ತುಮಕೂರು.
ಸಿದ್ದಗಂಗಾ ಮಠಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ.
ಶ್ರೀಗಳಿಗೆ ಕುಟುಂಬ ಕಾರ್ಯಕ್ರಮದ ಆಮಂತ್ರಣ ನೀಡಲಿಕ್ಕೆ ಬಂದಿದ್ದೇನೆ.
ಹಾಗೇಯೆ ಶ್ರೀಗಳ ಆಶಿರ್ವಾದ ಪಡೆಯಲು ಬಂದಿರುವುದಾಗಿ ತಿಳಿಸಿದ ಡಿ.ಕೆ.ಶಿ.
*20 ತಾರೀಖು ರೈತರ ಪರವಾಗಿ ಕಾಂಗ್ರೆಸ್ ಪಕ್ಷ ಬೆಂಬಲ ವ್ಯಕ್ತಪಡಿಸುತ್ತೇವೆ*
ಫ್ರೀಡಂ ಪಾರ್ಕ್‌ನ ಸಂಗುಳ್ಳಿ ರಾಯಣ್ಣ ಸರ್ಕಲ್ ನಿಂದ ರಾಜಭವನಕ್ಕೆ ಚಲೋ ಹಮ್ಮಿಕೊಂಡಿದ್ದೇವೆ.
ಇಡೀ ರಾಷ್ಟ್ರದಲ್ಲಿ ಇಂತ ದೊಡ್ಡ ಹೋರಾಟ ನಡೆದಿರಲಿಲ್ಲ.
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ, ಕಮಿಟಿ ಮಾಡಿರೋದನ್ನ ರೈತರು ಧಿಕ್ಕರಿಸಿದಾರೆ.
ನಮಗೆ ಅವಶ್ಯಕತೆ ಇಲ್ಲ ಎಂದು ಹೋರಾಟ ಮುಂದುವರೆಸಿದ್ದಾರೆ.
ಇದು ರೈತ ಸಮುದಾಯಕ್ಕೆ, ದೇಶಕ್ಕೆ ಮರಣ ಶಾಸನ,
ಇದನ್ನ ವಾಪಸ್ ಪಡೆಯಬೇಕು ಎಂದು ನಾವೆಲ್ಲಾ ಹೋರಾಟ ಮಾಡ್ತೇವೆ.
ರಾಜ್ಯದ ಆಡಳಿತದಲ್ಲಿ ಅನ್ಯಾಯಗಳು ನಡೆಯುತ್ತಿದೆ.
ಬೆಲೆ ಏರಿಕೆಗಳು, ಪೆಟ್ರೋಲ್ ಡಿಸೆಲ್ ಪ್ರಾಪರ್ಟಿ ಟಾಕ್ಸ್ ಕೊರೊನಾ ಸಂದರ್ಭದಲ್ಲಿ ಹೆಚ್ಚು ಮಾಡಿರೋದು ಗಮನಸಿದ್ದೇವೆ.
ಸ್ವಂತ ಅಜೆಂಡಾ ಮೇಲೆ ಸರ್ಕಾರಗಳು ನಡೀತಿದೆ.
ಸಾರ್ವಜನಿಕರ ಅಭಿಪ್ರಾಯದಂತೆ ನಡೀತಿಲ್ಲ,
*ಅವರು ಏನ್ ಬೇಕಾದ್ರು ಹೇಳಿಕೊಳ್ಳಲಿ ಕಾಂಗ್ರೆಸ್ ನ್ನ ಏನೂ ಮಾಡೋಕ್ ಆಗಲ್ಲ.*
ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ
ಅಮಿತ್ ಷಾ ವೇದಿಕೆಯಲ್ಲಿ ಕನ್ನಡ ಮಾಯ ವಿಚಾರ
ಪ್ರಾದೇಶಿಕ ಸಂಸ್ಕೃತಿಗಳು ಭಾಷೆ ಯಾವುದೂ ಬೇಕಿಲ್ಲ
ನಮ್ಮ ಎಂಪಿಗಳು ಅಧಿಕಾರಕ್ಕಾಗಿ ಬಾಯಿ ಮುಚ್ಚಿಕೊಂಡಿದ್ದಾರೆ.
ಸಿದ್ದಗಂಗಾ ಮಠದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ.