ಯಲಿಯೂರು ಗ್ರಾಮದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದ ಗೋದಾಮು ನಿರ್ಮಾಣಕ್ಕೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಚಾಲನೆ ನೀಡಿದರು

ಯಲಿಯೂರು ಗ್ರಾಮದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದ ಗೋದಾಮು ನಿರ್ಮಾಣಕ್ಕೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಚಾಲನೆ ನೀಡಿದರು

ದೇವನಹಳ್ಳಿ: ವ್ಯವಸಾಯ ಸೇವಾ ಸಹಕಾರ ಸಂಘಗಳು, ಗ್ರಾಮೀಣ ಭಾಗದಲ್ಲಿನ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವಲ್ಲಿ ಮುಖ್ಯಪಾತ್ರ ವಹಿಸುತ್ತಿರುವುದರ ಜೊತೆಗೆ, ಅವರಿಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದ್ದು, ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

 

ಚನ್ನರಾಯಪಟ್ಟಣ ಹೋಬಳಿ ಯಲಿಯೂರು ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಗೋದಾಮು ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳು ಕೈಕೊಟ್ಟರೂ ಜನರ ಬದುಕಿಗೆ ಆಸರೆಯಾಗಿದ್ದು, ಸಹಕಾರಿ ಕ್ಷೇತ್ರ. ಸಹಕಾರ ಸಂಘಗಳು ಅಭಿವದ್ಧಿಯಾದರೆ ರೈತರ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಂಘಗಳಲ್ಲಿ ರಾಜಕೀಯ ಬೆರೆಸುವ ಬದಲು ರಾಜಕೀಯ ಮುಕ್ತವಾಗಿ ಸಹಕಾರ ಸಂಘಗಳ ಏಳಿಗೆಗೆ ಎಲ್ಲರೂ ಕೈಜೋಡಿಸಬೇಕು. ಸಹಕಾರ ಸಂಘಗಳು ಮುಕ್ತವಾಗಿ ಕೆಲಸ ಮಾಡಬೇಕು. ಸಂಘಗಳ ಉಳಿವಿನಲ್ಲಿ ರೈತರ ಹಿತ ಮತ್ತು ಬಲವರ್ಧನೆಯು ಅಡಗಿದೆ. ಹಾಗಾಗಿ ಪಕ್ಷಾತೀತವಾಗಿ ಸಹಕಾರ ಕ್ಷೇತ್ರವನ್ನು ಮುನ್ನಡೆಸಲು, ಎಲ್ಲರೂ ಬದ್ಧರಾಗಿರಬೇಕು. ರೈತನ ಕೃಷಿ ಚಟುವಟಿಕೆಗಳಿಗೆ ಬೇಕಾದ ರಸಗೊಬ್ಬರಗಳು, ಬಿತ್ತನೆ ಬೀಜ ಮತ್ತು ಬೇಸಾಯ ಚಟುವಟಿಕೆಗೆ ಬೇಕಾದ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿರುವ ಸಹಕಾರ ಸಂಘಗಳು ಉಳಿದು ಬೆಳೆಯಬೇಕಾದರೆ ಸೇವಾ ಭಾವನೆಯುಳ್ಳ ಆಡಳಿತ ಮಂಡಳಿ ಮತ್ತು ನೌಕರರ ಪ್ರಾಮಾಣಿಕ ದುಡಿಮೆಯಿಂದ ಮಾತ್ರ ಸಾಧ್ಯವಾಗುತ್ತದೆ. ಗೋದಾಮು ನಿರ್ಮಾಣ ಕಾರ್ಯ, ಗುಣಮಟ್ಟದಿಂದ ಕೂಡಿರಬೇಕು, ಶೀಘ್ರವಾಗಿ ಪೂರ್ಣಗೊಳ್ಳಬೇಕು ಎಂದರು.

 

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ ಮಾತನಾಡಿ, ಸಹಕಾರಿ ಕ್ಷೇತ್ರದಿಂದ ಇಂದು ಕೃಷಿ, ಹೈನುಗಾರಿಕೆ, ತೋಟಗಾರಿಕೆ ಇವೆಲ್ಲವೂ ಉಳಿದಿವೆ. ನಾವೆಲ್ಲರೂ ಸಹಕಾರಿ ತತ್ವದಡಿಯಲ್ಲಿ ಕೆಲಸ ಮಾಡುವುದರಿಂದ ಕೇವಲ ಸಹಕಾರಿ ಕ್ಷೇತ್ರದಲ್ಲಿ ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲೂ ನಾವು ಪಾದಾರ್ಪಣೆ ಮಾಡಿ, ಸಾಧನೆಯತ್ತ ಸಾಗಬಹುದಾಗಿದೆ ಎಂದರು.

 

ಜೆಡಿಎಸ್ ತಾಲ್ಲೂಕು ಘಟಕದ ಅದ್ಯಕ್ಷ ಆರ್.ಮುನೇಗೌಡ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಸಿಗುವಂತಹ ಸೌಲಭ್ಯಗಳನ್ನು ಪಡೆದುಕೊಂಡು ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಇಲ್ಲಿಂದ ಕೃಷಿ ಉದ್ದೇಶಗಳಿಗಾಗಿ ಸಾಲಸೌಲಭ್ಯ ಪಡೆದುಕೊಂಡರೆ ಅದನ್ನು ನಿಗದಿತ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಬೇಕು. ಸಕಾಲದಲ್ಲಿ ಸಾಲ ಮರುಫಾವತಿ ಮಾಡುವ ಮೂಲಕ ಇತರೆ ರೈತರಿಗೂ ಸೌಲಭ್ಯ ದೊರೆಯುವಂತೆ ಅವಕಾಶ ಮಾಡಿಕೊಡಬೇಕು. ಗೋದಾಮುಗಳು ರೈತರಿಗೆ ನಿಗದಿತ ಸಮಯದಲ್ಲಿ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳು, ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

 

ಯಲಿಯೂರು ವಿ.ಎಸ್.ಎಸ್.ಎನ್. ಅಧ್ಯಕ್ಷ ಹನುಮಂತಪ್ಪ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ್, ಮುಖಂಡರಾದ ಮಂಜುನಾಥ್, ಜೆಡಿಎಸ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಮಂಜಣ್ಣ, ಸೊಣ್ಣೇಗೌಡ, ಜೆಡಿಎಸ್ ಚನ್ನರಾಯಪಟ್ಟಣ ಹೋಬಳಿ ಘಟಕದ ಅಧ್ಯಕ್ಷ ಮುನಿರಾಜು, ಬೂತ್ ಕಮಿಟಿ ಅಧ್ಯಕ್ಷ ಹನುಮಣ್ಣ, ಟಿ.ಎ.ಪಿ.ಸಿ.ಎಂ.ಎಸ್ ನಾರಾಯಣಸ್ವಾಮಿ, ಲಕ್ಷ್ಮಣ್, ಮಂಡಿಬೆಲೆ ರಾಜಣ್ಣ, ಐಬಸಾಪುರ ರಾಜಣ್ಣ, ಹಾಜರಿದ್ದರು.

 

ಮಂಜು ಬೂದಿಗೆರೆ

9113813926

Leave a Reply

Your email address will not be published. Required fields are marked *

You cannot copy content of this page

error: Content is protected !!