ತುಮಕೂರಿನ ಸಿದ್ಧಗಂಗಾ ಮಠಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ.
ಇಂದು ಬೆಳಗ್ಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರು ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳ ದ್ವಿತೀಯ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆ ಪುಷ್ಪಾರ್ಚನೆ ಮಾಡಿ ಶ್ರೀಗಳ ಆಶೀರ್ವಾದ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂದು ಸಿದ್ದಗಂಗಾಶ್ರೀಗಳ ದ್ವಿತೀಯ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದು ಶ್ರೀಗಳ ಆಶೀರ್ವಾದ ಪಡೆದಿದ್ದೇವೆ ಎಂದರು.
ಮೂರನೇ ಅಲೆ ಹಾಗೂ ಹೊಸ ಸೋಂಕಿನ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿಗಳು.
ಇನ್ನು ದೇಶ-ವಿದೇಶ ಹಾಗೂ ರಾಜ್ಯದಲ್ಲಿ ಸಾಕಷ್ಟು ಆತಂಕ ಸೃಷ್ಟಿಸಿರುವ ಹೊಸ ಸೋಂಕಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಮೂರನೇ ಅಲೆ ಹಾಗೂ ಹೊಸ ಸೋಂಕಿನ ಮೇಲೆ ನಿಗಾ ವಹಿಸಿದ್ದು ಎಲ್ಲೆಲ್ಲಿ ಸೋಂಕಿತರು ಕಂಡುಬರುತ್ತಿದ್ದಾರೆ ಅಂತಹ ಜಾಗಗಳನ್ನು ಕಂಟೋನ್ಮೆಂಟ್ ಝೋನ್ ಮಾಡಿ ಅವರನ್ನು ಐಸೋಲೇಶನ್ ಗೆ ಕಳುಹಿಸಲಾಗುತ್ತಿದೆ ಈ ಮೂಲಕ ಎಚ್ಚರವಹಿಸಲಾಗಿದೆ. ಹೊಸದಾಗಿ ಗುರುತಿಸುತ್ತಿರುವ ಸೋಂಕಿತರಿಗೆ ಜೀನೊಮ್ ಟೆಸ್ಟುಗಳನ್ನು ಸಹ ಪರೀಕ್ಷೆ ಮಾಡುತ್ತಿದ್ದು ಈ ಮೂಲಕ ಎಚ್ಚರವಹಿಸಲಾಗಿದೆ ಇನ್ನೂ ಕೇರಳ ಹಾಗೂ ಹೊರದೇಶ ಹಾಗೂ ಹೊರರಾಜ್ಯಗಳಿಂದ ಬರುತ್ತಿರುವ ಪ್ರಯಾಣಿಕರ ಮೇಲೆ ಸಾಕಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಇನ್ನು ವೈದ್ಯಕೀಯ ಸಿಬ್ಬಂದಿಗಳು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಹೆಚ್ಚಿರುವ ಜಾಗದಲ್ಲಿ ಎಚ್ಚರಿಕೆ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಈ ಸಂಬಂಧ ಎಲ್ಲಾ ಜಿಲ್ಲೆಗಳಿಗೂ ಸಹ ಕಟ್ಟೆಚ್ಚರ ಕೊಟ್ಟಿದ್ದೇವೆ ಎಂದರು.
ಇನ್ನು ಹೊಸ ಸೋಂಕಿನ ಬಗ್ಗೆ ಸಾಕಷ್ಟು ಆತಂಕವಿದೆ ಸಾಕಷ್ಟು ದೇಶಗಳಲ್ಲಿ ಹೊಸ ಸೋಂಕು ಕಂಡು ಬರುತ್ತಿದೆ ವಿಶ್ವ ಆರೋಗ್ಯ ಸಂಸ್ಥೆ, ಪ್ರಧಾನ ಮಂತ್ರಿ ಅವರ ಸಚಿವಾಲಯ, ಹಾಗೂ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು ಎಂದರು.
ಶಾಲಾ ಕಾಲೇಜುಗಳ ಬಗ್ಗೆ ಹೆಚ್ಚಿನ ಗಮನ.
ಇನ್ನು ಮೂರನೇ ಹಳೆ ಹಾಗೂ ಹೊಸ ಸೋಂಕಿನ ಆತಂಕದ ನಡುವೆ ಶಾಲಾ-ಕಾಲೇಜುಗಳಿಗೆ ಬಿಗಿ ಕ್ರಮಗಳನ್ನು ಅನುಸರಿಸಲಾಗುತ್ತದೆ ಇನ್ನೂ ಹೆಚ್ಚಿನದಾಗಿ ಕಾಲೇಜಿನ ವಿದ್ಯಾರ್ಥಿಗಳ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸೋಂಕನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು ಹೆಚ್ಚಿನ ವಿದ್ಯಾರ್ಥಿಗಳು ಸೇರುವ ಜಾಗದಲ್ಲಿ ನಿಗಾ ವಹಿಸಲಾಗುವುದು ಎಂದರು.
ಇನ್ನು ವ್ಯಾಪಕ ಮಳೆ ಹಿನ್ನೆಲೆ ಬೆಳೆ ಹಾಗೂ ಪರಿಹಾರದ ಬಗ್ಗೆ ಸ್ಪಷ್ಟನೆ
ರಾಜ್ಯದಲ್ಲಿ ವ್ಯಾಪಕವಾಗಿ ಬಿದ್ದ ಮಳೆಯಿಂದಾಗಿ ಸಾಕಷ್ಟು ಬೆಳೆ ಹಾನಿ ಸಂಭವಿಸಿದ್ದು ಈಗಾಗಲೇ 685 ಕೋಟಿ ಎಷ್ಟು ಹಣವನ್ನು ಬಿಡುಗಡೆ ಮಾಡಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ದಾವಣಗೆರೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಪರಿಹಾರ ವಿತರಣೆ ಮಾಡಲಾಗುತ್ತಿದೆ . ಇನ್ನೂ ಹೆಚ್ಚಿನ ಪರಿಹಾರಕ್ಕಾಗಿ ಡಿಸಾಸ್ಟರ್ ಮ್ಯಾನೇಜ್ಮೆಂಟ್ಗೆ ಸಹ ಪತ್ರ ಬರೆದಿರುವುದಾಗಿ ತಿಳಿಸಿದರು ಈ ಸಂಬಂಧ ಕೇಂದ್ರಕ್ಕೂ ಪತ್ರ ಬರೆದಿದ್ದು ಕೇಂದ್ರದ ಅಧಿಕಾರಿಗಳ ತಂಡದಿಂದ ವೀಕ್ಷಣೆ ಮಾಡಿ ಪರಿಹಾರ ನೀಡಲು ಒತ್ತಾಯಿಸಲಾಗುವುದು ಎಂದರು.