ರೈಲ್ವೆ ಬ್ರಿಡ್ಜ್ ಸಮಸ್ಯೆ ಬಗೆಹರಿಸಲು ಕಾಂಗ್ರೆಸ್ ಮುಖಂಡ -ಇಕ್ಬಾಲ್ ಅಹಮದ್ ಒತ್ತಾಯ.

ರೈಲ್ವೆ ಬ್ರಿಡ್ಜ್ ಸಮಸ್ಯೆ ಬಗೆಹರಿಸಲು ಕಾಂಗ್ರೆಸ್ ಮುಖಂಡ -ಇಕ್ಬಾಲ್ ಅಹಮದ್ ಒತ್ತಾಯ.

 

 

ತುಮಕೂರು -ತುಮಕೂರು ನಗರದ ಹೆಗಡೆ ಕಾಲೋನಿ ಬಳಿ ಇರುವ ರೈಲ್ವೆ ಅಂಡರ್ ಪಾಸ್ ನಿಂದಾಗಿ ಹಲವು ಸಮಸ್ಯೆ ಆಗುತ್ತಿದ್ದು ಇದರಿಂದ ರಿಂಗ್ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ಹಾಗೂ ಸಾರ್ವಜನಿಕರ ಸಮಸ್ಯೆ ಬಗೆಹರಿಸಲು  ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಸಿ ಸಾರ್ವಜನಿಕರು ಹಾಗೂ ವಾಹನ ಸವಾರರ ಸಮಸ್ಯೆ ಬಗೆಹರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

 

 

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು ಕಳೆದ ಮೂರು ತಿಂಗಳ ಹಿಂದೆ ಆಟೋ ಚಾಲಕ ಅಮ್ಜದ್ ಖಾನ್ ಇದೆ ಜಾಗದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿ ಅಮೃತಪಟ್ಟಿದ್ದ ಘಟನೆ ಮಾಸುವ ಮುನ್ನಡೆ ಹಲವು ಅಪಘಾತಗಳು ನಡೆದಿದ್ದು ಇದರಿಂದ ಸಾರ್ವಜನಿಕರು ಪಾದಾಚಾರಿಗಳು ಮಕ್ಕಳು ಹಾಗೂ ಮಹಿಳೆಯರು ಈ ಭಾಗದಲ್ಲಿ ಸಂಚರಿಸಲು ಸಾಕಷ್ಟು ತೊಂದರೆ ಉಂಟಾಗುತ್ತಿದೆ ಎಂದ ಅವರು

 

ಇನ್ನು ರೈಲ್ವೆ ಇಲಾಖೆಯಿಂದ ನಿರ್ಮಿಸಿರುವ ರೈಲ್ವೆ ಅಂಡರ್ ಪಾಸ್ ನಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಿದೆ ಹಾಗೂ ಪ್ರತಿನಿತ್ಯ 20,000ಕ್ಕೂ ಹೆಚ್ಚು ಸಾರ್ವಜನಿಕರು ಸಂಚರಿಸುವ ಜನ ದಟ್ಟಣೆ ಪ್ರದೇಶವಾಗಿದ್ದು ಯಾವುದೇ ಸುರಕ್ಷತಾ ಕ್ರಮಗಳು ರೈಲ್ವೆ ಅಂಡರ್ ಪಾಸ್ ನಲ್ಲಿ ಇಲ್ಲದ ಕಾರಣ ಸಾರ್ವಜನಿಕರಿಗೆ ಪ್ರತಿನಿತ್ಯ ತೊಂದರೆಯಾಗುತ್ತಿದೆ.

 

 

 

ಇನ್ನು ರೈಲ್ವೆ ಇಲಾಖೆ ನಿರ್ಮಿಸಿರುವ ಅಂಡರ್ ಪಾಸ್ ಹಾಗೂ ಬ್ರಿಡ್ಜ್ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ ಇನ್ನು ಇಲಾಖೆಗಳ ಸಮನ್ವಯ ಕೊರತೆಯಿಂದ ಸಮಸ್ಯೆ ಉದ್ಭವವಾಗಿದ್ದು ಕೂಡಲೇ ಸಂಬಂಧಪಟ್ಟ ಇಲಾಖೆಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

 

 

 

 

ಹಾಗಾಗಿ ಅಂಡರ್ ಪಾಸ್ ಬಳಿ ಇರುವ ಸಣ್ಣ ರೈಲ್ವೆ ಬ್ರಿಡ್ಜನ್ನ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಟ್ಟರೆ ಈ ಭಾಗದಲ್ಲಿ ಪ್ರತಿನಿತ್ಯ ಸಂಚರಿಸುವ ಗಾರ್ಮೆಂಟ್ಸ್ ನೌಕರರು ಮಕ್ಕಳು ಹಾಗೂ ವಯೋವೃದ್ದರಿಗೆ ಅನುಕೂಲವಾಗಲಿದೆ ಹಾಗಾಗಿ ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಕ್ರಮ ತೆಗೆದುಕೊಂಡು ಬ್ರಿಡ್ಜನ್ನ ದುರಸ್ತಿ ಗೊಳಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿರುವ ಅವರು ತಮ್ಮ ಮನವಿ ಈಡೇರಿಸದೆ ಇದ್ದರೆ ಶೀಘ್ರದಲ್ಲೇ ಬೃಹತ್ ಹೋರಾಟವನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.

 

 

ಇದೇ ಸಂದರ್ಭದಲ್ಲಿ ಮಾತನಾಡಿರುವ  ಸ್ಥಳೀಯ ನಿವಾಸಿ ಕುಮಾರ್ ರವರು ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಿರ್ಲಕ್ಷತೆಯಿಂದ ಪ್ರತಿನಿತ್ಯ ಈ ಭಾಗದ ಸಾರ್ವಜನಿಕರು ಅಪಘಾತಕ್ಕೆ ಇಡಗುತ್ತಿದ್ದರು ಸಹ ಯಾರು ಸಹ ಗಮನಹರಿಸುತ್ತಿಲ್ಲ ಆಕ್ರೋಶ ಅವರ ಹಾಕಿದ್ದಾರೆ

 

 

 

ವರದಿ – ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!