ಗ್ಯಾನ್‌ವಾಪಿ ಮಸೀದಿಯ ಒಂದು ಭಾಗವನ್ನು ಮುಚ್ಚುವ ಕೋರ್ಟ್ ಆದೇಶ – ಆರಾಧನಾ ಸ್ಥಳಗಳ ಕಾಯ್ದೆ 1991ರ ಸ್ಪಷ್ಟ ಉಲ್ಲಂಘನೆಯಾಗಿದೆ: ಎಸ್.ಡಿ.ಪಿ.ಐ ಆರೋಪ.

ಗ್ಯಾನ್‌ವಾಪಿ ಮಸೀದಿಯ ಒಂದು ಭಾಗವನ್ನು ಮುಚ್ಚುವ ಕೋರ್ಟ್ ಆದೇಶ – ಆರಾಧನಾ ಸ್ಥಳಗಳ ಕಾಯ್ದೆ 1991ರ ಸ್ಪಷ್ಟ ಉಲ್ಲಂಘನೆಯಾಗಿದೆ: ಎಸ್.ಡಿ.ಪಿ.ಐ ಆರೋಪ.

ತುಮಕೂರು_ ವಾರಣಾಸಿಯ ಗ್ಯಾನ್‌ವಾಪಿ ಮಸೀದಿಯ ಒಂದು ಭಾಗವನ್ನು ಮುಚ್ಚಲು ಗೌರವಾನ್ವಿತ ವಾರಣಾಸಿ ನ್ಯಾಯಾಲಯ ನೀಡಿರುವ ಆದೇಶವು, ಆರಾಧನಾ ಸ್ಥಳಗಳ ಕಾಯ್ದೆ 1991ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆರೋಪಿಸಿದೆ.

 

ತುಮಕೂರಿನ ಸದಾಶಿವನಗರದಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಕಾರ್ಯಕರ್ತರು ವಾರಣಾಸಿಯ ಗ್ಯನ್ನವ್ಯಾಪಿ ಮಸೀದಿಯ ಹಿಂದೆ ದೊಡ್ಡ ಶಡ್ಯಂತ್ರ ನಡೆದಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

 

ಆರಾಧನಾ ಸ್ಥಳದ ಧಾರ್ಮಿಕ ಸ್ವರೂಪವು ಆಗಸ್ಟ್ 15, 1947 ರಂದು ಇದ್ದಂತೆಯೇ ಇರಬೇಕು ಹಾಗೂ ಯಾವುದೇ ಧಾರ್ಮಿಕ ಪಂಥದ ಪವಿತ್ರ ಸ್ಥಳವನ್ನು ಯಾರೂ ಇನ್ನೊಂದು ಪಂಗಡ ಅಥವಾ ವಿಭಾಗಕ್ಕೆ ಪರಿವರ್ತಿಸಬಾರದು ಎಂದು 1991ರ ಆರಾಧನಾ ಸ್ಥಳಗಳ ಕಾಯ್ದೆ ಪ್ರತಿಪಾದಿಸುತ್ತದೆ ಎಂದ ಪ್ರತಿಭಟನಾಕಾರರು.

 

ಗ್ಯಾನ್‌ವಾಪಿ ಮಸೀದಿಗೆ ಸಂಬಂಧಿಸಿದ ವಿವಾದ ಹೊಸದೇನಲ್ಲ, ಆದರೆ ಇತರ ಧಾರ್ಮಿಕ ವಲಯಗಳು, ವಿಶೇಷವಾಗಿ ಮುಸ್ಲಿಮರು ನಿರ್ಮಿಸಿದ ಮತ್ತು ಅವರ ಒಡೆತನದಲ್ಲಿರುವ ಧಾರ್ಮಿಕ ಆರಾಧನಾ ಸ್ಥಳಗಳು ಮತ್ತು ಐತಿಹಾಸಿಕ ಸ್ಮಾರಕಗಳ ಮಾಲಿಕತ್ವವನ್ನು ನಾಶಪಡಿಸುವುದು ಅಥವಾ ಕಸಿದುಕೊಳ್ಳುವುದು ಆರ್.ಎಸ್.ಎಸ್. ಕಾರ್ಯಸೂಚಿಯ ಭಾಗವಾಗಿದೆ. ಸ್ವತಃ ಅವರೇ ಹೇಳಿಕೊಂಡಂತೆ, ಮುಸ್ಲಿಮರಿಂದ ವಶಪಡಿಸಿಕೊಳ್ಳಲು ಅಥವಾ ನೆಲಸಮಗೊಳಿಸಲು 3,000 ಮಸೀದಿಗಳ ಪಟ್ಟಿಯನ್ನು ತಯಾರುಗೊಳಿಸಿದ್ದಾರೆ. ಗ್ಯಾನ್‌ವಾಪಿ ಈ ಪಟ್ಟಿಯಲ್ಲಿನ ಎರಡನೇ ಮಸೀದಿಯಾಗಿದೆ. ಬಾಬರಿ ಮಸೀದಿ ಮೊದಲನೆಯದು ಎಂದು ಎಸ್. ಡಿ. ಪಿ ಐ  ಕಾರ್ಯಕರ್ತರು ಆರೋಪಿಸಿದರು.

 

ಬಾಬರಿ ಮಸೀದಿ ನೆಲಸಮಗೊಳಿಸಿದ ಅದೇ ಮಾದರಿಯನ್ನು ಗ್ಯಾನ್‌ವಾಪಿ ಮಸೀದಿಯ ವಿಷಯದಲ್ಲೂ ಅನುಸರಿಸಲಾಗುತ್ತಿದೆ. ‘ವಿದೇಶಿ’ ಧರ್ಮಗಳು ಮತ್ತು ಅವುಗಳ ಸಂಕೇತಗಳನ್ನು ನಾಶಪಡಿಸುವುದು ಮನುವಾದಿ ಹಿಂದುತ್ವ ರಾಷ್ಟ್ರದೆಡೆಗಿನ ಪ್ರಯಾಣದ ಪ್ರಮುಖ ಉದ್ದೇಶವಾಗಿದೆ. ಆದರೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ದೇಶದ ಜಾತ್ಯಾತೀತ ಜನರ ಬೆಂಬಲದೊಂದಿಗೆ, ದೇಶದಲ್ಲಿ ಮಸೀದಿ ಧ್ವಂಸ ಮತ್ತು ಶಾಂತಿ ಕದಡುವ ಯಾವುದೇ ಕೃತ್ಯಗಳನ್ನು ಸೋಲಿಸಲಿದೆ.

 

ತೀವ್ರ ಬಲಪಂಥೀಯ ಹಿಂದುತ್ವ ಫ್ಯಾಸಿಸ್ಟರು 2014 ರಲ್ಲಿ ದೇಶದ ಅಧಿಕಾರ ಚುಕ್ಕಾಣಿ ಹಿಡಿದಂದಿನಿಂದ ದೇಶದ ಸಂವಿಧಾನವನ್ನು ಮೂಲೆಗುಂಪಾಗಿಸಿದ್ದಾರೆ. 1991ರ ಆರಾಧನಾ ಸ್ಥಳಗಳ ಅಧಿನಿಯಮದಲ್ಲಿ ಕಲ್ಪಿಸಿದಂತೆ, ಮುಸ್ಲಿಂ ಆರಾಧನಾ ಸ್ಥಳಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರದಲ್ಲಿರುವ ತೀವ್ರಗಾಮಿಗಳು ಧನಾತ್ಮಕವಾಗಿ ಏನನ್ನಾದರೂ ಮಾಡುತ್ತಾರೆಂದು ನಿರೀಕ್ಷಿಸುವುದು ಮೂರ್ಖತನವಾಗಿದೆ. ಆದ್ದರಿಂದ, ದೇಶದ ನಾಗರಿಕರ ಶಾಂತಿಯುತ ಸಹಬಾಳ್ವೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂಘ ಪರಿವಾರ ದೇಶವನ್ನು ಮತ್ತಷ್ಟು ಹಾಳುಮಾಡದಂತೆ ಪ್ರತಿರೋಧಿಸಲು ಜಾತ್ಯಾತೀತ ಜನರು ಒಗ್ಗಟ್ಟಾಗಿ ಕೈಜೋಡಿಸಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ.

 

ಪ್ರತಿಭಟನೆಯಲ್ಲಿ ಎಸ್. ಡಿ. ಪಿ. ಐ ತುಮಕೂರು ಜಿಲ್ಲಾ ಸದಸ್ಯ ಮುಖ್ತಾರ್ ಅಹಮದ್, ಶಫಿವುಲ್ಲಾ ಖಾನ್, ತುಮಕೂರು ನಗರ ಅಧ್ಯಕ್ಷ ರಿಜ್ವಾನ್ ಖಾನ್ ,ತುಮಕೂರು ನಗರ ಸದಸ್ಯ ಅಮ್ಜದ್ ಪಾಷಾ ಸೇರಿದಂತೆ ಎಸ್ಡಿಪಿಐ ಸಂಘಟನೆಯ ಕಾರ್ಯ ಕರ್ತ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!