೨ವರೆ ವರ್ಷಗಳ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದೇನೆ – ಶಾಸಕ ನಿಸರ್ಗ ನಾರಾಯಣಸ್ವಾಮಿ

೨ವರೆ ವರ್ಷಗಳ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದೇನೆ – ಶಾಸಕ ನಿಸರ್ಗ ನಾರಾಯಣಸ್ವಾಮಿ

 

ದೇವನಹಳ್ಳಿ : ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಶಾಸಕರ ಅನುಧಾನವನ್ನು ಸಂಪೂರ್ಣವಾಗಿ ಉಪಯೋಗಿಸಿ ಕ್ಷೇತ್ರದ ಸರ್ವಾಂಗಿಣ ಅಭಿವೃದ್ದಿಗೆ ಶ್ರಮಿಸಿದ್ದೇನೆ ಕೆಲವು ಅನುದಾನಗಳನ್ನು ಹಾಗು ಎರಡು ಪುರಸಭೆಗೆ ೬ಕೋಟಿ ಬಿಡುಗಡೆಗೊಳಿಸಿತ್ತು, ಆ ಸನುದಾನಗಳನ್ನು ಈಗಿನ ಸರ್ಕಾರ ಹಿಂಪಡೆದಿರುವ ಕಾರಣ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ, ಎಂದು ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ ನುಡಿದರು.

 

ಅವರು ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಆಯೋಜಿಸಿದ್ದ ದೇವನಹಳ್ಳಿ ಟೌನ್ ಕಾರ್ಯಕರ್ತರ ಸಭೆ ಹಾಗೂ ಜನತಾದಳ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು ಇಳಿವಯಸ್ಸಿನಲ್ಲಿಯು ಯುವಕರು ನಾಚುವಂತಹ ಕಾರ್ಯಕ್ರಮಗಳನ್ನು ರೂಪಿಸಿ ದುಡಿಯುತ್ತಿದ್ದಾರೆ, ಮುಂಬರುವ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆದು ಕುಮಾರಣ್ಣ ಮುಖ್ಯಮಂತ್ರಿಯಾಗುವುದು ಖಚಿತ, ನಾನು ಕ್ಷೇತ್ರಕ್ಕೆ ಮಾಡಿರುವ ಕಾಮಗಾರಿಗಳ ಬಗ್ಗೆ ನನಗೆ ಆತ್ಮತೃಪ್ತಿಯಿದೆ, ನನ್ನ ಅನುದಾನವನ್ನು ಗ್ರಾಮಗಳ ರಸ್ತೆ, ಕುಡಿಯುವ ನಿರಿನ ಘಟಕ, ಚರಂಡಿಗಳ ನಿರ್ವಹಣೆ ಹಾಗು ಹಲವಾರು ಗ್ರಾಮಾಭಿವೃದ್ದಿಗೆ ಪೂರಕವಾದ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದೇನೆ, ಇಲ್ಲಿ ಆಯೋಜಿಸಿರುವ ಜನತಾದಳದ ಕಾರ್ಯಕರ್ತರ ಸಭೆಯಲ್ಲಿ ಹೆಚ್ಚಾಗಿ ಯುವಕರು ಪಾಲ್ಗೊಂಡಿದ್ದಾರೆ ನಿವೆಲ್ಲರೂ ಮನೆಮನೆಗೆ ಹೋಗಿ ಕುಮಾರಣ್ಣನವರ ಆಡಳಿತ ವೈಖರಿ, ಮುಂದಿನ ಜನಪರ ಯೋಜನೆಗಳನ್ನು ಜನತೆಗೆ ಮುಟ್ಟಿಸಿ ಮತ್ತೆ ಈ ಕ್ಷೇತ್ರದಲ್ಲಿ ಜಾತ್ಯಾತೀತ ಜನತಾದಳದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ ಎಂದರು.

 

ಅಂಗವಿಕಲರಿಗೆ ಶಾಸಕರ ಹಾಗೂ ಇತರೆ ಅನುದಾಗಳಿಂದ ಸ್ಕೂಟರ್ ಹಾಗೂ ವಿವಿದ ಸಲಕರಣೆಗಳನ್ನು ವಿತರಿಸಲಾಗಿದೆ, ರಾಜ್ಯದಲ್ಲಿಯೇ ಅತಿ ಹೆಚ್ಚು ರೋಗಿಗಳ ಆಸ್ಪತ್ರೆ ವೆಚ್ಚಕ್ಕೆ ಮುಖ್ಯಮಂತ್ರಿಗಳ ನಿದಿಯಿಂದ ಬಿಡುಗಡೆ ಮಾಡಿಸಿಕೊಂಡು ಬಂದಿರುವುದು ನಾನೊಬ್ಬನೆ ಎಂದು ಹೇಳಿಕೊಳ್ಳಲು ಹೆಮ್ಮೆ, ಸುಮ್ಮನೆ ಟೀಕೆ ಮಾಡುವ ಬದಲು ಪಕ್ಷವನ್ನು ಬಲಪಡಿಸಲು ಪ್ರಯತ್ನಿಸಿ ಎಂದರು.

 

ಕೆಲವರು ಶಾಸಕರ ಬಗ್ಗೆ ದೂರಿದ ಹಿನ್ನೆಲೆಯಲ್ಲಿ ಸವಿವರವಾಗಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು, ಈ ಸಮಯದಲ್ಲಿ ಪಟ್ಟಣದ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶಪತ್ರವನ್ನು ವಿತರಿಸಲಾಯಿತು.

 

ಅಧ್ಯಕ್ಷತೆ ವಹಿಸಿದ್ದ ಟೌನ್ ಅಧ್ಯಕ್ಷ ಮುನಿನಂಜಪ್ಪ ಮಾತನಾಡಿ ಬರೀ ನೇಮಕಾತಿ ಪತ್ರಗಳನ್ನು ಪಡೆದು ಸುಮ್ಮನಿರಬಾರದು ಇಂದಿನಿಂದಲೇ ಪಕ್ಷದ ಸಂಘಟನೆ ಮಾಡಿ ಪ್ರತಿ ಬೂತ್‌ಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಹೊರತುಪಡಿಸಿ ೨೦ ಜನರನ್ನು ಜೆಡಿಎಸ್‌ಗೆ ಸೇರಿಸಲು ಪ್ರಯತ್ನಿಸಿ, ನಿಮ್ಮ ಮನೆಗಳ ಅಕ್ಕಪಕ್ಕದ ಮನೆಗಳ ಗೆಳೆಯರನ್ನು ಸೆಳೆಯಿರಿ, ಜೆಡಿಎಸ್‌ನ ಕಾರ್ಯವೈಖರಿ, ರೈತರ ಸಾಲಮನ್ನಾ ಸೇರಿದಂತೆ ಅನೇಕ ಕೆಲಸಗಳನ್ನು ತಿಳಿಸಿ ಎಂದರು.

 

ಟೌನ್ ಯೂತ್ ಜೆಡಿಎಸ್ ಅಧ್ಯಕ್ಷರಾಗಿ ನೇಮಕಗೊಂಡ ೨೩ನೇ ವಾರ್ಡ್ ಕೋಡಿಮಂಚೇನಹಳ್ಳಿ ಕೀರ್ತಿ ಮಾತನಾಡಿ ಪಕ್ಷ, ಶಾಸಕರು ಹಾಗೂ ತಾಲ್ಲೂಕು ಯೂತ್ ಅಧ್ಯಕ್ಷ ಭರತ್‌ಕುಮಾರ್ ನನಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಬಾಯಿಸಿ ಯುವ ಪಡೆಯನ್ನು ನಮ್ಮ ಪಕ್ಷಕ್ಕೆ ಕರೆತರಲು ಶ್ರಮಿಸುತ್ತನೆ, ಅನೇಕ ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತನಾಗಿ ದುಡಿದಿದ್ದರ ಫಲವಾಗಿ ನನಗೆ ಈ ಒಂದು ಅಧಿಕಾರ ಲಬಿಸಿದೆ ಎಂದರು.

 

ಕಾರ್ಯಕ್ರಮದಲ್ಲಿ ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ತಾಲ್ಲೂಕು ಕಾರ್ಯಾಧ್ಯಕ್ಷ ಆರ್.ಮುನೇಗೌಡ, ಪ್ರ. ಕಾರ್ಯದರ್ಶಿ ಜಿ.ಎ. ರವೀಂದ್ರ, ಕಾರ್ಯಾಧ್ಯಕ್ಷ ಆರ್. ಮುನೇಗೌಡ, ಸಿ.ಶಾಂತಮೂರ್ತಿ, ಹುರುಳುಗುರ್ಕಿ ಶ್ರೀನಿವಾಸ್, ಯುವ ಘಟಕದ ಅಧ್ಯಕ್ಷ ಭರತ್‌ಕುಮಾರ್, ವಿಜಯಕುಮಾರ್, ಮುತ್ತುರಾಜ್, ಕೆ.ವೆಂಕಟೇಶ್, ಸಾಯಿಕುಮಾರ್ ಬಾಬು, ಪುರಸಭಾ ಉಪಾಧ್ಯಕ್ಷೆ ಪುಷ್ಪಲತಾ ಲಕ್ಷ್ಮೀನಾರಾಯಣ್(ಲಚ್ಚಿ) ಸ್ಥಾಯಿಸಮಿತಿ ಅಧ್ಯಕ್ಷ ಎಸ್.ನಾಗೇಶ್, ಸುನಿಲ್‌ಕುಮಾರ್, ಮಹಿಳಾ ಘಟಕದ ಟೌನ್ ಅಧ್ಯಕ್ಷೆ ಕೃಷ್ಣವೇಣಿ, ಸೂರ್ಯಕಲಾ,ಡಾ|| ಮೂರ್ತಿ, ಶ್ರೀನಿವಾಸ್, ವಿಧ್ಯಾರ್ಥಿ ಘಟಕದ ತಾಲ್ಲೂಕು ಅಧ್ಯಕ್ಷ ಅಭಿಷೇಕ್, ಮಾಜಿ ಪುರಸಭಾ ಸದಸ್ಯರು, ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

 

ಗುರುಮೂರ್ತಿ ಬೂದಿಗೆರೆ

8861100990

Leave a Reply

Your email address will not be published. Required fields are marked *

You cannot copy content of this page

error: Content is protected !!