ಜೇತವನ ಬೌದ್ಧ ವಿಹಾರದಲ್ಲಿ ಭಗವಾನ್ ಬುದ್ಧರ 2567 ನೆ ಜಯಂತಿ ಆಚರಣ
ಹನೂರು : ಭಗವಾನ್ ಗೌತಮ ಬುದ್ಧರಿಗೆ ಜ್ಞಾನೋದಯವಾದ ದಿನ, ಹುಟ್ಟಿದ ದಿನ ಹಾಗೂ ನಿರ್ವಾಣ ಹೊಂದಿದ ದಿನವನ್ನು ಭಾರತಾದ್ಯಂತ ಬುದ್ಧ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಕೆಲವು ದೇಶಗಳ ಬುದ್ಧನ ಅನುಯಾಯಿಗಳು ಈ ದಿನವನ್ನು ವೆಸೆಕ ಎಂದು ಕರೆಯುತ್ತಾರೆ. ವೆಸೆಕ ಎಂದರೆ ಏಪ್ರಿಲ್- ಮೇ ತಿಂಗಳ ಪವಿತ್ರ ದಿನ ಎಂದರ್ಥ.
ಭಗವಾನ್ ಗೌತಮ ಬುದ್ಧರ ಜಯಂತಿಯದು ಹನೂರು ತಾಲೂಕಿನ ಚೆನ್ನಾಲಿಂಗನಹಳ್ಳಿಯಲ್ಲಿರುವ ಜೇತವನ ಬೌದ್ಧ ವಿಹಾರದಲ್ಲಿ ವಿವಿಧ ಗ್ರಾಮದಿಂದ ಆಗಮಿಸಿದಂತಹ ಉಪಾಸಕ ಉಪಾಸಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದಿವ್ಯ ಸಾನಿಧ್ಯ ಪೂಜ್ಯ ಮನೋರಂಕ್ಕಿತ ಬಂತೇಜಿಗಳ ಸಮ್ಮುಖದಲ್ಲಿ ಪಂಚಾಶೀಲ ಸ್ವೀಕರಿಸಿ ಧ್ಯಾನ ಮಾಡುವ ಮೂಲಕ ಬುದ್ಧರ ಸ್ಲೋಕಗಳ ಬಗ್ಗೆ ಪಠಣೆ ಮಾಡಿ ಧ್ಯಾನ ಮಾಡುವುದರ ಮೂಲಕ ಬುದ್ಧರಿಗೆ ನಮನ ಸಲ್ಲಿಸಿ ನಂತರ ಲಘು ಉಪಹಾರ ಸ್ವೀಕರಿಸಿ ಗೌತಮ ಬುದ್ಧರ ಜನ್ಮ ದಿನಾಚರಣೆಯನ್ನು ಬಹಳ ಅರ್ಥ ಪೂರ್ಣವಾಗಿ ಆಚರಣೆ ಮಾಡಿದ್ದಾರೆ ವಿವಿಧ ಗ್ರಾಮದಿಂದ ಬಂದಿದ್ದ ಯುವಕರು ಮಹಿಳೆಯರು ಸರ್ಕಾರಿ ನೌಕರರು ಸ್ಥಳೀಯರು ಭಾಗಿಯಾಗಿದ್ದರು
ವರದಿ :- ನಾಗೇಂದ್ರ ಪ್ರಸಾದ್