ಮಾಜಿ ಸಚಿವ ಕೃಷ್ಣಭೈರೇಗೌಡ ಅವರ ಬಗ್ಗೆ ಮಾತನಾಡುವ ನೈತಿಕತೆ ಕ್ಷೇತ್ರದ ಶಾಸಕರಿಗಿಲ್ಲ.ಭವಿಷ್ಯದ ಮುಖ್ಯಮಂತ್ರಿ ಆಗುವಂತರ ಬಗ್ಗೆ ಮಾತನಾಡುವುದು ಸರಿಯಲ್ಲ ದೇವನಹಳ್ಳಿ ವಿ.ಸಾ.ಕ್ಷೇತ್ರದ ಶಾಸಕರು ತಮ್ಮ ಇತಿಮಿತಿಯೊಳಗೆ ಕೆಲಸ ಮಾಡುಬೇಕು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪ್ರಸನ್ನಕುಮಾರ್ ಕಿಡಿ ದೇವನಹಳ್ಳಿ ಜನರು ಒಳ್ಳೆಯ ಜನರಾಗಿದ್ದಾರೆ.
ನಿಮ್ಮ ಅವಧಿಯಲ್ಲಿ ನೀವು ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ಏನು ಮಾಡಿದ್ದಿರಾ ಎಂದು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪ್ರಸನ್ನಕುಮಾರ್ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭವಿಷ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇರುವ ಮಾಜಿ ಸಚಿವ ಕೃಷ್ಣಭೈರೇಗೌಡ ಅವರ ಬಗ್ಗೆ ಮಾತನಾಡುವ ನೈತಿಕತೆ ಕ್ಷೇತ್ರದ ಶಾಸಕರಿಗಿಲ್ಲ.
ಜನರು ಬೇರೆ ಕ್ಷೇತ್ರದವರಿಗೆ ಶಾಸಕರ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಅವರ ಋಣ ತೀರಿಸುವ ಬದಲಿಗೆ ಬೇಡವಾದಂತಹ ಮಾತುಗಳನ್ನು ಆಡುತ್ತಿರುವುದು ಸಮಂಜಸವಲ್ಲ. ಶಾಸಕರು ತಮ್ಮ ಇತಿಮಿತಿಯೊಳಗೆ ಕೆಲಸ ಮಾಡಬೇಕು ಎಂದು ವಿನಂತಿ ಮಾಡಿದರು.
ಕೋವಿಡ್ ಸಂದರ್ಭದಲ್ಲಿ ಮಾಜಿ ಸಚಿವ ಕೃಷ್ಣಭೈರೇಗೌಡ ಅವರು ಕ್ಷೇತ್ರದ ಜನರ ಪರವಾಗಿ ಮತ್ತು ಸೋಂಕಿತರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಮಾತನಾಡುವಾಗ ಯೋಚನೆ ಮಾಡಬೇಕಾಗುತ್ತದೆ. ನಮ್ಮ ಕ್ಷೇತ್ರದಲ್ಲಿನ ಶಾಸಕರು ನಾಪತ್ತೆಯಾಗಿದ್ದರು ಎಂದು ಬರೆದ ಪತ್ರಕರ್ತರನ್ನು ನಿಂದಿಸಿರುವುದೇ ಅಲ್ಲದೆ, ಪತ್ರಕರ್ತರ ವೃತ್ತಿಗೆ ಅವಮಾನ ಎಸಗಿದ್ದಾರೆಂಬುದು ತಿಳಿದುಬಂದಿದೆ.
ನಮ್ಮ ಪಕ್ಷದ ಕೆಲಸಗಳಿಗೆ ಪತ್ರಕರ್ತರ ಅವಶ್ಯಕತೆ ಇಲ್ಲ ಎಂದು ಹೇಳಿಕೆ ನೀಡುತ್ತಾರೆ. ಹಾಗಾದರೆ, ಶಾಸಕರು ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದ ಯಾವ ಪಿಎಚ್‌ಸಿಗಳಿಗೆ ಹೋಗಿ ಪರಿಶೀಲಿಸಿದ್ದಾರೆ. ಅದು ಸಹ ಮಾಡಿಲ್ಲ. ಸಂಕಷ್ಟದಲ್ಲಿರುವ ಜನರತ್ತ ಸಹ ನೋಡಿಲ್ಲ. ಕೋವಿಡ್ ಲಸಿಕೆ ಲಭ್ಯತೆ ಬಗ್ಗೆ ಅರಿವು ಮೂಡಿಸಿದ್ದಾರೆಯೇ ಅದು ಸಹ ಇಲ್ಲ.
ಸಂಕಷ್ಟದಲ್ಲಿರುವ ಜನರಿಗೆ ತಮ್ಮ ಸೇವೆಯಾದರೂ ಏನು ಮಾಡುತ್ತಿದ್ದಾರೆ. ಅದನ್ನು ಮಾಡುವುದನ್ನು ಬಿಟ್ಟು ಬೇರೆ ರೀತಿಯಲ್ಲಿ ರಾಜಕೀಯ ನಡೆಸುವುದು ಶೋಭೆ ತರುವುದಿಲ್ಲ ಎಂದು ಕಿಡಿ ಕಾರಿದರು. ಇದೇ ಸಂದರ್ಭದಲ್ಲಿ ಕೃಷಿಕ ಸಮಾಜದ ನಿರ್ದೇಶಕ ಎಸ್.ಆರ್.ರವಿಕುಮಾರ್, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್, ಕೆಪಿಸಿಸಿ ಸದಸ್ಯ ಚಿನ್ನಪ್ಪ ಇದ್ದರು.
ಗುರುಮೂರ್ತಿ ಬೂದಿಗೆರೆ
8861100990