ಮಾಜಿ ಶಾಸಕ ಸುರೇಶ್ ಗೌಡ ಆರೋಪವನ್ನು ಅಧಿವೇಶನದಲ್ಲಿ ಚರ್ಚಿಸಲು ನಿರ್ಧಾರ_ಶಾಸಕ ಡಿ. ಸಿ ಗೌರಿಶಂಕರ್.
ತುಮಕೂರು_ತುಮಕೂರು ಗ್ರಾಮಾಂತರ ಮಾಜಿ ಶಾಸಕ ಸುರೇಶ್ ಗೌಡ ರವರ ಸುಪಾರಿ ಸಂಚು ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಸುರೇಶ್ ಗೌಡ ರವರು ಕ್ಷೇತ್ರದ ಜನತೆಯ ಮೇಲೆ ಗೌರವ ಸ್ವಾಭಿಮಾನ ಇದ್ದರೆ ಸ್ವತಃ ಅವರೇ ಮುಖ್ಯಮಂತ್ರಿರವರ ಮೂಲಕ ಸಿಬಿಐ ತನಿಖೆಗೆ ಒತ್ತಾಯಿಸಲಿ ಎಂದು ಮಾಜಿ ಶಾಸಕ ಸುರೇಶ್ ಗೌಡ ರವರಿಗೆ ಹಾಲಿ ಶಾಸಕ ಡಿ.ಸಿ ಗೌರಿಶಂಕರ್ ಅವರು ಸವಾಲು ಹಾಕಿದ್ದಾರೆ.
ತುಮಕೂರಿನ ಬಳ್ಳಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು ಮಾಜಿ ಶಾಸಕ ಸುರೇಶ್ ಗೌಡ ರವರ ಹೇಳಿಕೆ ಖಂಡನೆಯ ಇನ್ನು ಅವರ ಆರೋಪವನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಲು ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ತಮ್ಮ ಕಾರ್ಯಕರ್ತರೊಂದಿಗೆ ಸಹ ಚರ್ಚಿಸಿದ್ದು ಈ ವೇಳೆ ಮಾಜಿ ಶಾಸಕರೇ ಆರೋಪವನ್ನು ತನ್ನ ಮೇಲೆ ಹೊರಿಸಿ ತನ್ನನ್ನೆ ಕೊಲೆ ಮಾಡುವ ಸಂಚನ್ನು ಹೂಡಿದ್ದಾರೆ ಎನ್ನುವ ಅನುಮಾನ ಸಹ ತಮಗೆ ವ್ಯಕ್ತವಾಗಿದೆ ಎಂದಿದ್ದಾರೆ.
ಇನ್ನು ಮಾಜಿ ಶಾಸಕ ಸುರೇಶ್ ಗೌಡರ ಆರೋಪದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳಿಗೂ ಸಹ ದೂರು ನೀಡಿದ್ದು ಈ ಮೂಲಕ ತನಗೂ ಹಾಗೂ ತಮ್ಮ ಕಾರ್ಯಕರ್ತರಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ಇನ್ನು ತನಿಖೆಯ ಮೂಲಕ ಸತ್ಯತೆ ಹೊರಬಂದು ಸಾರ್ವಜನಿಕರಿಗೆ ಸತ್ಯ ತಿಳಿಯಬೇಕು ಎಂದ ಅವರು ಇನ್ನೂ ಮಾಜಿ ಶಾಸಕರಿಗೆ ಕ್ಷೇತ್ರದಲ್ಲಿ ಸೋಲಿನ ಭಯ ಕಾಡುತ್ತಿದೆ ಆ ಮೂಲಕ ಡ್ರಾಮಾ ಮಾಡುತ್ತಿದ್ದಾರೆ .
ಇನ್ನು ಮಾಜಿ ಶಾಸಕರು ಕ್ಷೇತ್ರದಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ಈ ರೀತಿ ಆರೋಪ ಮಾಡಿದ್ದು ಇನ್ನೂ ಅವರ ಕಾರ್ಯಕ್ರಮದಲ್ಲಿ ಜನರು ಸೇರುತ್ತಿಲ್ಲ ಎನ್ನುವ ಕಾರಣವನ್ನು ಇಟ್ಟುಕೊಂಡು ಗಿಮಿಕ್ ಮಾಡುವ ಉದ್ದೇಶದಿಂದ ನಾಲ್ಕುವರೆ ವರ್ಷದಿಂದ ಕ್ಷೇತ್ರದಲ್ಲಿ ಕಾಣದ ಮಾಜಿ ಶಾಸಕರು ಚುನಾವಣೆ ಆರು ತಿಂಗಳು ಬಾಕಿ ಇದ್ದ ಬೆನ್ನಲ್ಲೇ ಕ್ಷೇತ್ರದಲ್ಲಿ ಗರಿ ಗರಿ ಬಟ್ಟೆ ಹಾಕಿಕೊಂಡು ಕಾಣಿಸಿಕೊಳ್ಳುತ್ತಿದ್ದಾರೆ ಎಂದರು.
ಇನ್ನು ಕೊರೋನಾ ಸಂದರ್ಭದಲ್ಲಿ ಕ್ಷೇತ್ರದ ಜನರು ಕಷ್ಟದಲ್ಲಿದ್ದಾಗ ಕಾಣಿಸಿಕೊಳ್ಳದ ಶಾಸಕರು ಆಗ ಎಲ್ಲಿ ಹೋಗಿದ್ದರು ಎಂದು ಪರೋಕ್ಷವಾಗಿ ಮಾಜಿ ಶಾಸಕರಿಗೆ ಮಾತಿನ ಚಾಟಿ ಬೀಸಿದ್ದಾರೆ.
ವರದಿ_ ಮಾರುತಿ ಪ್ರಸಾದ್ ತುಮಕೂರು