ಮೂರು ದಶಕಗಳ ನಂತರ ಆದಿಶಕ್ತಿ ಶ್ರೀ ಕೋಣನ ಮಾರಮ್ಮ ಜಾತ್ರೆ ಆಚರಣೆ
ಹನೂರು :- ತಾಲೋಕಿನ ಸುತ್ತ ಮುತ್ತಲ ಸುಮಾರು ಏಳಕ್ಕೂ ಹೆಚ್ಚು ಗ್ರಾಮಗಳು ಆಚರಣೆ ಮಾಡುತಿದ್ದ ಶ್ರೀ ಕೋಣನ ಮಾರಮ್ಮ ಜಾತ್ರೆ ಪುನರರಾoಭಿಸಲಾಗಿದೆ. ಮಂಗಲ ಗ್ರಾಮದಲ್ಲಿ ಆದಿಶಕ್ತಿ ಶ್ರೀ ಕೋಣನ ಮಾರಮ್ಮ ಜಾತ್ರಾ ಮಹೋತ್ಸವ 8ನೇ ದಿನವಾದ ಮಂಗಳವಾರ ಬಲಿ ಕಂಬ ಪ್ರತಿಷ್ಠಾಪನಾ ಪೂಜಾ ಕಾರ್ಯಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು.
ಜಾತ್ರೆಯ ಸಂಪ್ರದಾಯದಂತೆ ತಾಲೋಕಿನ ಮಂಗಲ, ಮೋಡಳ್ಳಿ ಗಡಿ ಕಾಮಗೆರೆ , ಬಿ.ಗುಂಡಾಪುರ, ಹನೂರು, ಕಣ್ಣುರು ಗ್ರಾಮಗಳ ಜನತೆ ಬಲಿ ಕಂಬವನ್ನು ಮಂಗಳ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮೂಲಕ ಹೊತ್ತು ತಂದರು. ಬಲಿಕಂಬವನ್ನು ದೇವಾಲಯದ ಸುತ್ತ ಮೂರು ಸುತ್ತು ಪ್ರದಕ್ಷಣೆ ಹಾಕಿ ಪ್ರತಿಷ್ಠಾಪಿಸಲಾಯಿತು.
ಈ ಸಂದರ್ಭದಲ್ಲಿ ಮಂಗಲ ಕಾಮಗೆರೆ ಹಾಗೂ ಸುತ್ತ ಮುತ್ತಲ ಗ್ರಾಮದ ಯಜಮಾನರು, ಮುಖಂಡರುಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ :- ನಾಗೇಂದ್ರ ಪ್ರಸಾದ್