ದಲಿತ ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಆರೋಪ ಹೊತ್ತ ಗ್ರಾಮ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ವ್ಯಾಪ್ತಿಯ ಕೋರಗೆರೆ ಗ್ರಾಮದಲ್ಲಿ ವಾಸವಾಗಿರುವ ದಲಿತ ಕುಟುಂಬಕ್ಕೆ ಸೇರಿದ ನಾಗರಾಜು ಹಾಗೂ ಬಣಜಿಗ ಸಮುದಾಯಕ್ಕೆ ಸೇರಿದ ಶಶಿಕಲಾ ಎನ್ನುವ ದಂಪತಿ 2007ರಲ್ಲಿ ಪ್ರೀತಿಸಿ ವಿವಾಹವಾಗಿದ್ದ ಕುಟುಂಬ ಕೋರಗೆರೆ ಯಲ್ಲಿ ವಾಸವಾಗಿತ್ತು ಇನ್ನು ಅನ್ಯೋನ್ಯ ಜೀವನ ನಡೆಸಿದ ಕುಟುಂಬಕ್ಕೆ ಮಾರಕವಾಗಿದ್ದು ಜಾತಿ ವ್ಯವಸ್ಥೆ ಹಾಗೂ ಮೇಲ್ವರ್ಗದವರ ಕಿರುಕುಳ, ಹಾಗೂ ಗ್ರಾಮಸ್ಥರಿಂದ ಕಳೆದ ತಿಂಗಳು ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಹಿನ್ನೆಲೆಯಲ್ಲಿ ರಕ್ಷಣೆಗೆ ಹಾಗೂ ನ್ಯಾಯಕ್ಕಾಗಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೋದ ಪ್ರಕರಣ ವರದಿಯಾಗಿದೆ.
ಇನ್ನು ಹುಳಿಯಾರು ಹೋಬಳಿಯ ಕೋರಗೆರೆ ಗ್ರಾಮದಲ್ಲಿ ವಾಸವಿದ್ದ ದಂಪತಿ ಅಲ್ಪಸ್ವಲ್ಪ ಜಮೀನು ಹೊಂದಿದ್ದು ಹಾಗೂ ಯಾರಮುಂದೆಯೂ ಅಂಜದೆ ಅಳುಕದೆ ಯರಹಂಗು ಛಲದಿಂದ ಜೀವನ ನಡೆಸುತ್ತಿದ್ದರು ಆದರೆ ಇದನ್ನು ಸಹಿಸದ ಕೆಲ ಗ್ರಾಮದ ಮುಖಂಡರು ನಿರಂತರ ಕಿರುಕುಳ ನೀಡುತ್ತಾ ಹಲವು ಬಾರಿ ಹಲ್ಲೆ ಮಾಡಿದ್ದು ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆ, ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ ಹಾಗೂ ತಿಪಟೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು ಇದಕ್ಕೆ ಸಂಬಂಧಿಸಿದಂತೆ ರಾಜಿ ಪಂಚಾಯಿತಿಯು ಆಗಿ ಪ್ರಕರಣ ಸುಖಾಂತ್ಯಗೊಂಡಿದೆ . ನಂತರ ಅದೇ ಗ್ರಾಮದ ಮುಖಂಡರು ತಮ್ಮ ಬಳಿ ಕೂಲಿ ಕೆಲಸಕ್ಕೆ ದಂಪತಿಯನ್ನು ಕರೆದಾಗ ಅದನ್ನು ನಯವಾಗಿ ತಿರಸ್ಕರಿಸಿದ ಕುಟುಂಬದ ಮೇಲೆ ನಿತ್ಯ ಕಿರುಕುಳ ನೀಡುತ್ತಾ ಬಂದಿದ್ದಾರೆ ಎಂದು ಕುಟುಂಬ ಆರೋಪ ಬಂದ ಮಾಡಿದೆ.
ಆದರೆ ಇದನ್ನು ಸಹಿಸದ ಕೆಲ ಮೇಲ್ವರ್ಗದ ಮುಖಂಡರು ಪ್ರತಿನಿತ್ಯ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದರು ಎಂದು ಕುಟುಂಬ ಆರೋಪ ಮಾಡಿದೆ.
ಇನ್ನೂ ಕಳೆದ ತಿಂಗಳು 21 ರಂದು ಗ್ರಾಮಸ್ಥರಿಂದ ಶಶಿಕಲಾ ಹಾಗೂ ನಾಗರಾಜು ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದು ನಂತರ ಕುಟುಂಬಕ್ಕೆ ಬಹಿಷ್ಕಾರ ಹಾಕಿದ ವಿಷಯ ತಿಳಿದ ನಂತರ ಗ್ರಾಮದಲ್ಲಿ ಅನ್ನ ,ಆಹಾರ, ನೀರು ಹಾಗೂ ದಿನನಿತ್ಯದ ವಸ್ತುಗಳಿಗೆ ಪರದಾಡುತ್ತ ಕೊನೆಗೆ ಜೀವ ಭಯದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೋಗಿ ನ್ಯಯಕ್ಕಾಗಿ ಅಂಗಲಾಚುತ್ತಿದ್ದಾರೆ.
ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ದಲಿತ ಕುಟುಂಬಕ್ಕೆ ರಕ್ಷಣೆ ಇಲ್ಲವಾ….???
ಕಾನೂನು ಮತ್ತು ಸಂಸದೀಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಮಾಧುಸ್ವಾಮಿ ಅವರ ಸ್ವಕ್ಷೇತ್ರದಲ್ಲಿ ಇಂಥ ಆರೋಪವೊಂದು ಕೇಳಿಬಂದಿದೆ. ಉಸ್ತುವಾರಿ ಸಚಿವರ ಕೇಂದ್ರದಲ್ಲೇ ಇಂತಹ ಘಟನೆ ನಡೆದರೆ ಇನ್ನು ಸಾಮಾನ್ಯ ನಾಗರಿಕರ ಪಾಡೇನು ಎನ್ನುವ ಚರ್ಚೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.