ತುಮಕೂರು ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಕೋರನ ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿತ್ತು ಇದರಿಂದ ಸಾರ್ವಜನಿಕರು ಸೇರಿದಂತೆ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಜಿಲ್ಲೆಯ ಜನರ ನೆಮ್ಮದಿಯನ್ನು ಕಸಿದಿದ್ದ ಸೋಂಕು ದಿನೇದಿನೇ ಇಳಿಕೆ ಕಾಣುವ ಮೂಲಕ ಸಾರ್ವಜನಿಕರು ಸೇರಿದಂತೆ ಜಿಲ್ಲೆಯ ಜನರಿಗೆ ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ತಿಂಗಳು ಸತತವಾಗಿ 2000 ರ ಗಡಿ ದಾಟುತ್ತಿದ್ದ ಕೊರೊನಾ ಸೋಂಕು ಈಗ 700ರ ಗಡಿಗೆ ಬಂದಿದ್ದು ಜಿಲ್ಲೆಯ ಜನರ ಪಾಲಿಗೆ ವರದಾನವಾಗಿದೆ.
ಇನ್ನು ಜಿಲ್ಲಾಡಳಿತ ,ಆರೋಗ್ಯ ಸಿಬ್ಬಂದಿಗಳು ,ಪೊಲೀಸ್ ಸಿಬ್ಬಂದಿಗಳು, ಇತರ ಇಲಾಖೆಯ ಸಿಬ್ಬಂದಿಗಳು ಸತತ ಪ್ರಯತ್ನದಿಂದ ಜಿಲ್ಲೆಯಲ್ಲಿ ಕೊರನ ಸೋಂಕು ಇಳಿಕೆ ಕಾಣುತ್ತಿದೆ. ತುಮಕೂರು ತಾಲ್ಲೂಕಿನಲ್ಲಿ ಹೆಚ್ಚು ಸೋಂಕಿತರು ಕಂಡುಬರುತ್ತಿದ್ದರು ಆದರೆ ದಿನ ದಿನ ತುಮಕೂರು ತಾಲೂಕಿನಲ್ಲೂ ಸಹ ಸೋಂಕು ಇಳಿಕೆ ಕಾಣುತ್ತಿದೆ.
ಹಾಗೆಂದಮಾತ್ರಕ್ಕೆ ಸಾರ್ವಜನಿಕರು ಮೈಮರೆತರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸೋಂಕು ಹೆಚ್ಚಾಗುವ ಲಕ್ಷಣಗಳು ಕಂಡು ಬರುತ್ತಿದೆ ಹಾಗಾಗಿ ಸಾರ್ವಜನಿಕರು ಇನ್ನೂ ಕೆಲವು ದಿನಗಳು ಎಚ್ಚರಿಕೆಯಿಂದಿರ ಬೇಕಾಗುತ್ತದೆ. ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ರೋಗಲಕ್ಷಣಗಳು ಬಂದಲ್ಲಿ ಕೂಡಲೇ ವೈದ್ಯರುಗಳ ಬಳಿ ಪರೀಕ್ಷೆಗೆ ಒಳಪಡಬೇಕು ಇಲ್ಲದಿದ್ದರೆ ಮತ್ತೆ ಸೋಂಕು ವಕ್ಕರಿಸದಲ್ಲಿ ಯಾವುದೇ ಅನುಮಾನವಿಲ್ಲ.