ಬೆಳೆ ಹಾನಿ ಕುರಿತು ಚಾರಿತ್ರಿಕ ಮಹತ್ವಪೂರ್ಣ ನಿರ್ಣಯ ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ_ಬಿಜೆಪಿ ಮುಖಂಡ ಹುಲಿನಾಯ್ಕರ್

 

 

ತುಮಕೂರು_ಬೆಳೆಹಾನಿ ಕುರಿತ ಚಾರಿತ್ರಿಕ ಮಹತ್ವಪೂರ್ಣ ನಿರ್ಣಯ ಕೈಗೊಂಡ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ನೇತೃತ್ಯದ ಬಿಜೆಪಿ ಸರಕಾರ ರ ವರವೆಂದು ಮತ್ತೊಮ್ಮೆ ಸಾಬೀತು ಮುಖ ಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರವು ರೈತರಿಗಾಗಿ ಅತ್ಯಂತ

ಮಹತ್ವ ಪೂರ್ಣ ನಿರ್ಧಾರಗಳನ್ನು ಪ್ರಕಟಿಸಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಡಾಕ್ಟರ್ ಹುಲಿನಾಯ್ಕರ್ ತಿಳಿಸಿದರು.

ತುಮಕೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ರೈತರ ಬಗ್ಗೆ ಬಿಜೆಪಿ ನೇತೃತ್ವದ ಸರ್ಕಾರ ತೆಗೆದುಕೊಂಡಿರುವ ನಿರ್ಣಯಗಳು ಹಾಗೂ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.

 

ಈ ಮೂಲಕ ಕರ್ನಾಟಕ ಈವರೆಗೆ ಕಂಡಿರುವ ಒಬ್ಬ ಧೀಮಂತ ಮುಖ್ಯ ಮಂತ್ರಿ ಎಂಬುದು ಮತ್ತೆ ಸಾಬೀತಾಗಿದೆ.  ಹಿಂದಿನ ಸರಕಾರಗಳು ಕೇವಲ ಘೋಷಣೆಗನ್ನು ತಮ್ಮನ್ನು ಸೀಮಿತಗೊಳಿಸಿದವು. ‘ಆಡದೇ ಮಾಡುವವ ರೂಢಿಯೊಳಗುತ್ತಮನು ಎಂಬ ಮಾತಿನಂತೆ ಸರಾಜ ಬೊಮ್ಮಾಯಿ ಅವರ ಸರಕಾರವು ರೈತಪರ ಎಂಬುದೀಗ ಜನರ ಅರಿವಿಗೂ ಬರುವಂತಾಗಿದೆ. ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶದ ರೈತರಿಗೆ 969 ಕೋಟಿ ರೂಪಾಯಿ ಪರಿಹಾರ ವಿತರಣೆಗೆ ಅದು ಮುಂದಾಗಿದೆ. ರಾಜ್ಯ ಸರ್ಕಾರದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಐತಿಹಾಸಿಕ ನಿರ್ಧಾರ ಇದಾಗಿದೆ.ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಪ್ರಾಮಾಣಿಕ ಹೆಜ್ಜೆ ಇಡಲಾಗಿದೆ.

3 ಒಣಬೇಸಾಯ ದ್ವಿಗುಣ ಮತ್ತು ಒಂದು ಹೆಕ್ಟೇರ್ ಒಣ ಬೇಸಾಯ ಬೆಳಹಾನಿಗೆ ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯಿಂದ (ಎನ್.ಡಿ.ಆರ್.ಪವು ನಿಯಮದ ಪ್ರಕಾರ ನಿಗದಿಯಾಗಿರುವ ಪರಿಹಾರದ ಮೊತ್ತ 6800 ರೂಪಾಯಿ ಮಾತ್ರ ಇದೆ ಈ ಪರಿಹಾರ ಮೊತ್ತ ಕಡಿಮೆಯಾಗುತ್ತದೆ ಹಾಗೂ ಇದನ್ನು ಹೆಚ್ಚಿಸಬೇಕೆಂಬ ತಮ್ಮ ಆಶಯವನ್ನು ಬಸವರಾಜ ಬೊಮ್ಮಾಯಿ ಅವರು ಜಾರಿಗೊಳಿಸಲು ಮುಂದಾಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಈ ಮೊತ್ತಕ್ಕೆ, ಅಧಿಕವಾಗಿ ತನ್ನ 6800 ರೂಪಾಯಿ ಕೊಡಲು ನಿರ್ಧಾರ ಮಾಡಿದೆ ಎಂದು ವಿಧಾನಸಭೆಯಲ್ಲಿ ಮುಖ್ಯ ಮಂತ್ರಿ ಬಸವರಾಜ್ ಬೊಕ್ಕಸದಿಂದ ಬೊಮ್ಮಾಯಿ ಅವರು ಅತಿವೃಷ್ಟಿ ಹಾಗೂ ಬೆಳೆಹಾನಿ ಮೇಲಿನ ಚರ್ಚೆಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ. ಇದೊಂದು ಮಹತ್ವಪೂರ್ಣ ನಿರ್ಣಯವಾಗಿದ್ದು, ಕೇವಲ ಬಾಯಿ ಮಾತಿನ ನಿರ್ಧಾರ ಇದಲ್ಲ ಎಂಬುದಕ್ಕೆ, ಹಣಕಾಸು ಮೀಸಲಿಟ್ಟಿರುವುದೇ ಸಾಕ್ಷಿಯಾಗಿದೆ. ಇದರಿಂದಾಗಿ ಹೆಕ್ಟೇರ್‌ ಒಣಬೇಸಾಯದಲ್ಲಿನ ಬೆಳೆ ಹಾನಿಗೆ 13,600 ರೂಪಾಯಿ ಬೆಳೆ ಪರಿಹಾರ ಲಭಿಸಲಿದೆ.

 

4. ನೀರಾವರಿ ಪ್ರದೇಶ: ಹೆಚ್ಚುವರಿ 11,500 ರೂಪಾಯಿ ಅದೇ ರೀತಿ ನೀರಾವರಿ ಪ್ರದೇಶದ ಒಂದು ಹೆಕ್ಟೇರ್ ಬೆಳೆ ಹಾನಿಗೆ 13500 ರೂಪಾಯಿ ನಿಗದಿಯಾಗಿದೆ. ಇದಕ್ಕೆ ಹೆಚ್ಚುವರಿಯಾಗಿ 11500 ರೂಪಾಯಿ ಸೇರಿಸಿ ಒಟ್ಟು 25000 ಬೆಳೆ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಒಟ್ಟು 1269 ಲಕ್ಷ ಹೆಕ್ಟೇರ್ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ. 5 ತೋಟಗಾರಿಕೆ ಬೆಳೆ- 28 ಸಾವಿರ ರೂಪಾಯಿ ತೋಟಗಾರಿಕೆ ಒಂದು ಹೆಕ್ಟೇರ್ ಬೆಳೆ ಹಾನಿಗೆ 18 ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತಿದೆ. ಇದಕ್ಕೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದ 10000 ರೂಪಾಯಿ ನೀಡಲು ನಿರ್ಧಾರ ಮಾಡಿದ್ದು, ಇದರಿಂದ ಪ್ರತಿ ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಗೆ ಒಟ್ಟು 28 ಸಾವಿರ ರೂಪಾಯಿಗಳನ್ನು ಪರಿಹಾರ ರೂವದಲ್ಲಿ ವಿತರಿಸಲು ರಾಜ್ಯ ಸರಕಾರ ಮುಂದಾಗಿದೆ.

 

6. 1,200 ಕೋಟಿ ರೂಪಾಯಿ ಹೆಚ್ಚುವರಿ ಹೊರ ರಾಜ್ಯ ಸರ್ಕಾರ ಕೋವಿಡ್ ಮತ್ತು ಆರ್ಥಿಕ ತೊಂದರೆ ನಡುವೆಯೂ ಈ ನಿರ್ಧಾರ ಕೈಗೊಂಡಿದೆ ನಾಡಿನ ಬೆನ್ನುಲುಬಾದ ರೈತರ ನೆರವಿಗೆ ನಿಲ್ಲುವ ಪ್ರಮುಖ ನಿರ್ಧಾರ ಇದಾಗಿದೆ. ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರ ನೇತೃತ್ಯದ ರಾಜ್ಯ ಸರಕಾರವು ರೈತವರ ಎಂಬುದು ಮತ್ತೆ ಜಾಹೀರಾಗಿದೆ. ಈ ಹೆಚ್ಚುವರಿ ಮೊತ್ತದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಒಟ್ಟು 1,200 ಕೋಟಿ ಆರ್ಥಿಕ ಹೊರೆ ಬೀಳಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

 

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ರೈತರ ಮಕ್ಕಳಿಗೆ ಶಿಷ್ಯವೇತನ: ದಿನ ರೈತರ ಮಕ್ಕಳಿಗೆ ಒಂದು ಮಹತ್ವದ ಯೋಜನೆಯನ್ನು ಘೋಷಣೆ ಮಾಡಿದ್ದರು. ಇದೀಗ ರಾಜ್ಯ ಸರ್ಕಾರ ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಬಗ್ಗೆ ಅಧಿಕೃತ ಆದೇಶ ಹೊರಡಿಸಿ ಅನುಷ್ಟಾನಕ್ಕೆ ತಂದಿದೆ. ಇದರಡಿ ಪಿಯುಸಿ, ಐಟಿಐ ಅಥವಾ ತತ್ಸಮಾನ ತರಗತಿಗಳಲ್ಲಿ ಓದುತ್ತಿರುವ ಬಾಲಕರಿಗೆ 2,500 ಮತ್ತು ಬಾಲಕಿಯರಿಗೆ

 

6. ತಲಾ 3,000 ರೂಪಾಯಿ ಶಿಷ್ಯ ವೇತನ ದೊರಕಲಿದೆ ಪದವಿ, ಎಂಬಿಬಿಎಸ್, ಎಂಜಿನಿಯರಿಂಗ್ ಪದವಿ ಹಾಗೂ ಪದವಿಗೆ ಸಮನಾದ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ತಲಾ 5,000 ಮತ್ತು ವಿದ್ಯಾರ್ಥಿನಿಯರಿಗೆ ತಲಾ 5,500 ರೂಪಾಯಿ ಶಿಷ್ಯವೇತನ ಪ್ರಕಟಿಸಲಾಗಿದೆ ಅಲ್ಲದೆ, ಕಾನೂನು ಪದವಿ, ಅರೆ ವೈದ್ಯಕೀಯ, ಬಿ, ಫಾರ್ಮಾ ನಸಿಂಗ್‌ ಮತ್ತು ಇತರ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ 7,500 ಮತ್ತು ವಿದ್ಯಾರ್ಥಿನಿಯರಿಗೆ 8000 ಶಿಷ್ಯವೇತನ ನೀಡಲಾಗುತ್ತದೆ ವೈದ್ಯಕೀಯ ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಸ್ನಾತಕೋತ್ತರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ 10000 ವಿದ್ಯಾರ್ಥಿನಿಯರಿಗೆ 11,000 ಶಿಷ್ಯ ವೇತನ ಘೋಷಿಸಲಾಗಿದೆ.

 

ಕೋವಿಡ್ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳು ನಾಡಿನ ಅಭಿವೃದ್ಧಿಗೆ ಗರಿಷ್ಠ ಪ್ರಯತ್ನದ ಜೊತೆ ಅನ್ನದಾತನ ಮತ್ತು ಅನ್ನದಾತನ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕೆಂಬ ಆಶಯವನ್ನು ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರ ಈಡೇರಿಸಲು ಕಟಿಬದ ಎಂಬುದನ್ನು ತಿಳಿಸುವಂತಿದೆ ಎಂದಿದ್ದಾರೆ.

 

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಾಧ್ಯಮ ಸಂಚಾಲಕರಾದ ಶಿವಕುಮಾರ್ ಮುಖಂಡರಾದ ಶಿವಕುಮಾರ್, ಕೊಪ್ಪಳ ನಾಗರಾಜ ಹಾಜರಿದ್ದರು.

 

 

ವರದಿ_ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!