ತುಮಕೂರಿಗೆ ದೇವೇಗೌಡರ ಕುಟುಂಬ ದ್ರೋಹ ಮಾಡಿಲ್ಲ – ಹೆಚ್ ಡಿ ಕುಮಾರಸ್ವಾಮಿ.
ತುಮಕೂರು : ತುಮಕೂರು ಜಿಲ್ಲೆಗೆ ನೀರಿನ ವಿಚಾರದಲ್ಲಿ ದೇವೇಗೌಡರ ಕುಟುಂಬ ಎಂದಿಗೂ ದ್ರೋಹ ಮಾಡಿಲ್ಲ ,ಹಾರಂಗಿ ,ಹೇಮಾವತಿ ಜಲಾಶಯ ನಿರ್ಮಾಣದ ಹಿಂದೆ ದೇವಗೌಡರ ಹೋರಾಟ ಇದೇ,ತುಮಕೂರು ಜಿಲ್ಲೆಗೆ 24 ಟಿ ಎಮ್ ಸಿ ನೀರು ಸಿಗಲು ದೇವೇಗೌಡರೇ ಕಾರಣ ನಮ್ಮಗಳ ವಿರುದ್ದ ಇಲ್ಲದ ಆರೋಪ ಮಾಡಿ ಸುಳ್ಳು ಪ್ರಚಾರ ನಡೆಸಲಾಗುತ್ತಿದೆ ಎಂದು ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ನಗರದ ಗಾಜಿನ ಮನೆಯಲ್ಲಿ ನಡೆದ ಜನಾತ ಜಲಧಾರೆ ಕಾರ್ಯಕ್ರಮದಲಿ ಭಾಗವಹಿಸಿ ಮಾತನಾಡಿದ ಅವರು ಜೆಡಿಎಸ್ ದಲಿತ ವಿರೋಧಿ,ತುಮಕೂರು ಜಿಲ್ಲೆಗೆ ದ್ರೊಹ ಮಾಡಿದ್ದಾರೆ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ ದೇವೇಗೌಡರು ತುಮಕೂರಿಗೆ ನೀರು ಕಲ್ಪಿಸಲು ಹೋರಾಟ ಮಾಡದೆ ಇದ್ದಿದರೇ ಜಿಲ್ಲೆ ಶಾಶ್ವತವಾಗಿ ಬರಕ್ಕೆ ತುತ್ತಾಗುತ್ತಿತೂ ಎಂದು ವಿರೋದಿಗಳ ಅಪಪ್ರಚಾರದ ವಿರುದ್ದ ಗುಡುಗಿದರು.
ನಾನು ನಲವತ್ತು ಪರ್ಸೆಂಟ್ ಲಂಚ ಪಡೆದಿದರೇ ಹಣ ಕೋಟ್ಟು ವೋಟು ಪಡೆಯಬಹುದಿತ್ತು ನಾನು ಹಾಗೇ ಮಾಡಿಲ್ಲ ಜನರಿಗಾಗಿ ದುಡಿದಿದೇನೆ ಜನ ಮುಂದಿನ ದಿನಗಳಲಿ ನಮ್ಮ ವೊಟು ಮಾರಾಟಕೆ ಇಲ್ಲ ಎಂದು ನಿಮ್ಮ ಬಡವಾಣೆಗಳಲಿ ಬೋರ್ಡ ಗಳನ್ನು ಹಾಕಬೇಕು ಅ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಉತ್ತರಿಸಬೇಕು ಎಂದು ಕರೆನೀಡಿದರು.
ಮುಂದಿನ ಚುನಾವಣೆಯಲಿ ಪೂರ್ಣ ಬಹುಮತದೊಂದಿಗೆ ಜೆಡಿಎಸ್ ಸರ್ಕಾರ ರಚನೆ ಮಾಡಿದರೇ ನೀರು ,ಶಿಕ್ಷಣ, ಆರೋಗ್ಯ, ಉದ್ಯೋಗ ,ಮನೆ ಎಲ್ಲಾರಿಗೂ ಕಲ್ಪಿಸುವ ಪಂಚರತ್ನ ಯೋಜನೆ ಜಾರಿ ಮಾಡುವುದಾಗಿ ತಿಳಿಸಿದರು.
ನಾನು ಸೋತು ಮನೆಯಲ್ಲಿ ಇಲ್ಲ .ಮತ್ತೆ ತುಮಕೂರಿನಿಂದಲೇ ಸ್ಪರ್ದೆಗೆ ಇಳಿಯುತ್ತೇನೆ.2018 ರಲ್ಲಿ ರಾಜಕೀಯ ನಿವೃತ್ತಿ ಘೋಷಣೆ ಮಾಡಿದೆ ಸೋನಿಯ ಗಾಂಧಿ ಸೇರಿದಂತೆ ಇತ್ತರರು ಒತ್ತಾಯ ಮಾಡಿದಕ್ಕೆ ರಾಜಸಭೆಗೆ ಹೋದೆ,ರಾಜಕೀಯ ಕುತಂತ್ರ ,ಅಪ ಪ್ರಚಾರದಿಂದ ಸೋಲಬೇಕಾಯಿತ್ತು ಎಂದು ಮಾಜಿಪ್ರಧಾನಿ ಹೆಚ್ ಡಿ ದೇವೇಗೌಡ ವಿರೋಧಿಗಳಿಗೆ ಟಕ್ಕರ್ ಕೋಟ್ಟರು.
ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿ ಎಮ್ ಇಬ್ರಾಹ್ಮಿ, ಗೌರಿಶಂಕರ್ ,ತಿಪ್ಪೇಸ್ವಾಮಿ ಮುಖಂಡರಾದ ಗೋವಿಂದರಾಜು ಅರ್ ಸಿ ಅಂಜನಪ್ಪ ,ಟಿ ಆರ್ ನಾಗರಾಜು,ನರಸೇಗೌಡ ,ಬೆಳ್ಳಿಲೋಕೇಶ್ ,ಜಾಂಗಿರ್ ರವೀಶ್ ಮತ್ತಿತರರು ಹಾಜರಿದರು.