ತೈಲಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

 

ತುಮಕೂರು:ಕೇಂದ್ರ ಮತ್ತು ರಾಜ್ಯ ಸರಕಾರದ ಬೆಲೆ ಹೆಚ್ಚಳದ ನೀತಿಯಿಂದಾಗಿ ಜನಸಾಮಾನ್ಯರು ಬದುಕುವುದು ಕಷ್ಟವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಂಗಾಧರಯ್ಯ ಆರೋಪಿಸಿದ್ದಾರೆ.

ತುಮಕೂರು ಗ್ರಾಮಾಂತರ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಜಾತಿ ವಿಭಾಗದವತಿಯಿಂದ ಓಬಳಾಪುರ ಗ್ರಾಮದ ಪೆಟ್ರೋಲ್ ಬಂಕ್ ಬಳಿ ಹಮ್ಮಿಕೊಂಡಿದ್ದ ೧೦೦ ನಾಟೌಟ್ ಇಂಧನ ಬೆಲೆ ಹೆಚ್ಚಳ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಸತತ ಇಂಧನ ಬೆಲೆ ಹೆಚ್ಚಳದಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದರು.

ಕೋವಿಡ್‌ನಿAದ ಇಡೀ ದೇಶದ ಜನರೇ ತತ್ತರಿಸಿರುವ ಸಂದರ್ಭದಲ್ಲಿ ಕಳೆದ ಒಂದುವರೆ ತಿಂಗಳಲ್ಲಿ ೩೦ಕ್ಕೂ ಹೆಚ್ಚು ಬಾರಿ ಪೈಸೆಗಳ ಲೆಕ್ಕದಲ್ಲಿ ಇಂಧನ ಬೆಲೆಗಳನ್ನು ಹೆಚ್ಚಿಸುತ್ತಾ, ಜನರ ಸಾಮಾನ್ಯರು ಪರಿತಪಿಸುವಂತೆ ಮಾಡಿದೆ. ಕೋರೋನ ಲಾಕ್‌ಡೌನ್‌ನಿಂದ ಕೂಲಿ ಇಲ್ಲದೆ, ಪರದಾಡುತ್ತಿದ್ದಾರೆ. ಆದರೆ ಸರಕಾರ ಮಾತ್ರ, ಇಂಧನ ಬೆಲೆಗಳ ಹೆಚ್ಚಳ ಮಾಡಿ, ಜನಸಾಮಾನ್ಯರ ಜೋಬಿಗೆ ಕತ್ತರಿ ಹಾಕಿದೆ ಎಂದು ಗಂಗಾಧರಯ್ಯ ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆತೀಕ ಅಹಮದ್ ಮಾತನಾಡಿ,ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ಡಾ.ಜಿ.ಪರಮೇಶ್ವರ್ ಅವರ ಕರೆಯಂತೆ ಆರಂಭಗೊAಡಿರುವ ೧೦೦ ನಾಟೌಟ್ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರದ ನರೇಂದ್ರ ಮೋದಿ ಸರಕಾರ ಇಂಧನ ಬೆಲೆಗಳ ಹೆಚ್ಚಳದ ಮೂಲಕ ದೇಶದ ಅರ್ಥಿಕ ಸ್ಥಿತಿಯನ್ನು ಸುಧಾರಣೆಗೆ ತರಬಹುದೆಂದು ತಿಳಿದಿದ್ದಾರೆ.ಆದರೆ ಅದು ಸಾಧ್ಯವಿಲ್ಲ.ಈ ದೇಶದ ಅರ್ಥಿಕತೆ ಸುಧಾರಿಸಬೇಕೆಂದರೆ,ಜನಸಾಮಾನ್ಯರಿಗೆ ಕೊಂಡು ಕೊಳ್ಳುವ ಶಕ್ತಿ ಬರುವಂತೆ ಹಣದ ಹರಿವು ಮಾಡಬೇಕು.ಆದರೆ ಇದಕ್ಕೆ ತದ್ವಿರುದ್ದವಾದ ನಡೆಗಳು ಎರಡು ಸರಕಾರಗಳಿಂದ ಕಂಡು ಬರುತ್ತಿದೆ.ಇಂಧನ ಬೆಲೆ ಹೆಚ್ಚಳದಿಂದ ಬಿಜೆಪಿಗರ ಅರ್ಥಿಕ ಸ್ಥಿತಿ ಸುಧಾರಿಸಬಹುದು ಅಷ್ಟೇ.ಆದ್ದರಿಂದ ಜನರಿಂದ ತೆರಿಗೆ ಹೆಸರಿನಲ್ಲಿ ಲೂಟಿ ಮಾಡುವುದನ್ನು ಸರಕಾರಗಳು ಬಿಡಬೇಕು ಎಂದು ಆಗ್ರಹಿಸಿದರು.

ತುಮಕೂರು ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಶಂಕರ್ ಮಾತನಾಡಿ,ಇಂಧನ ವಸ್ತುಗಳ ಮೇಲಿನ ಸೆಸ್ ಹೆಚ್ಚಳ ಮಾಡಿ ಇಡೀ ದೇಶದ ಹೊಟ್ಟೆಯ ಮೇಲೆ ಹೊಡೆಯುತ್ತಿದೆ.ಇದರ ಫಲವಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ, ಜನರು ಕೊಳ್ಳುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ.ಆದ್ದರಿAದ ಸರಕಾರ ಕೂಡಲೇ ತೈಲ ಬೆಲೆ ಮೇಲಿನ ತೆರಿಗೆ ಕಡಿತಗೊಳಿಸಬೇಕೆಂಬುದು ಕಾಂಗ್ರೆಸ್ ಒತ್ತಾಯವಾಗಿದೆ.ಕೋರೋನ ನಿರ್ವಹಣೆಯಲ್ಲಿಯೂ ಸಹ ಸರಕಾರ ಸಂಪೂರ್ಣ ಎಡವಿದ್ದು,ಲಸಿಕೆ ನೀಡುವಲ್ಲಿಯೂ ವಿಫಲವಾಗಿದೆ.ಇಂತಹ ಸರಕಾರದ ವಿರುದ್ದ ಜನರು ಬೀದಿಗಿಳಿದು ಹೋರಾಡುವ ಕಾಲ ದೂರವಿಲ್ಲ ಎಂದರು.

ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಿ.ಜಿ.ಲಿಂಗರಾಜು ಮಾತನಾಡಿ,ಕಳೆದ ನಾಲ್ಕು ದಿನಗಳಿಂದ ತಾಲೂಕು, ಹೋಬಳಿ ಮಟ್ಟದಲ್ಲಿ ಇಂಧನ ಬೆಲೆ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸಿದ್ದು, ಇಂದು ಗ್ರಾಮಪಂಚಾಯಿತಿ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ.ಪ್ರತಿಯೊಬ್ಬ ನಾಗರಿಕರ ನೋವನ್ನು ಸರಕಾರಕ್ಕೆ ಮುಟ್ಟಿಸುವ ಕೆಲಸವನ್ನು ವಿರೋಧ ಪಕ್ಷವಾಗಿ ಕಾಂಗ್ರೆಸ್ ಮಾಡುತ್ತಿದೆ.ಕೋವಿಡ್ ಮಾಹಾಮಾರಿಯಂತಹ ಸಂದರ್ಭದಲ್ಲಿಯೂ ಸರಕಾರ ಜನಸಾಮಾನ್ಯರ ನೆರವಿಗೆ ಬರುವಲ್ಲಿ ನಿರ್ಲಕ್ಷ ತೋರಿದೆ.ಆದ್ದರಿಂದ ಎರಡು ಸರಕಾರಗಳು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್ ಎಸ್.ಸಿ ಸೆಲ್ ಪ್ರಧಾನ ಕಾರ್ಯದರ್ಶಿಗಳಾದ ಬಂಡೆ ಶಿವಕುಮಾರ್,ನರಸಿಂಹಮೂರ್ತಿ,ಮೊಹಮದ್ ಶಫೀಕ್, ಸುಹೇಲ್ ಅಹಮದ್, ಏಜಾಜ್, ಕಲೀಂ,ಚಿಕ್ಕತೊಟ್ಲುಕೆರೆ ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!