ಸಹಾಯ ಹಾಗೂ ಎಸ್ ಎಸ್ ಎಫ್ ಸಂಸ್ಥೆಯಿಂದ ಸ್ವಚ್ಛತಾ ಆಂದೋಲನ

 

ತುಮಕೂರಿನ ಕರ್ನಾಟಕ ಮುಸ್ಲಿಂ ಜಮಾತ್, ಎಸ್ಸೆಸ್ಸೆಫ್ ಹಾಗೂ ಸಹಾಯ ಸಂಸ್ಥೆಯಿಂದ ಸ್ವಚ್ಛತಾ ಆಂದೋಲನ ನಡೆಯುತ್ತಿದ್ದು. ಇದರ ಅಂಗವಾಗಿ ತುಮಕೂರಿನ ಟೌನ್ ಹಾಲ್ ಬಳಿಯ ಜಲ್ಕ ಮಾಖನ್ ದರ್ಗಾದಲ್ಲಿ ಸ್ಯಾನಿಟೈಸರ್ ಸಿಂಪಡನೆ ಮಾಡುವ ಮೂಲಕ ಎಸ್ಎಸ್ಎಫ್ ಹಾಗೂ ಸಹಾಯ ಸಂಸ್ಥೆ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ.

 

 

ಇದುವರೆಗೂ ಎಸ್ ಎಸ್ ಎಫ್ , ಕರ್ನಾಟಕ ಮುಸ್ಲಿಂ ಜಮಾತ್ ಹಾಗೂ ಸಹಾಯ ಸಂಸ್ಥೆಯು ಲಾಕ್ ಡೌನ್ ಸಮಯದಲ್ಲಿ ಹಸಿದವರಿಗೆ ,ವಲಸೆ ಕಾರ್ಮಿಕರಿಗೆ, ಪ್ರಯಾಣಿಕರಿಗೆ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ ಇದ್ದ ಸೋಂಕಿತರಿಗೆ ಇದುವರೆಗೂ ಉಚಿತವಾಗಿ ಆಹಾರ ನೀಡುತ್ತಾ ಸಮಾಜ ಸೇವೆ ಸಲ್ಲಿಸುತ್ತಿದ್ದ ಸಂಸ್ಥಯು ಈಗ ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಾ ಕೊಳಚೆ ಪ್ರದೇಶಗಳು , ಸ್ಲಂ ಸೇರಿದಂತೆ ತುಮಕೂರು ನಗರದ ಮಂದಿರ-ಮಸೀದಿ ಹಾಗೂ ಚರ್ಚುಗಳಲ್ಲಿ ಸಂಸ್ಥೆಯ ವತಿಯಿಂದ ಉಚಿತವಾಗಿ ಸ್ಯಾನಿಟೈಸರ್ ಸಿಂಪರಣೆ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ರವರು ಕರೋಣ ಸಂದರ್ಭದಲ್ಲಿ ಎಲ್ಲರಿಗೂ ಸ್ವಚ್ಛತೆ ಅತ್ಯಮೂಲ್ಯವಾಗಿದೆ ಪ್ರತಿಬಾರಿ ನಾವು ಪಾಲಿಕೆಯನ್ನು ದೂರುವ ಮಾಡುವ ಬದಲು ಇಂಥ ಸಂಘ-ಸಂಸ್ಥೆಗಳನ್ನು ಬಳಸಿಕೊಂಡು ಸ್ವಚ್ಛತೆ ಕಾಪಾಡಬೇಕು ಹಾಗೂ ಎಸ್ಸೆಸ್ಸೆಫ್ ,ಸಹಾಯ ಹಾಗೂ ಕರ್ನಾಟಕ ಮುಸ್ಲಿಂ ಜಮಾತ್ ಸಂಸ್ಥೆ ಉತ್ತಮ ಕೆಲಸ ನಿರ್ವಹಿಸುತ್ತಿದ್ದು ಸಂಘದ ಪದಾಧಿಕಾರಿಗಳನ್ನು ಅಭಿನಂದಿಸಿದ್ದಾರೆ.

 

ಮುಸ್ಲಿಂ ಜಮಾತ್ ನ ಜಂಟಿ ಕಾರ್ಯದರ್ಶಿಗಳುಆದ ಮಹಮ್ಮದ್ ಅರಿಜ್ ರಾಝಾ ಮಾತನಾಡಿ ಸಾರ್ವಜನಿಕರು ಸ್ವಚ್ಛತೆಯನ್ನು ಕಾಪಾಡಿದಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಆದ್ದರಿಂದ ಎಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

 

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಅಧ್ಯಕ್ಷರಾದ ಸುಹೇಲ್, ಮೌಸಿ ನಯಾಜ್, ಜಮಾಲ್ ಶರೀಫ್ ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!