ಮಂಜುನಾಥ ಭೀ ಸುಣಗಾರ ರವರನ್ನು ವಿಧಾನ ಪರಿಷತ್ ಸದಸ್ಯರನಾಗಿ ಮಾಡಲು ಆಗ್ರಹ
ತುಮಕೂರು: ಮೀನುಗಾರರ ಸಮುದಾಯದ ಯುವ ನಾಯಕರಾಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮೀನುಗಾರರ ವಿಭಾಗದ ರಾಜ್ಯಾಧ್ಯಕ್ಷರಾದ ಮಂಜುನಾಥ ಭೀ ಸುಣಗಾರ ಅವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಮೀನುಗಾರರ ವಿಭಾಗದ ಜಿಲ್ಲಾಧ್ಯಕ್ಷರಾದ ಗೋವಿಂದರಾಜು ಕೆ ಎಂ ರವರು ಆಗ್ರಹಿಸಿದ್ದಾರೆ
ಮಂಜುನಾಥ ಸುಣಗಾರ ಅವರು ಹಗಲು ರಾತ್ರಿ ಎನ್ನದೇ ಸಮುದಾಯದ ಹಲವಾರು ಗುಂಪುಗಳಾಗಿ ವಿವಿಧ ಪಕ್ಷಗಳೊಡನೆ ಸಂಬಂದ ಹೊಂದಿದ್ದನ್ನು ಒಗ್ಗೂಡಿಸಿ ಕಾಂಗ್ರೆಸ್ ಪಕ್ಷದ ಪರ ಒಕ್ಕೂರಲಿನ ಧ್ವನಿಯಾಗಿ ಸಮುದಾಯವನ್ನು ಮುನ್ನೆಡಿಸಿಕೊಂಡು ಬಂದಿರುತ್ತಾರೆ. ಎಷ್ಟೋ ಮೀನುಗಾರರ ಜನಾಂಗದವರು ಕಾಂಗ್ರೆಸ್ ಪಕ್ಷವನ್ನು ಈ ಹಿಂದೆ ಬಿಟ್ಟು ಹೋದರೂ ಕೂಡ ಒಬ್ಬ ಛಲದಂಕಮಲ್ಲನಾಗಿ, ಪಕ್ಷನಿಷ್ಟನಾಗಿ, ಎಐಸಿಸಿ ನಾಯಕರುಗಳಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ, ಮುಖ್ಯಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹಾಗೂ ಜಿಲ್ಲೆಯ ಗೃಹ ಸಚಿವರು ಮಾಜಿ ಉಪಮುಖ್ಯಮಂತ್ರಿಗಳಾದ ಡಾ. ಜಿ.ಪರಮೇಶ್ವರ್ ರವರು ಹಾಗೂ ಲೋಕಸಭಾ ಸದಸ್ಯರಾದ ಟಿ ಎನ್ ಪ್ರತಾಪನ್ ರವರ ಆದೇಶದ ಮೇರೆಗೆ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಿದ್ದಾರೆ.
ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಪಕ್ಷ ಅಧಿಕಾರಕ್ಕೆ ಬರುವ ವರೆಗೂ ಪ್ರತಿ ಜಿಲ್ಲೆ ಹಾಗೂ ವಿಧಾನ ಸಭಾ ಕ್ಷೇತ್ರದಲ್ಲಿ ಕ್ರೀಯಾಶೀಲ ಸಮಿತಿಗಳನ್ನು ರಚಿಸಿ ಸಮುದಾಯದ ಜನರ ಮನವೊಲಿಸಿ ಪಕ್ಷಕ್ಕೆ ಸೇರ್ಪಡಿಸುವ ಹಾಗೂ ಪಕ್ಷಕ್ಕೆ ಶಕ್ತಿ ನೀಡುವ ಕೆಲಸ ಮಾಡಿದ್ದಾರೆ. ಹಾಗೇಯೇ ಸಮುದಾಯದ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸಗಳನ್ನು ಹಾಗೂ ಮೀನುಗಾರರ ಸಂಕಷ್ಟಗಳ ಬಗ್ಗೆ ಸ್ಥಳೀಯ ಮೀನುಗಾರರ ಬಳಿ ದಾವಿಸಿ ಇಲಾಖೆ ಅಧಿಕಾರಿಗಳಲ್ಲಿ ನ್ಯಾಯ ಕೊಡಿಸುವಲ್ಲಿ ಸಫಲರಾಗಿದ್ದಾರೆ.ಹಾಗೂ ತುಮಕೂರು ಸಮುದಾಯದ ಜನಗಳನ್ನು ಒಗ್ಗೂಡಿಸಿ ಸಂಘಟಿಸಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವಂತೆ ಮಾಡಿದ್ದಾರೆ.
ಈ ಸಂಧರ್ಭದಲ್ಲಿ ಜಿಲ್ಲಾ ಮೀನುಗಾರರ ವಿಭಾಗದ ಉಪಾಧ್ಯಕ್ಷರಾದ ನಾಗಣ್ಣ ರವರು, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಮೂರ್ತಿ, ದುರ್ಗ ಆನಂದ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಶಿವಣ್ಣ, ಶಿವರಾಜು, ಮಂಜುನಾಥ್, ಜಿನ್ನಾಗರ ಮಂಜು, ಇನ್ನೂ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು