ದಲಿತ ಸಂಘಟನೆಗಳ ಓಕ್ಕೂಟದ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಆಚರಣೆ

ದಲಿತ ಸಂಘಟನೆಗಳ ಓಕ್ಕೂಟದ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಆಚರಣೆ.

ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಡಾ ಅಂಬೇಡ್ಕರ್ ರಸ್ತೆಯಲ್ಲಿ ತುಮಕೂರು ಜಿಲ್ಲೆಯ ದಲಿತ ಸಂಘಟನೆಗಳ ಓಕ್ಕೂಟದ ಸಹಯೋಗದಲ್ಲಿ ಸಂವಿಧಾನ ಸಮರ್ಪಣೆ ದಿನದ ದಿನಾಚರಣೆಯನ್ನು ಆಯೋಜಿಸಿದ್ದ ಕಾರ್ಯಕ್ರಮ ನಡೆಯಿತು. ತುಮಕೂರು ತಾಲ್ಲೂಕಿನ ತಹಶೀಲ್ದಾರ್ ಮೂಹನ್ ಕುಮಾರ್ ರವರು ಸಂವಿಧಾನ ಸಮರ್ಪಣೆ ಪಿಠಿಕೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಸಂವಿಧಾನ ಪಿಠಿಕೆಗೆ ನಮನಗಳನ್ನು ಸಲ್ಲಿಸಿದರು.

 

ದಲಿತ ಸಂಘಟನೆಗಳ ಮುಖಂಡರು ಸಂವಿಧಾನದ ಪಿಠಿಕೆ ಓದುವುದು ಈ ಕಾರ್ಯಕ್ರಮದಲ್ಲಿ ವಿನೂತನವಾಗಿದ್ದು ಸಂವಿಧಾನ ಹುಳುವಿಗಾಗಿ ಎಲ್ಲರೂ ಹೋರಾಟ ನಡೆಸಲು ಪ್ರಮಾಣ ಮಾಡಲಾಯಿತು.

 

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೂಟ್ಟ ಶಂಕರ್ ರವರು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಬಾಲ್ಯದ ದಿನಗಳಲ್ಲಿ ಅಲಾವಾರು ರೀತಿಯಲ್ಲಿ ಶೊಷಣೆ ಅವಮಾನಗಳನ್ನು ಅನುಭವಿಸಿ ಉನ್ನತ ಮಟ್ಟದ ವಿಧ್ಯಾಭ್ಯಾಸ ಮಾಡುವ ಮೂಲಕ ಕರುಡು ಸಮಿತಿಯ ಸದಸ್ಯರಾಗಿ ದೇಶದಲ್ಲಿ ಅಸ್ಪೃಶ್ಯತೆ ಅಸಮಾನತೆ ಹೋಗಲಾಡಿಸಿ ಸಮಾನತೆಯ ದೃಷ್ಟಿಯಿಂದ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ದೊರೆಯುವ ಸಲುವಾಗಿಯೇ ಸಂವಿಧಾನ ರಚಿಸಿದ್ದಾರೆ .

 

ಭಾರತದ ಎಲ್ಲಾ ಪ್ರಜೆಗಳಿಗೆ ಸಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ದೊರೆಯುವಂತೆ ಮಾಡುವುದಕ್ಕಾಗಿ 1949 ನೆಯ ಇಸವಿಯ ನವಂಬರ್ ತಿಂಗಳ 26 ನೇ ದಿನದಂದು ಭಾರತದ ಸಂಸತ್ತಿನಲ್ಲಿ ಅವರು ಬರೆದಂತಹ ಸಂವಿಧಾನವನ್ನು ಅರ್ಪಿಸುವ ಮೂಲಕ ಈ ದೇಶದಲ್ಲಿ ಸಮಾನತೆಯನ್ನು ಸಾರಿದ್ದಾರೆ . ಅಂತಹ ಪವಿತ್ರವಾದ ಸಂವಿಧಾನವನ್ನು ಕೇಲವು ಪಟ್ಟಭದ್ರ ಹಿತಾಸಕ್ತಿ ಕೈಗಳು ಸಂವಿಧಾನವನ್ನು ಅಳಿಸುವ ಸಂಚು ಮಾಡಲು ಯತ್ನಿಸುತ್ತಿದ್ದಾರೆ ಆದರೆ ದೇಶದ ಹಿರಿಮೆಯನ್ನು ಸಾರುವಂತ ಸಂವಿಧಾನವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರು ಓಟ್ಟಾಗಿ ಹೋರಾಟ ಮಾಡುವ ಅನಿವಾರ್ಯತೆ ನಮ್ಮ ಮುಂದಿದೆ ಎಂದು ತಿಳಿಸಿದರು.

 

ಈ ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ರಂಗಯ್ಯ. ಭಾನುಪ್ರಕಾಶ್.ವೀರುಪಾಕ್ಷ್ .ಗೂಳುರು ರಾಜಣ್ಣ. ಟಿ.ಸಿ. ರಾಮಯ್ಯ .ಜೆ.ಸಿ. ಬಿ ವೆಂಕಟೇಶ್. ಯೋಗೀಶ್ ಮೇಳೇಕಲ್ಲಹಳ್ಳಿ. ಬಂಡೆ ಕುಮಾರ್. ಕೆಂಪರಾಜು. ಕೂರ ರಾಜಣ್ಣ. ಮಾರುತಿ ಪ್ರಸಾದ್. ನಟರಾಜ್. ರಾಮಮೂರ್ತಿ. ಕೌತಮಾರನಳ್ಳಿ ಶಿವರಾಜ್. ಛಲವಾದಿ ಶೇಕರ್. ಅಮರ್ ಟಿ.ಸಿ. ಸುರೇಶ್ .ಕೂಡೆಯಾಲ ಮಹದೇವ್. ರಂಗಸ್ವಾಮಿ. ಹಾಗು ಅಲವಾರು ದಲಿತ ಸಂಘಟನೆಯ ಮುಖಂಡರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!