ರಾಜ್ಯಾದ್ಯಂತ ಶಾಂತಿ ಕಾಪಾಡಲು ಸಿ.ಎಂ ಬೊಮ್ಮಾಯಿ ಮನವಿ.
ಬೆಂಗಳೂರು_ಹೈಕೋರ್ಟ್ ನ ತ್ರಿಸದಸ್ಯ ಪೀಠದಿಂದ ಇಂದು ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟವಾಗಿದ್ದು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಶಾಂತಿ ಕಾಪಾಡಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಇಂದು ಪ್ರಕಟವಾಗಿರುವ ತೀರ್ಪು ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದ್ದು ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪಿನಲ್ಲಿ ಸಮವಸ್ತ್ರ ಎತ್ತಿ ಹಿಡಿದಿದ್ದು ಹಿಜಬ್ ಸಮುದಾಯದ ಅತ್ಯಗತ್ಯ ಭಾಗವಲ್ಲ ಎಂದು ತಿಳಿಸಿದ್ದು ಮಕ್ಕಳಿಗೆ ವಿದ್ಯೆಗಿಂತ ಬೇರೆ ಯಾವುದೂ ಮುಖ್ಯವಲ್ಲ ಹೈಕೋರ್ಟ್ ತ್ರಿಸದಸ್ಯ ಪೀಠದಿಂದ ತೀರ್ಪು ನೀಡಿದ್ದು ತೀರ್ಪಿನ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದಿದ್ದಾರೆ.
ಇದನ್ನು ಅನುಷ್ಠಾನಗೊಳಿಸುವ ಸಂಬಂಧ ಪ್ರತಿಯೊಬ್ಬರು ಸಹಕರಿಸಬೇಕು ,ಶಾಂತಿ ಕಾಪಾಡಬೇಕು ,ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬಾರದಂತೆ ಎಲ್ಲರೂ ಸಹಕರಿಸಬೇಕು ಎಂದು ತಿಸಿಸಿದಾರೆ.
ಇನ್ನು ತೀರ್ಪುನ್ನು ಎಲ್ಲ ಪಾಲಕರು, ಶಿಕ್ಷಕರು ಮಕ್ಕಳು ಕೂಡ ಪಾಲಿಸುವಂತಾಗಬೇಕು ಎಂದು ಮನವಿ ಮಾಡಿದ್ದಾರೆ ತೀರ್ಪಿನ ನಂತರ ಪ್ರತಿಯೊಬ್ಬರು ಒಪ್ಪಿ ಸಾರ್ವಜನಿಕರು ರಾಜ್ಯದಲ್ಲಿ ಶಾಂತಿ ಕಾಪಾಡಿ ಎಂದು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ