ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಸಾಧನೆಗೈದ ವಿದ್ಯಾರ್ಥಿನಿ ಸಾಜಿದಗೆ ಅಭಿನಂದನಾ ಸಮಾರಂಭ
ಹನೂರು :- ತಾಲೂಕಿನ ಶ್ರೀ ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಕುಮಾರಿ ಸಾಜಿದ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 586 ಅಂಕಗಳನ್ನು ತೆಗೆದುಕೊಂಡು ಚಾಮರಾಜನಗರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡು ವಿವೇಕಾನಂದ ಸಂಸ್ಥೆಗೆ ಹಾಗೂ ಜಿಲ್ಲೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ.
ಸಾಜಿದ ಬಡತನದಲ್ಲಿ ಬೆಳೆದ ಯುವತಿ ಹನೂರು ತಾಲೂಕಿನ ಚಿಗತಪುರ ಗ್ರಾಮದ ಯಾಸ್ಮಿನ್ ತಾಜ್ ಲೇಟ್ ಸೈಯ್ಯದ್ ಆಸೀಫ್ ರವರ ಪುತ್ರಿಯಾಗಿ ಪ್ರಾಥಮಿಕ ಶಿಕ್ಷಣ ಪಡೆಯುವಾಗಲೇ ತಂದೆಯನ್ನು ಕಳೆದುಕೊಂಡ ಸಾಜಿದ ದೃತ್ತಿಗೆಡದೆ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಹಾಗೂ ಹತ್ತನೇ ತರಗತಿ ಮುಗಿದ ನಂತರ ಶಿಕ್ಷಣವನ್ನು ಮೋಟಕುಗೊಳಿಸಿ ಮದುವೆ ಮಾಡುವ ನಿರ್ಧಾರವನ್ನು ಪೋಷಕರು ತೆಗೆದುಕೊಂಡಿದ್ದರು ಎನ್ನಲಾಗಿದೆ ಹಾಗೂ ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಸಾಜಿದ ತಾಯಿ ಯಾಸ್ಮಿನ್ ತಾಜ್ ಮನೆಯಲ್ಲಿ ಬಿಡಿಯನ್ನು ಕಟ್ಟಿ ಕಷ್ಟಪಟ್ಟು ದುಡಿದು ಸಾಕುವುದನ್ನು ನೋಡಲಾಗದೆ ಪ್ರೌಢ ಶಿಕ್ಷಣ ಕಲಿಯುತ್ತಿದ್ದಾಗಲೇ ಮನೆಯಲ್ಲಿ ಬಡತನ ಎದುರಾಗಿ ಶಿಕ್ಷಣವನ್ನ ತೊರೆಯುವ ಯೋಚನೆ ಸಾಜಿದ ಮಾಡಿದ್ದರೆಂದು ಹೇಳಲಾಗಿದೆ.
ಜಿಲ್ಲೆ ಹಾಗೂ ಹನೂರು ವಿವೇಕಾನಂದ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡು ಕೀರ್ತಿಗೆ ಭಾಜನರಾಗಿರುವ ಕುಮಾರಿ ಸಾಜಿದಾಗೆ ಹಾಗೂ ಪೋಷಕರಿಗೆ ಪ್ರಾಧ್ಯಾಪಕರಿಗೆ ಇಂದು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು ಇದೆ ವೇಳೆಯಲ್ಲಿ ಮಾತನಾಡಿದ ಪ್ರಾಧ್ಯಾಪಕರು ಕುಮಾರಿ ಸಾಜಿದ ನಮ್ಮ ಶಾಲೆಯಲ್ಲಿ ಅತ್ಯಂತ ಬುದ್ಧಿವಂತೆ ವಿನಯ ಮತ್ತು ಸೌಜನ್ಯಯುತವಾದ ವಿಶೇಷ ಪ್ರತಿಭೆಯ ವಿದ್ಯಾರ್ಥಿನಿ ಕುಮಾರಿ ಸಾಜಿದ ನಮ್ಮ ಶಾಲೆಗೆ ದೊಡ್ಡ ಕೀರ್ತಿಯನ್ನು ತಂದು ಕೊಟ್ಟಿರುವ ವಿದ್ಯಾರ್ಥಿನಿ ಸಾಜಿದಾಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.
ವಿವೇಕಾನಂದ ಶಾಲೆಯ ಪ್ರಾಧ್ಯಾಪಕರುಗಳು ಕುಮಾರಿ ಸಾಜಿದಾಗೆ ಸಾಲು ಹೋದಿಸಿ ಸನ್ಮಾನ ಮಾಡಲಾಯಿತು ಹಾಗೂ ಕಾರಣಿ ಭೂತರಾದ ತಾಯಿ ಯಾಸ್ಮಿನ್ ತಾಜ್ ಹಾಗೂ ಪ್ರಾಧ್ಯಾಪಕ ವೃಂದದವರಿಗೂ ಕೂಡ ಸನ್ಮಾನಿಸಿ ಗೌರವಿಸಲಾಯಿತು.
ಇದೆ ವೇಳೆ ಮಾತನಾಡಿದ ಕುಮಾರಿ ಸಾಜಿದ ವಿವೇಕಾನಂದ ಶಾಲೆಯ ಪ್ರಾಧ್ಯಾಪಕರುಗಳು ನನ್ನ ತಂದೆ ತಾಯಿ ಉತ್ತಮ ಶಿಕ್ಷಣವನ್ನು ನೀಡಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಅವರೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು ಎಂದು ತಿಳಿಸಿದರು ಇನ್ನು ಈ ಸಂದರ್ಭದಲ್ಲಿ ಪ್ರಾಂಶುಪಾಲರು ಮಧುಸೂದನ್ ಕಾರ್ಯದರ್ಶಿ ಸುರೇಶ್ ನಾಯ್ಡು ಸಂಯೋಜಕರು ರಾಜೇಂದ್ರ ..ರಾಜೇಂದ್ರ ಪ್ರಸಾದ್ ಪ್ರಾದ್ಯಪಕಿ ಮಧು ಶಾಲಿನಿ ಉಪಸ್ಥಿತರಿದ್ದರು
ವರದಿ :- ನಾಗೇಂದ್ರ ಪ್ರಸಾದ್