ಜೆಡಿಯು ಪಕ್ಷದಿಂದ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣಾಗೆ ಬೆಂಬಲ ಘೋಷಣೆ.
ತುಮಕೂರು – ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣರವರಿಗೆ ಜೆಡಿಯು ಪಕ್ಷದಿಂದ ಬೆಂಬಲ ವ್ಯಕ್ತವಾಗಿದೆ.
ಇತ್ತೀಚೆಗೆ ಬಿಜೆಪಿ ತೊರೆದು ಪಕ್ಷೇತರರಾಗಿ ಕಣಕ್ಕೆ ಇಳಿದಿರುವ ಸೊಗಡು ಶಿವಣ್ಣ ರವರು ತಮ್ಮ ಕೊನೆ ಚುನಾವಣೆ ಎಂದು ಘೋಷಿಸುವ ಮೂಲಕ ಚುನಾವಣಾ ಅಖಾಡಕ್ಕೆ ಧುಮುಕಿದ್ದು ತುಮಕೂರು ನಗರದಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು ಇದರ ನಡುವೆ ಇಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ರವರು ಸಹ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣರವರಿಗೆ ಬೆಂಬಲ ಘೋಷಿಸುವ ಮೂಲಕ ಸೊಗಡು ಶಿವಣ್ಣರವರ ಬೆಂಬಲಕ್ಕೆ ನಿಂತಿದ್ದಾರೆ.
ಬೆಂಬಲ ಘೋಷಿಸುವ ಸಂಬಂಧ ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜೆಡಿಯು ರಾಜ್ಯ ಅಧ್ಯಕ್ಷ ಮಹಿಮಾ ಪಟೇಲ್ ಮಾತನಾಡಿ ಮಾಜಿ ಸಚಿವ ಸೋಗಡು ಶಿವಣ್ಣ ರವರು ಉತ್ತಮ ರಾಜಕಾರಣಿ ಇನ್ನು ಯಾವುದೇ ಭ್ರಷ್ಟಾಚಾರ ಇಲ್ಲದೆ ಉತ್ತಮ ಆಡಳಿತ ನೀಡಿದ ವ್ಯಕ್ತಿತ್ವ ಹೊಂದಿದ ಸೋಗಡು ಶಿವಣ್ಣರವರಿಗೆ ತಮ್ಮ ಪಕ್ಷದಿಂದ ಸಂಪೂರ್ಣ ಬೆಂಬಲ ಘೋಷಿಸಿದ್ದು ತುಮಕೂರು ನಗರದ ಎಲ್ಲಾ ಮತದಾರರು ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣರವರನ್ನ ಬೆಂಬಲಿಸಿ, ಈ ಬಾರಿಯ ಚುನಾವಣೆಗೆ ಜಯಶೀಲರನ್ನಾಗಿ ಮಾಡುವ ಮೂಲಕ ತುಮಕೂರು ನಗರದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ಮಾತನಾಡಿ ಇನ್ನು ಜೆಡಿಯು ಪಕ್ಷದಿಂದ ತಮಗೆ ಬೆಂಬಲ ಘೋಷಿಸಿದ ಜೆಡಿಯು ಪಕ್ಷದ ರಾಜ್ಯದ್ಯಕ್ಷ ಮಹಿಮಾ ಪಟೇಲ್ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ತಾವು ಸದಾ ಚಿರಋಣಿಯಾಗಿರುತ್ತೇನೆ ಎಂದ ಅವರು ಇನ್ನೂ ಅವರ ಬೆಂಬಲ ನನ್ನ ನಿಷ್ಕಳಂಕ ರಾಜಕಾರಣಕ್ಕೆ ಸಂದ ಪ್ರತಿಫಲ ಎಂದರು.
ಇಬ್ಬರು ನಾಯಕರಿಂದ ಬೃಹತ್ ರೋಡ್ ಶೋ.
ಇನ್ನು ಬೆಂಬಲ ಘೋಷಿಸಿದ ಬೆನ್ನಲ್ಲೇ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಹಾಗೂ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣರವರು ತುಮಕೂರು ನಗರದ ಎಸ್ಐಟಿ, ಗಂಗೋತ್ರಿನಗರ ,ಎಸ್ಎಸ್ ಪುರಂ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.
ಇನ್ನು ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ರವರ ರೋಡ್ ಶೋ ಕಾರ್ಯಕ್ರಮದಲ್ಲಿ ಸುಮಾರು 10000ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳುವ ಮೂಲಕ ಬೃಹತ್ ರೋಡ್ ಶೋ ಗೆ ಮತ್ತಷ್ಟು ಮೆರುಗು ತಂದರು.
ದಿನೇ ದಿನೇ ಹೆಚ್ಚಾಗುತ್ತಿರುವ ಬೆಂಬಲ ಘೋಷಿಸುವವರ ಸಂಖ್ಯೆ.
ಇನ್ನು ನಾಲ್ಕು ಬಾರಿ ಶಾಸಕರಾಗಿ ಪ್ರತಿನಿಧಿಸಿದ ಸೊಗಡು ಶಿವಣ್ಣರವರು ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಈ ಬಾರಿಯ ಚುನಾವಣೆಯನ್ನು ತಮ್ಮ ಸ್ವಾಭಿಮಾನದ ಚುನಾವಣೆ ಎಂದು ಘೋಷಿಸುವ ಮೂಲಕ ಎರಡು ಜೋಲೀಗೆ ಹಿಡಿಯುವ ಮೂಲಕ ನೋಟು ಹಾಗೂ ವೋಟು ಕೇಳುತ್ತಾ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದ ಸೊಗಡು ಶಿವಣ್ಣರವರಿಗೆ ತುಮಕೂರು ನಗರದಲ್ಲಿ ದಿನೇ ದಿನೇ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು ಇದರ ಬೆನ್ನಲ್ಲೇ ಇಂದು ತುಮಕೂರು ನಗರದ ವೀರಶೈವ ಸಮಾಜದ ಮುಖಂಡರು ಹಾಗೂ ಹಿತೈಷಿಗಳು ಸಭೆ ನಡೆಸಿ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣರವರಿಗೆ ಬೆಂಬಲ ಘೋಷಿಸಿ ಅಚ್ಚರಿ ತಂದಿದ್ದಾರೆ