ವಿಧಾನಪರಿಷತ್ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಅಭ್ಯರ್ಥಿಗಳಲ್ಲಿ ತಳಮಳ.
ಡಿಸೆಂಬರ್ 10ರಂದು ನಡೆದ ಸ್ಥಳೀಯ ಸಂಸ್ಥೆಯ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದ್ಯಂತ 25 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು.
ಇದಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯಲ್ಲೂ ಸಹ ವಿಧಾನಪರಿಷತ್ತು ಚುನಾವಣೆ ಡಿಸೆಂಬರ್ 10ರಂದು ನಡೆದಿದ್ದು ಅದರ ಫಲಿತಾಂಶ ನಾಳೆ ಹೊರಬೀಳಲಿದೆ.
ಮತದಾನ ಪ್ರಕ್ರಿಯೆ ಸಂಬಂಧ ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗ ಎಲ್ಲಾ ತಯಾರಿಗಳನ್ನು ಕೈಗೊಂಡಿದ್ದು ತುಮಕೂರಿನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಾಳೆ ಬೆಳಗ್ಗೆ ಮತ ಎಣಿಕೆ ಕಾರ್ಯ ಶುರುವಾಗಲಿದೆ.
ಇದಕ್ಕೆ ಸಂಬಂಧಿಸಿದಂತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ತೀವ್ರ ತಳಮಳ ಹೆಚ್ಚಾಗಿದ್ದು ಯಾರ ಪಾಲಿಗೆ ವಿಜಯಲಕ್ಷ್ಮಿ ಸಿಗಲಿದ್ದಾಳೆ ಎಂದು ನಾಳೆಯವರೆಗೆ ಕಾದು ನೋಡಬೇಕಾಗಿದೆ.
ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆರ್ ರಾಜೇಂದ್ರ, ಜೆಡಿಎಸ್ ಪಕ್ಷದ ವತಿಯಿಂದ ಅನಿಲ್ ಕುಮಾರ್ ಹಾಗೂ ಬಿಜೆಪಿ ಪಕ್ಷದ ವತಿಯಿಂದ ಲೋಕೇಶ್ ಗೌಡ ಸೇರಿದಂತೆ ಇತರ ಅಭ್ಯರ್ಥಿಗಳು ಕಣದಲ್ಲಿದ್ದು.
ಡಿಸೆಂಬರ್ 10ರಂದು ಚುನಾವಣೆ ಮುಗಿದಿತ್ತು ಆದರೆ ನಾಳೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ ಈ ಹಿನ್ನಲೆಯಲ್ಲಿ ಅಭ್ಯರ್ಥಿಗಳಲ್ಲಿ ತೀವ್ರ ತಳಮಳ ಏರ್ಪಟ್ಟಿದೆ.
ಶತಾಯಗತಾಯ ಚುನಾವಣೆಯಲ್ಲಿ ತಾವು ಗೆಲ್ಲಲೇಬೇಕು ಎಂದು ಮೂರು ಪಕ್ಷದ ಅಭ್ಯರ್ಥಿಗಳು ಸಾಕಷ್ಟು ತೆರೆಮರೆಯ ಕಸರತ್ತು ನಡೆಸಿದ್ದರು ಆದರೆ ಯಾರು ವಿಧಾನಪರಿಷತ್ ಚುನಾವಣೆಯಲ್ಲಿ ಗೆಲ್ಲಲಿದ್ದಾರೆ ಎಂದು ನಾಳೆ ಸಂಜೆವರೆಗೂ ಕಾದುನೋಡಬೇಕಾಗಿದೆ ಇನ್ನು ಜಿಲ್ಲೆಯಾದ್ಯಂತ 5537 ಮತದಾರರು ಜಿಲ್ಲೆಯಲ್ಲಿದ್ದು ಈ ಬಾರಿಯ ಚುನಾವಣೆಗೆ ಮತದಾರರು ಗರಿಷ್ಠ ಸಂಖ್ಯೆಯಲ್ಲಿ ಮತದಾನ ಮಾಡಿದ್ದರು.
ನಾಳೆ ಬೆಳಗ್ಗೆಯಿಂದ ನಡೆಯುವ ಮತ ಎಣಿಕೆ ಕಾರ್ಯ ನಾಳೆ ಸಂಜೆಯವರೆಗೂ ನಡೆಯುವ ನಿರೀಕ್ಷೆ ಇದೆ ಸಂಜೆಯ ವೇಳೆಗೆ ಪೂರ್ಣ ಪ್ರಮಾಣದ ಫಲಿತಾಂಶ ಹೊರಬೀಳಲಿದೆ ಆದರೆ ಅಲ್ಲಿಯವರೆಗೂ ಎಲ್ಲರೂ ಕಾಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ…
ವರದಿ_ ಮಾರುತಿ ಪ್ರಸಾದ್ ತುಮಕೂರು