂದೆ ಬರದ ಕಾರಣ ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಕೋವಿದ ಎರಡನೇ ಎಲೆಯಲ್ಲಿ ಮೃತಪಟ್ಟು ವಾರಸುದಾರರು ಮುಂದೆ ಬರದ 22  ಮೃತಪಟ್ಟ ವ್ಯಕ್ತಿಗಳ ಆಸ್ತಿಯನ್ನು ಶ್ರೀರಂಗಪಟ್ಟಣದಲ್ಲಿ ಶಾಸ್ತ್ರೋಕ್ತವಾಗಿ ಆಸ್ತಿ ಬಿಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಸಿಲ್ದಾರ್ ಮೋಹನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

 

 

 

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ ದೇಶದ ವಿವಿಧ ರಾಜ್ಯಗಳ ವ್ಯಕ್ತಿಗಳು ತುಮಕೂರು ಜಿಲ್ಲೆಯಲ್ಲಿ ಕರೋನ ಸೋಂಕಿನಿಂದ ಮೃತಪಟ್ಟಿದ್ದರು ಆದರೆ ಕುಟುಂಬವರ್ಗದವರನ್ನು ಹಲವು ಬಾರಿ ಫೋನ್ ಮೂಲಕ ಸಂಪರ್ಕ ಮಾಡಿದರು ಕುಟುಂಬವರ್ಗದವರು ಮುಂದೆ ಬಂದಿರಲಿಲ್ಲ. ಮೃತಪಟ್ಟ ವ್ಯಕ್ತಿಗಳ ವಿಧಿವಿಧಾನಗಳನ್ನು ಹಾಗೆ ಬಿಡಲು ಸಾಧ್ಯವಿಲ್ಲ ಎಲ್ಲರೂ ಕೂಡ ನಮ್ಮ ಬಂಧು ಬಾಂಧವರೆ ಹಾಗಾಗಿ ಮೃತಪಟ್ಟ ವ್ಯಕ್ತಿಗಳ ಆತ್ಮ ಮುಕ್ತಿ ಹೊಂದಲಿ ಎಂದು ಒಂದು ಉತ್ತಮ ಕಾರ್ಯವನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವುದು ನಿಜಕ್ಕೂ ಒಳ್ಳೆಯ ಕೆಲಸ ಹಾಗಾಗಿ ಇಂತಹ ಕೆಲಸಕ್ಕೆ ಎಲ್ಲರೂ ಕೈಗೂಡಿಸಿ ಇಂದು ಸಂಗಮದಲ್ಲಿ ಅಸ್ತಿ ಬಿಡುವ ಮೂಲಕ ಮೃತಪಟ್ಟ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಸಹ ಸಂಗಮಕ್ಕೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ.

 

 

ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹರಾಜು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

 

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!