ಕಾಲೇಜಿನ ಪರಿಕರಗಳಿಗೆ ಹಾನಿ ದುರಸ್ತಿಗೆ ಎಂಎಲ್ಸಿ ಚಿದಾನಂದಗೌಡ ಆಗ್ರಹ .
ಜಿಲ್ಲೆಯಲ್ಲಿ ಯಾವುದೇ ಪ್ರಮುಖ ಚುನಾವಣೆ ನಡೆಯಲಿ ಮಸ್ತರಿಂಗ್ ಡಿಮಸ್ತರಿಂಗ್ ಕಾರ್ಯಕ್ಕೆ ಮೊದಲಿಗೆ ಸುಪರ್ದಿಗೆ ಪಡೆಯುವುದು ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು. ಆದರೆ ಚುನಾವಣೆ ಮುಗಿದಮೇಲೆ ಕಾಲೇಜಿನತ್ತ ಸುಳಿಯದ ಅಧಿಕಾರಿಗಳು ತಿರುಗಿ ನೋಡದಿರುವುದು ದೊಡ್ಡ ಅನಾಹುತ ನಷ್ಟಕ್ಕೆ ಕಾರಣವಾಗುತ್ತದೆ ಈ ಬಗ್ಗೆ ವಿಧಾನಪರಿಷತ್ ಸದಸ್ಯ ಚಿದಾನಂದಗೌಡ ಗಂಭೀರ ಧ್ವನಿಯೆತ್ತಿದ್ದು ದುರಸ್ತಿಗೆ ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳು ಪೋಷಕರು ಸಿಬ್ಬಂದಿ ಅನುಭವಿಸುತ್ತಿದ್ದ ಸಮಸ್ಯೆ ಅರಿತು ಭಾನುವಾರ ಕಾಲೇಜಿಗೆ ಭೇಟಿ ಕೊಟ್ಟ ಪರಿಷತ್ ಸದಸ್ಯರು ಅಲ್ಲಿಂದಲೇ ತಹಸೀಲ್ದಾರರಿಗೆ ಕರೆ ಮಾಡಿ ಸಮಸ್ಯೆ ನಿವಾರಣೆಗೆ ಸೂಚಿಸಿದ್ದಾರೆ.
ಕಳೆದ ತಿಂಗಳು ಡಿಸೆಂಬರ್ 22 ಹಾಗೂ 27ರಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಕಾಲೇಜನ್ನು ಮಸ್ಟರಿಂಗ್ ಕಾರ್ಯಕ್ಕೆ ಬಳಸಲಾಗಿತ್ತು ಪ್ರಾಂಶುಪಾಲರ ಕಚೇರಿ ಬಿಟ್ಟು ಡ್ರಾಯಿಂಗ್ ರೂಮ್ ಸೇರಿದಂತೆ ಉಳಿದೆಲ್ಲ ಕೊಠಡಿಗಳನ್ನು ಮತಪೆಟ್ಟಿಗೆ ಭದ್ರತೆ ,ಎಣಿಕೆ ಕೊಠಡಿ ಹಾಗೂ ಅಧಿಕಾರಿಗಳಿಗೆ ತಾತ್ಕಾಲಿಕ ಕಚೇರಿಯಾಗಿ ಬಳಕೆ ಮಾಡಿ ಬೇಕಾದ ಕಡೆಯಲ್ಲ ವೈರಗಳನ್ನು ಎಸೆದು ಡೆಸ್ಕ್ ಇತರೆ ಪರಿಕರಗಳನ್ನು ಎಲ್ಲೆಂದರಲ್ಲಿ ನೂಕಿ 50 ಲಕ್ಷಕ್ಕೂ ಹೆಚ್ಚು ನಷ್ಟ ಉಂಟು ಮಾಡಲಾಗಿದೆ.ಮತಪೆಟ್ಟಿಗೆ ಭದ್ರತೆಗಾಗಿ ಕಿಟಕಿಗಳಿಗೆ ಮರದ ತಡೆಹಾಕಿ ಮುಚ್ಚಿರುವುದು ತರಗತಿಯಲ್ಲಿ ಬಳಕೆ ಬಾರದಂತಾಗಿದೆ ಡಿಪ್ಲೊಮಾ ವಿದ್ಯಾರ್ಥಿಗಳು ಕತ್ತಲಲ್ಲಿ ಅಧ್ಯಯನ ಮಾಡುವಂತಹ ಪರಿಸ್ಥಿತಿಗೆ ಅಧಿಕಾರಿಗಳು ಕಾಲೇಜಿನ ತಂದು ನಿಲ್ಲಿಸಿರುವುದು ಖಂಡನೀಯ. ಈ ಬಗ್ಗೆ ಕಾಲೇಜು ಸಿಬ್ಬಂದಿಗಳು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.