ವಿದ್ಯೋದಯ ಕಾನೂನು ಕಾಲೇಜಿನಲ್ಲಿ ರಕ್ತದಾನ ಶಿಬಿರ
ತುಮಕೂರು: ತುರ್ತು ಸಂದರ್ಭದಲ್ಲಿ ರಕ್ತ ಅಗತ್ಯವಿದೆ ಎಂದು ಹಳ್ಳಿಯ ಮುಗ್ಧ ಜನರು ಅಂಗಲಾಚುತ್ತಿದ್ದಾಗ ಕೆಲವೊಮ್ಮೆ ನಾವೂ ಅಸಹಾಯಕ ಪರಿಸ್ಥಿಯನ್ನು ಎದುರಿಸಬೇಕಾಗುತ್ತದೆ. ಆಗ ರಕ್ತ ನಿಧಿಯಂತೆ ಜೊತೆನಿಲ್ಲುವುದು ವಿದ್ಯೋದಯ ಕಾನೂನು ಕಾಲೇಜು ಎಂದು ತುಮಕೂರು ಜಿಲ್ಲಾಸ್ಪತ್ರೆಯ ಆರ್.ಎಂ.ಒ ಡಾ. ವೀಣಾ ಹೇಳಿದರು.
ವಿದ್ಯೋದಯ ಕಾನೂನು ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಪ್ರೊ. ಎಚ್.ಎಸ್ ಶೇಷಾದ್ರಿ ಅವರ 98ನೇ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಆಸ್ಪತ್ರೆ ತುಮಕೂರು ಹಾಗೂ ನೆಹರು ಯುವಕೇಂದ್ರದ ಸಹಯೋಗದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೇತ್ರದಾನ, ವಿದ್ಯಾದಾನ, ಅನ್ನದಾನಗಳಂತೆ ರಕ್ತದಾನವೂ ಶ್ರೇಷ್ಠವಾಗಿದೆಯಂದು ಹೇಳಿದರು.
ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಫೂರ್ತಿ. ಅವರ ಆಶಯದಂತೆ ಯುವಜನರು ಸಮಾಜಿಕ ಜವಾಬ್ದಾರಿ ಹೊರಲು ಉತ್ಸುಕರಾಗಿರಬೇಕು ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎ. ನಾರಾಯಣಸ್ವಾಮಿ ತಿಳಿಸಿದರು. ಮತ್ತು
ನೊಂದವರಿಗೆ ಸಹಕಾರ ನೀಡಬೇಕು. ಜೀವ ಉಳಿಸುವ ಕಾರ್ಯ ದೊಡ್ಡದು. ಪ್ರತಿಯೊಬ್ಬರೂ ರಕ್ತ ನೀಡುವ ಮೂಲಕ ಕಷ್ಟದಲ್ಲಿರುವವರಿಗಾಗಿ ಮಿಡಿಯುವುದು ಮಾನವೀಯ ಮೌಲ್ಯ ಎಂದರು.
ಕಾಲೇಜಿನ ಸಿಇಒ ಪ್ರೊ.ಕೆ. ಚಂದ್ರಣ್ಣ ಮಾತನಾಡಿ, ರಕ್ತ ಸಂಗ್ರಹ ಮಾಡುವುದು ಸುಲಭವಲ್ಲ. ಇಂದು ಏನನ್ನು ಬೇಕಾದರೂ ತಯಾರು ಮಾಡುಷ್ಟು ವಿಜ್ಞಾನ ಬೆಳೆದಿದೆ. ರಕ್ತಕ್ಕೆ ಪರ್ಯಾಯವಾಗಿ ಬೇರೊಂದನ್ನು ಸೃಷ್ಟಿಸಲು ಸಾಧ್ಯವಿಲ್ಲ. ಒಬ್ಬರ ರಕ್ತದಿಂದ ಮತ್ತೊಬ್ಬರನ್ನು ಬದುಕಿಸಲು ಸಾಧ್ಯವಿದೆ. ನಾವು ಸಮಾಜದ ಋಣ ತೀರಿಸಬೇಕೆಂಬ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜನೆ ಮಾಡಿದ್ದೇವೆ ಎಂದರು.ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಕೀಲರು ಹಾಗೂ ವಿದ್ಯೋದಯ ಪ್ರತಿಷ್ಠಾನದ ಸದಸ್ಯರಾದ ಹಾಗೂ ಆಡಳಿತ ಮಂಡಳಿಯ ಸದಸ್ಯರು ಆದ ಎಚ್.ಎಸ್ ರಾಜು, ಭಾಗವಹಿಸಿದ್ದರು. ಇವರು ಮಾತನಾಡಿ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿಯನ್ನು ತಮ್ಮಲ್ಲಿ ಮೈಗೂಡಿಸಿಕೊಳ್ಳಲು ಹಿತನುಡಿಗಳನ್ನು ತಿಳಿಸಿದರು. ಮತ್ತು ಸಾಮಾಜಿಕ ಕಾರ್ಯಕ್ರಮ ಇನ್ನೂ ಯಾವುದೇ ಆದರೂ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಕೆ. ಕಿಶೋರ್,ಪ್ರೊ. ದ್ಯಾನ ಬಸವರಾಜು ಹಾಗೂ ಜಿಲ್ಲಾಸ್ಪತ್ರೆ ರಕ್ತ ನಿಧಿ ಕೇಂದ್ರದ ಮೆಡಿಕಲ್ ಆಫೀಸರ್ ಡಾ. ಇಂದು ಹಾಗೂ ಕಾಲೇಜಿನ ಭೋದಕ ಮತ್ತು ಭೋತಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು
ವರದಿ_ ಶ್ರೀನಿವಾಸಮೂರ್ತಿ ತುಮಕೂರು