ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣ ಸಚಿವ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಪರಂ.
ತುಮಕೂರು_ಉಡುಪಿಯಲ್ಲಿ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಕಾರಣರಾದ ಸಚಿವ ಈಶ್ವರಪ್ಪ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾಕ್ಟರ್ ಜಿ ಪರಮೇಶ್ವರ್ ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ನಿಜಕ್ಕೂ ದುರದೃಷ್ಟಕರ ಇನ್ನು ಸಾರ್ವಜನಿಕ ಜೀವನದಲ್ಲಿರುವ ನಾವುಗಳು ತಲೆತಗ್ಗಿಸುವಂತಹ ವಿಚಾರ ಎಂದು ತಿಳಿಸಿದರು.
ಇನ್ನು ಆರೋಪ ಮಾಡಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇನ್ನು ಮೃತಪಟ್ಟ ಸಂತೋಷ್ ಪಾಟೀಲ್ ಡೆತ್ ನೋಟ್ ನಲ್ಲಿ ಈಶ್ವರಪ್ಪ ಹೆಸರು ಬರೆದಿಟ್ಟು ಸತ್ತಿದ್ದಾರೆ ಎಂದರು.
ಇನ್ನೂ ಅವರ ಜೊತೆ ಇರುವ ಫೋಟೋಗಳು ಸಹ ಹರಿದಾಡುತ್ತಿವೆ ಇದನ್ನ ಈಶ್ವರಪ್ಪನವರು ತನಗೆ ಆತನ ಬಗ್ಗೆ ಗೊತ್ತಿಲ್ಲ ಅನ್ನುವುದಕ್ಕು ಆಗುವುದಿಲ್ಲ ಎಂದರು.
ಹೀಗೆಲ್ಲ ಇರುವಾಗ ವಿರೋಧ ಪಕ್ಷದ ನಾಯಕರಾದ ನಾವುಗಳು ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಯಾಗಬೇಕು, ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನ ಮಡಿಕೇರಿಯ ಗಣಪತಿ ಆತ್ಮಹತ್ಯೆ ವಿಚಾರದಲ್ಲೂ ಸಹ ಅಂದಿನ ಗೃಹ ಸಚಿವರಾಗಿದ್ದ ಸಚಿವ ಕೆ.ಜೆ ಜಾರ್ಜ್ ಅವರು ತಾವಾಗಿ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಿದ್ದರು
ಅದರಂತೆ ಕೂಡಲೇ ಈಶ್ವರಪ್ಪ ರಾಜೀನಾಮೆ ನೀಡಬೇಕು ಇಲ್ಲವಾದರೆ ಮುಖ್ಯಮಂತ್ರಿಗಳು ಸಚಿವ ಈಶ್ವರಪ್ಪ ನವರಿಂದ ರಾಜೀನಾಮೆ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಇನ್ನು ಕಾನೂನು ಪ್ರಕಾರ ಪ್ರಾಥಮಿಕ ತನಿಖೆಯಲ್ಲಿ ಈಶ್ವರಪ್ಪನವರನ್ನು ಬಂಧಿಸುವ ಅವಶ್ಯಕತೆ ಅನಿವಾರ್ಯವಾದರೆ ಕೂಡಲೇ ಈಶ್ವರಪ್ಪನವರನ್ನು ಬಂಧಿಸಬೇಕು ಎಂದು ಡಾ. ಜಿ ಪರಮೇಶ್ವರ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ
ವರದಿ _ಮಾರುತಿ ಪ್ರಸಾದ್ ತುಮಕೂರು