ಆಮ್ ಆದ್ಮಿ ಪಕ್ಷದ ಮುಖಂಡರಿಂದ ಕಂಬಳಿ ವಿತರಣೆ.
ತುಮಕೂರು: ಡಾ.ಇಂಡಿಯಾ ಚಾರಿಟಬಲ್ ಟ್ರಸ್ಟ್ ಹಾಗೂ ಆಮ್ ಆಧ್ಮಿ ಪಕ್ಷದ ವತಿಯಿಂದ ತುಮಕೂರಿನ ಟೌನ್ ಹಾಲ್ ಸುತ್ತಮುತ್ತ ಮತ್ತು ರೈಲ್ವೆಸ್ಟೇಷನ್ ಸಮೀಪ ರಸ್ತೆ ಬದಿ ಕೆಲಸ ಮಾಡುವ ನಿರ್ಗತಿಕರಿಗೆ ಕಂಬಳಿ ಮತ್ತು ಬೆಡ್ ಶೀಟ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ನಗರ ಆಕಾಂಕ್ಷಿ ಗ್ಹೌಸೆ ಪೀರ್ ರವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಚಳಿಗಾದಲ್ಲಿ ವಲಸೆ ಕಾರ್ಮಿಕರು, ನಿರ್ಗತಿಕರು ಮತ್ತು ರಸ್ತೆ ಬದಿಯಲ್ಲಿ ಮಲಗುವ ಬಡವರಿಗೆ ಕಂಬಳಿ ಮತ್ತು ಬೆಡ್ ಶೀಟ್ ಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಚಳಿಗಾದಲ್ಲಿ ಬೀದಿಬದಿಯಲ್ಲಿ ಮಲಗುವವರಿಗೆ ಸೊಳ್ಳೆಗಳು ಕಚ್ಚಿ ಅವರಿಗೆ ಅನಾರೋಗ್ಯ ಕಾಡಬಹುದು., ಇಂತಹ ಪರಿಸ್ಥಿತಿಯಲ್ಲಿ ನಿರ್ಗತಿಕರಿಗೆ, ಬೀದಿಬದಿ ವ್ಯಾಪಾರಿಗಳಿಗೆ, ವಲಸೆ ಕಾರ್ಮಿಕರಿಗೆ ಕಂಬಳಿ ಮತ್ತು ಬೆಡ್ ಶೀಟ್ ಗಳನ್ನು ನೀಡಿದರೆ ಚಳಿಯಿಂದ ರಕ್ಷಣೆ ಪಡೆಯಲು ಸಾಧ್ಯವಿದೆ. ಹಾಗಾಗಿ ಇವರ ನೆರವಿಗೆ ಡಾ.ಇಂಡಿಯಾ ಚಾರಿಟಬಲ್ ಟ್ರಸ್ಟ್ ಮತ್ತು ಆಮ್ ಆದ್ಮಿ ಪಕ್ಷ ಸಹಾಯ ಮಾಡಲಿದೆ ಎಂದರು.
ಕಂಬಳಿ ವಿತರಣೆ ಸಂದರ್ಭದಲ್ಲಿ ಪಕ್ಷದ ಸಂಘಟನಾ ಕಾರ್ಯದರ್ಶಿ ಉಮರ್ ಫಾರೂಕ್, ಅಲ್ಪಸಂಖ್ಯಾತರ ಘಟಕದ ನಗರ ಕಾರ್ಯದರ್ಶಿ ಮೊಹಮ್ಮದ್ ಯೂನೂಸ್, ಮಹಿಳಾ ಘಟಕದ ನಗರ ಅಧ್ಯಕ್ಷೆ ನಂದಿನಿ ಹಾಗೂ ರುಕ್ಸಾನ ಬಾನು ಮೊದಲಾದವರು ಉಪಸ್ಥಿತರಿದ್ದರು.