ಬಿಟ್‌ ಕಾಯಿನ್‌ ದಂಧೆ: ಎಷ್ಟೇ ಪ್ರಭಾವಿಗಳು ಭಾಗಿಯಾಗಿದ್ದರೂ ಕಠಿಣ ಕ್ರಮ: ಸಿಎಂ ಬೊಮ್ಮಾಯಿ.

ಬಿಟ್‌ ಕಾಯಿನ್‌ ದಂಧೆ: ಎಷ್ಟೇ ಪ್ರಭಾವಿಗಳು ಭಾಗಿಯಾಗಿದ್ದರೂ ಕಠಿಣ ಕ್ರಮ: ಸಿಎಂ ಬೊಮ್ಮಾಯಿ.

ಬೆಂಗಳೂರು: ಬಿಟ್‌ ಕಾಯಿನ್‌ ದಂಧೆ ಮತ್ತು ಡ್ರಗ್ಸ್ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಸಿಬಿಐನ ಇಂಟರ್‌ಪೋಲ್‌ ಘಟಕಕ್ಕೆ ಶಿಫಾರಸು ಮಾಡಲಾಗಿದೆ. ಈಗ ಎರಡೂ ತನಿಖಾ ಸಂಸ್ಥೆಗಳು ತನಿಖೆ ಆರಂಭಿಸಿವೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

 

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಟ್ವೀಟ್‌ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಅವರು, 2020ರಲ್ಲಿ ಡ್ರಗ್‌ ಪೂರೈಕೆ ಆರೋಪದಲ್ಲಿ ಹ್ಯಾಕರ್ ಶ್ರೀಕೃಷ್ಣನನ್ನು ಬಂಧಿಸಲಾಗಿತ್ತು. ಆ ಬಳಿಕ ಹ್ಯಾಕಿಂಗ್‌ ಮತ್ತು ಬಿಟ್‌ ಕಾಯಿನ್‌ ದಂಧೆ ಕುರಿತು ಮಾಹಿತಿ ಲಭಿಸಿತ್ತು. ಆ ಬಳಿಕ ಮೂರು ಪ್ರಕರಣ ದಾಖಲಿಸಿದ್ದ ಸಿಸಿಬಿ, ತನಿಖೆ ನಡೆಸಿದೆ. ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನೂ ಸಲ್ಲಿಸಿದ್ದೆ. ಪ್ರಕರಣದಲ್ಲಿ ಅಂತರರಾಷ್ಟ್ರೀಯ ವಿಷಯಗಳು ಇರುವುದರಿಂದ ಹೆಚ್ಚಿನ ತನಿಖೆಗಾಗಿ ಇ.ಡಿ ಮತ್ತು ಸಿಬಿಐ ಇಂಟರ್‌ಪೋಲ್‌ಗೆ ಶಿಫಾರಸು ಮಾಡಲಾಗಿತ್ತು ಎಂದರು.

 

ಹ್ಯಾಕರ್‌ ಶ್ರೀಕೃಷ್ಣ 2018ರ ಫೆಬ್ರುವರಿಯಲ್ಲಿ ಯು.ಬಿ ಸಿಟಿಯಲ್ಲಿ ನಡೆದಿದ್ದ ದಾಂಧಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಆ ಪ್ರಕರಣದಲ್ಲಿ ಆತನನ್ನು ಬಂಧಿಸದೇ ರಕ್ಷಣೆ ನೀಡಲಾಗಿತ್ತು. ಆಗಲೇ ಆತನನ್ನು ಬಂಧಿಸಿದ್ದರೆ ಎಲ್ಲ ಹಗರಣಗಳೂ ಬಹುಬೇಗ ಬಯಲಿಗೆ ಬರುತ್ತಿದ್ದವು. 2020ರಲ್ಲಿ ಆತನ ಬಂಧನವಾದ ಬಳಿಕವೇ ಎಲ್ಲವೂ ಬಯಲಿಗೆ ಬಂತು. ರಾಜ್ಯ ಸರ್ಕಾರದ ಇ-ಸಂಗ್ರಹಣಾ ಪೋರ್ಟಲ್‌ ಕೂಡ ಹ್ಯಾಕ್‌ ಮಾಡಿದ್ದ. ಅದನ್ನೂ ಸಿಐಡಿ ತನಿಖೆ ನಡೆಸಿದೆ. ಯಾವ ಹಂತದಲ್ಲೂ ಯಾರನ್ನೂ ರಕ್ಷಿಸುವ ಪ್ರಯತ್ನ ಮಾಡಿಲ್ಲ. ಅದರ ಅಗತ್ಯವೂ ಸರ್ಕಾರಕ್ಕೆ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

 

ವಿಧಾನಸಭೆ ವಿಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್‌ ಮೂಲಕ ಆಧಾರರಹಿತ ಆರೋಪ ಮಾಡಿದ್ದಾರೆ. ಬಿಟ್‌ ಕಾಯಿನ್‌ ಹಗರಣದಲ್ಲಿ ಯಾವ ಪ್ರಭಾವಿಗಳು ಭಾಗಿಯಾಗಿದ್ದಾರೆ? ಯಾರನ್ನು ರಕ್ಷಿಸಲಾಗುತ್ತಿದೆ? ಎಂಬ ಸಾಕ್ಷ್ಯವನ್ನು ಅವರು ಒದಗಿಸಲಿ. ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳು ಭಾಗಿಯಾಗಿದ್ದರೂ ಕಠಿಣ ಕ್ರಮ ಜರುಗಿಸಲು ಸರಕಾರ ಸಿದ್ಧ ಎಂದು ಬೊಮ್ಮಾಯಿ ಸವಾಲು ಹಾಕಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!