ನಕಲಿ ದಾಖಲೆಗಳ ಸೃಷ್ಟಿಗಾಗಿ ಅಧಿಕಾರಿಗಳನ್ನು ಹೆದರಿಸುವ ದಲಿತ ಮುಖಂಡ…..?

ನಕಲಿ ದಾಖಲೆಗಳ ಸೃಷ್ಟಿಗಾಗಿ ಅಧಿಕಾರಿಗಳನ್ನು ಹೆದರಿಸುವ ದಲಿತ ಮುಖಂಡ…..?

 

 

ತುಮಕೂರು_ಇಂದಿನ ದಿನದಲ್ಲಿ ದಲಿತರು ತಮ್ಮ ಹಕ್ಕುಗಳಿಗಾಗಿ ಸಾಕಷ್ಟು ಹೋರಾಟ ಮಾಡಿ ತಮಗೆ ಸಿಗಬೇಕಾದ ಸೌಲಭ್ಯಗಳನ್ನು ,ತಮಗೆ ಸಿಗಬೇಕಾದ ನ್ಯಾಯ ಹಾಗೂ ಹಕ್ಕುಗಳ ಬಗ್ಗೆ ಸಾಕಷ್ಟು ಹೋರಾಟ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

 

 

ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಹಾಗೂ ದೇಶದಲ್ಲಿ ಹಲವು ದಲಿತ ಪರ ಸಂಘಟನೆಗಳು ಸಾಕಷ್ಟು ಹೋರಾಟಗಳನ್ನು ಮಾಡುವ ಮೂಲಕ ದಲಿತರ ಹಕ್ಕುಗಳು ಹಾಗೂ ನ್ಯಾಯಕ್ಕಾಗಿ ಸಾಕಷ್ಟು ಹೋರಾಟಗಳು ನಡೆಯುತ್ತಿವೆ ಇನ್ನೂ ದಲಿತರ ಪರವಾಗಿ ಸಾಕಷ್ಟು ಮುಖಂಡರು ನ್ಯಾಯಯುತವಾಗಿ ದಲಿತರಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.

 

ಅದರಂತೆ ತುಮಕೂರು ಜಿಲ್ಲೆ ಹಾಗೂ ವಿವಿಧ ತಾಲೂಕುಗಳಲ್ಲಿ ಸಾಕಷ್ಟು ದಲಿತ ಸಂಘಟನೆಗಳು ಹಾಗೂ ದಲಿತ ಮುಖಂಡರು ಹಗಲಿರುಳು ಹೋರಾಟ ಮಾಡುತ್ತಿದ್ದಾರೆ ಈ ಮೂಲಕ ಪರಿಶಿಷ್ಟ ಜಾತಿ ಹಾಗೂ ಪಂಗಡದ ಪಂಗಡದ ಜನಾಂಗಕ್ಕಾಗಿ ಸಾಕಷ್ಟು ಹೋರಾಟಗಳನ್ನು ಮಾಡುವ ಮೂಲಕ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ ಆದರೆ ತುಮಕೂರು ನಗರದಲ್ಲಿ ಪುಡಾರಿಯೋಬ್ಬರು ತಾನು ದಲಿತ ಮುಖಂಡ ಹಾಗೂ ಅಟ್ರಾಸಿಟಿ ಕಮಿಟಿಯ ಸದಸ್ಯ ಎಂದು ಹೇಳಿಕೊಳ್ಳುತ್ತಾ ಹಲವು ಇಲಾಖೆಯ ಅಧಿಕಾರಿಗಳನ್ನು ಹೆದರಿಸಿ ಬೆದರಿಸಿ ತನ್ನ ವೈಯಕ್ತಿಕ ಲಾಭಕ್ಕಾಗಿ ದಲಿತ ಕುಟುಂಬಗಳಿಗೆ ಅನ್ಯಾಯ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು.

 

 

 

ಇದಕ್ಕೆ ಪುಷ್ಟಿ ನೀಡುವಂತೆ ಎಂಬಂತೆ ಪರಿಶಿಷ್ಟ ಜಾತಿಯ ಕುಟುಂಬದ ಹೆಸರಿನಲ್ಲಿ ನಕಲಿ ವಂಶವೃಕ್ಷವನ್ನು ತಯಾರಿಸಲು ತುಮಕೂರಿನ ತಾಲೂಕು ಕಚೇರಿ ಆವರಣದಲ್ಲಿರುವ ಕೆಲವು ಬ್ರೋಕರ್ ಗಳ ಮೂಲಕ ನಕಲಿ ವಂಶವೃಕ್ಷ ವನ್ನು ಅನುಮೋದನೆಗಾಗಿ ತುಮಕೂರಿನ ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರೊಬ್ಬರಿಂದ ತಾನು ಅಟ್ರಾಸಿಟಿ ಕಮಿಟಿಯ ಸದಸ್ಯನಾಗಿದ್ದು ಕೂಡಲೇ ತಾವು ಸಲ್ಲಿಸಿರುವ ಅರ್ಜಿಯನ್ನು ಕೂಡಲೇ ವರದಿ ಹಾಕಿ ನಮಗೆ ವಂಶವೃಕ್ಷವನ್ನು ಮಾಡಿಕೊಡಿ ಎಂದು ತುಮಕೂರಿನ ತಹಸೀಲ್ದಾರ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆಲವು ಅಧಿಕಾರಿಗಳನ್ನು ಹೆದರಿಸಿ ಧಮ್ಕಿ ಹಾಕುತ್ತಿರುವುದು ಗಮನಕ್ಕೆ ಬಂದಿದೆ.

 

 

ಇನ್ನು ಈ ನಕಲಿ ದಲಿತ ಮುಖಂಡ ವಂಶವೃಕ್ಷ ಮಾಡಿಸಲು ಅಧಿಕಾರಿಗಳಿಗೆ ಹೆದರಿಸುತ್ತಿದ್ದನೆ ಎಂಬುದು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿ .

 

ಹಲವಾರು ಅಧಿಕಾರಿಗಳನ್ನು ಹೆದರಿಸಿ ಬೆದರಿಸಿ ನಕಲಿ ವಂಶವೃಕ್ಷ ಗಳನ್ನು ಸೃಷ್ಟಿ ಮಾಡವುದು ಈತನ ಉದ್ದೇಶ….?

 

 

ಇನ್ನು ತನಗೆ ಸಂಬಂಧಪಡದೆ ಇದ್ದರು ಸಹ ವಿಶೇಷ ಕಾಳಜಿ ವಹಿಸಿ ನಕಲಿ ವಂಶವೃಕ್ಷವನ್ನು ತಯಾರು ಮಾಡಿ ಹಲವು ಕುಟುಂಬಕ್ಕೆ ಅನ್ಯಾಯ ಮಾಡುವುದು ಕಂಡುಬಂದಿದ್ದು ಇಂತಹ ನಕಲಿ ದಲಿತ ಮುಖಂಡ ಎಂದು ಹೇಳಿಕೊಳ್ಳುತ್ತಾ ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳಿಗೆ ಹೆದರಿಸಿ ಬೆಧರಿಸಿ ತೊಂದರೆ ಕೊಡುವುದು ಎಷ್ಟು ಸರಿ.

 

 

ತಾನೊಬ್ಬ SC/ST ಅಟ್ರಾಸಿಟಿ ಕಮಿಟಿಯ ಸದಸ್ಯ ತುಮಕೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳನ್ನು ಬಿಟ್ಟರೆ ಜಿಲ್ಲೆಯಲ್ಲಿ ದಲಿತರ ಪರವಾಗಿ ನಿಲ್ಲುವುದು ನಾನೇ ನನ್ನನ್ನು ಬಿಟ್ಟರೆ ಬೇರೆ ಯಾರು ದಲಿತರ ರಕ್ಷಣೆಗೆ ಮುಂದಾಗಲು ಸಾಧ್ಯವಿಲ್ಲ ಎಂದು ಬೀಗುತ್ತಾ ನಕಲಿ ದಾಖಲಾತಿಗಳ ಶೃಷ್ಟಿಯಲಿ ಈತ ನಿರತನಾಗಿದ್ದಾನೆ.

 

 

ಇನ್ನು ದಲಿತರಿಗೆ ಅನ್ಯಾಯ ವಾದಾಗ ಅವುಗಳ ರಕ್ಷಣೆಗಾಗಿ ಸರ್ಕಾರದ ನಿಯಮಾವಳಿ ಪ್ರಕಾರ ಎಸ್ಸಿಎಸ್ಟಿ ಅಟ್ರಾಸಿಟಿ ಕಮಿಟಿ ರಚಿಸಿ ಅವುಗಳ ಮೂಲಕ ದಲಿತರ ಕುಂದು ಕೊರತೆಗಳನ್ನು ನೀಗಿಸುವ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಇರುವ ಅಟ್ರಾಸಿಟಿ ಕಮಿಟಿ ಹೆಸರನ್ನು ದುರುಪಯೋಗಪಡಿಸಿಕೊಂಡು ದಲಿತರಿಗೆ ಅನ್ಯಾಯ ಮಾಡುತ್ತಾ ಇರುವ ಇಂತಹ ಮುಖಂಡರಿಗೆ ಜಿಲ್ಲಾಡಳಿತ ಮಣೆಹಾಕುತ್ತಿರುವುದು ಸರಿಯಾದ ಕ್ರಮವಲ್ಲ ಎಂಬುದು ಕೆಲವು ದಲಿತ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

 

 

ಹಾಗಾಗಿ ಕೂಡಲೇ ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಲಾಗಳಿ ತಾಲ್ಲೂಕು ದಂಡಾಧಿಕಾರಿಗಳಗಲಿ, ಸಹಾಯಕ ಕಮಿಷನರ್ ಆಗಲಿ ಇಂತಹ ನಕಲಿ ದಲಿತ ಮುಖಂಡರು ಹಾಗೂ ಅಟ್ರಾಸಿಟಿ ಕಮಿಟಿಯ ಸದಸ್ಯರು ಎಂದು ಹೇಳಿಕೊಳ್ಳುತ್ತಾ ದಲಿತರಿಗೆ ಅನ್ಯಾಯ ಮಾಡುತ್ತಿರುವ ಇಂತಹ ನಕಲಿ ಮುಖಂಡರಿಗೆ ಇನ್ನಾದರೂ ಜಿಲ್ಲಾಡಳಿತ ಕಡಿವಾಣ ಹಾಕಬಹುದಾ…..?????? ಕಾದು ನೋಡಬೇಕು.

 

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!