ದೇವನಹಳ್ಳಿ : ಕವಿಡ್ ಕೋ ವ್ಯಾಕ್ಷಿನ್ ಪಡೆದು ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಕೋರೋನಾದಿಂದ ದೂರವಿರಿ ಎಂದು ಕೇಂದ್ರ ಸರ್ಕಾರದ ಮಾಜಿ ಸಚಿವ, ಕೋಲಾರ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ಅವರು ಪಟ್ಟಣದ ಸಾರ್ವಜಿನಿಕ ಆಸ್ಪತ್ರೆಯ ಕೋವಿಡ್-೧೯ ಚಿಕಿತ್ಸಾ ಆವರಣದಲ್ಲಿ ದಂಪತಿ ಸಮೇತ ಆಗಮಿಸಿ ವ್ಯಾಕ್ಸಿನ್ ಪಡೆದು ಮಾತನಾಡಿ ೬೦ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಈ ವ್ಯಾಕ್ಸಿನ್ ಪಡೆದು ಕೋರಾನಾ ಮುಕ್ತರಾಗಿ, ಜಿಲ್ಲೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಾದ ದೇವನಹಳ್ಳಿಯ ಆಕಾಶ್ ಹಾಗೂ ಹೊಸಕೋಟೆಯ ಎಂ.ವಿ.ಜೆ, ಮೆಡಿಕಲ್ ಕಾಲೇಜು ಹಾಗು ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ನೀಡಲಾಗುತ್ತಿದ್ದು, ೬೦ವರ್ಷ ಮೇಲ್ಪಟ್ಟವರು ತಮ್ಮ ಹೆಸರನ್ನು ನೋಂದಾವಣೆ ಮಾಡಿಸಿ ಅಥವಾ ಆದಾರ್ ಇತರೆ ಗುರುತಿನ ಚೀಟಿಯನ್ನು ತಂದು ಅಲ್ಲಿಯೇ ನೋಂದಾಯಿಸಿ ವ್ಯಾಕ್ಸಿನ್ ಪಡೆಯಿರಿ ಎಂದರು.
ಈ ಸಮಯದಲ್ಲಿ ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ಕೆ.ಹೆಚ್.ಮುನಿಯಪ್ಪ ಮಾತನಾಡಿ ನಾನು ಈ ದಿನ ವ್ಯಾಕ್ಸಿನ್ ಪಡೆದಿದ್ದು ಯಾವುದೇ ಅಡ್ಡಪರಿಣಾಮ ಬೀರಲಿಲ್ಲ ಇದೊಂದು ಸಂಜೀವಿನಿಯಾಗಿದ್ದು ಪ್ರತಿಯೊಬ್ಬರೂ ಇದನ್ನು ತೆಗೆದುಕೊಳ್ಳಿ ಜಿಲ್ಲಾ ಆರೋಗ್ಯ ಇಲಾಖೆ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂ.ಗ್ರಾ.ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಸಿಬ್ಬಂದಿ ಸಾರ್ವಜನಿಕರಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದು, ಯಾವುದೇ ಭಯ ಬೀಳದೇ ಪ್ರತಿಯೊಬ್ಬರೂ ಕೋವಿಡ್ ಲಸಿಕೆ ತೆಗೆದುಕೊಳ್ಳಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ರಾಜ್ಯ ಬಿಜೆಪಿ ಸರ್ಕಾರ ಬಹಳ ದಿನ ಉಳಿಯೋದಿಲ್ಲ ಸಿ.ಎಂ ಬಿಎಸ್ಬೈ ಇಳಿಸುವ ಹುನ್ನಾರ ನಡೆಯುತ್ತಿದೆ ಈ ಬೆಳವಣಿಗೆಯಾದ್ರೆ ಶೀಘ್ರದಲ್ಲೆ ಸರ್ಕಾರ ಪತನವಾಗಲಿದೆ ಕಾಂಗ್ರೆಸ್‌ನಿಂದ ಹೋಗಿ ಸಚಿವರಾದವರಿಗೆ ಕಿರುಕುಳ ಆರ್ ಎಸ್ ಎಸ್ ನಿಂದಲೆ ಸಚಿವರ ವಿರುದ್ದ ಷಡ್ಯಂತ್ರ ನಡೆಯುತ್ತಿದೆ ಅವರ ಅಭಿವೃದ್ದಿ ಒಳ್ಳೆ ಕೆಲಸ ಸಹಿಸದೆ ಈ ರೀತಿ ಮಾಡ್ತಿದ್ದಾರೆ ಕಾಂಗ್ರೆಸ್ ಬಿಟ್ಟು ಹೋದವರಿಗೆ ಬುದ್ದಿ ಇರಬೇಕಿತ್ತು, ಪ್ರಸಕ್ತ ರಾಜಕೀಯ ಬೆಳವಣಿಗೆ ಗಮನಿಸಿದ್ರೆ ಸರ್ಕಾರ ಉಳಿಯಲ್ಲ ಎಂದರು
ಈ ಸಮಯದಲ್ಲಿ ಅಣ್ಣೇಶ್ವರದ ಕಾಂತರಾಜು, ಮುನಿರಾಜು, ಕೋಟೆ ಶ್ರೀನಿವಾಸ್, ಸರ್ಪಬೂಷಣ, ಆಸ್ಪತ್ರೆಯ ಆರೋಗ್ಯಾಧಿಕಾರಿ ಆರೋಗ್ಯ ಸಿಬ್ಬಂದಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಚಿತ್ರಸುದ್ದಿ : ಕೋವಿಡ್ ಲಸಿಕೆ ಪಡೆದ ಕೇಂದ್ರ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ದಂಪತಿಗಳು
ಗುರುಮೂರ್ತಿ ಬೂದಿಗೆರೆ
8861100990