ರಕ್ತದಾನದಿಂದ ಆರೋಗ್ಯ ವೃದ್ದಿ – ತಾ ಆರೋಗ್ಯಾಧಿಕಾರಿ ಡಾ.ವಿಜಯ್ ಕುಮಾರ್

ರಕ್ತದಾನದಿಂದ ಆರೋಗ್ಯ ವೃದ್ದಿ – ತಾ ಆರೋಗ್ಯಾಧಿಕಾರಿ ಡಾ.ವಿಜಯ್ ಕುಮಾರ್

ಕೊರಟಗೆರೆ – ಅನ್ನದಾನಕ್ಕಿಂತ ರಕ್ತದಾನ ಅತಿ ಶ್ರೇಷ್ಠ ವಾದ ದಾನ .ರಕ್ತದಾನದಿಂದ ಜನರ ಪ್ರಾಣ ಉಳಿಸಿದಂತಾಗುತ್ತದೆ.ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯವಂತರಾಗಿಯೂ ಇರಲು ಸಾಧ್ಯ. ಎಂದು ಕೊರಟಗೆರೆಯ  ಸಾರ್ವಜನಿಕ ಆಸ್ಪತ್ರೆಯ   ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಕುಮಾರ್ ತಿಳಿಸಿದರು.

ಅವರು ಸೋಮವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಮತ್ತು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಕೊರಟಗೆರೆ ಇವರ ಸಂಯುಕ್ತಶ್ರಾಯದಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ರಕ್ತದಾನ ಶಿಬಿರಗಳಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬಯಸುವವರು ಆರೋಗ್ಯವಂತರಾಗಿದ್ದು ಮತ್ತು ರಕ್ತ ನೀಡ ಬಯಸುವವರು ನೀಡಿದರೆ ಅಪಘಾತ ಇಲ್ಲವೇ ರಕ್ತದ ಕೊರತೆಯಿಂದ ತೊಂದರೆಗೂಳಗಾದವರಿಗೆ ನೀವು ನೀಡುವ ರಕ್ತದಿಂದ ಮರುಜೀವ ಪಡೆಯುವರು.ಹಾಗೂ ರಕ್ತ ನೀಡಿದವರ ಆರೋಗ್ಯವು ಕೂಡಾ ಚೇತರಿಕೆಗೊಳ್ಳುವುದು ಎಂದರು.

ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಎನ್ ಎ ಪ್ರಕಾಶ್ ಮಾತನಾಡಿ ಹೆಣ್ಣು ಗಂಡು ಎಂಬ ಭೇದವಿಲ್ಲದೆ 18 ರ ಮೇಲ್ಪಟ್ಟ 60 ವರ್ಷದ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು.ಗಂಡಸರು ಮೂರು ತಿಂಗಳಿಗೊಮ್ಮೆ ಮತ್ತು ಹೆಂಗಸರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು .ದಾನಿಯ ದೇಹದ ತೂಕ 45 ಕೆಜಿ ಗಿಂತ ಹೆಚ್ಚಿರಬೇಕು.ರಕ್ತದಲ್ಲಿ ಹಿಮೊಗ್ಲೋಬಿನ್ ಅಂಶ 12.5 ಗ್ರಾಂ ಗಿಂತ ಹೆಚ್ಚಿರಬೇಕು .ಸಿಸ್ಟೋಲಿಕ್ ರಕ್ತದೊತ್ತಡವು 100 ರಿಂದ 150 ಇದ್ದು .ಡಯಾಸ್ಟೋಲಿಕ್ ಒತ್ತಡವು 70 ರಿಂದ 100 ಇರುವವರು ರಕ್ತದಾನ ಮಾಡಬಹುದು.ರಕ್ತದಾನ ಮಾಡುವ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆ ಆಗುತ್ತದೆ. ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಯ ಶೇಖ್ ಮಹಮದ್ .ಸಾರ್ವಜನಿಕ ಆಸ್ಪತ್ರೆಯ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಕುಮಾರ್ .ಮುಖ್ಯ ವೈದ್ಯಾಧಿಕಾರಿ ಡಾ.ಎನ್ ಎ ಪ್ರಕಾಶ್ .ಕ್ಷೇತ್ರ ಆರೋಗ್ಯ ಶಿಕ್ಷಾಣಾಧಿಕಾರಿ ಎಮ್ ಎನ್ ಪದ್ಮಿನಿ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!