ಬಿಜೆಪಿ ಪಕ್ಷ ದೇಶದ ಅತಿದೊಡ್ಡ ವೈರಸ್ _ಕೆ ಎನ್ ರಾಜಣ್ಣ

 

ಮಧುಗಿರಿ : ದೇಶವನ್ನು ಆವರಿಸಿರುವ ಬಿಜೆಪಿ ಎಂಬ ವೈರಸನ್ನು ಈ ದೇಶದಿಂದ ಓಡಿಸಲು ಯುವ ಶಕ್ತಿ ಸಂಘಟಿತರಾಗಬೇಕಿದೆ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು.

ಪಟ್ಟಣದ ಟಿ.ವಿ.ವಿ. ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅಭಿಮಾನಿಗಳ ಬಳಗ ಹಾಗೂ ತಾಲೂಕು ಕಾಂಗ್ರೇಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ದ ಪ್ರತಿ ಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಮಾನ್ಯರು ಜೀವನ ನಡೆಸುವುದು ದುಷ್ಕರವಾಗಿದೆ ಕೇಂದ್ರ ಸರಕಾರ ಪೆಟ್ರೋಲ್, ಡೀಸಲ್‍ಗಳ ತೆರಿಗೆ ಕಡಿಮೆ ಮಾಡಿ ಬೆಲೆ ಇಳಿಸಬೇಕು ಇಲ್ಲದ್ದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಕೇಂದ್ರ ಸರಕಾರ ರೈತರ ಬೇಡಿಕೆ ಈಡೇರಿಸಿಲ್ಲ ಅವರ ಬಗ್ಗೆ ಪ್ರಧಾನಿ ಸಹಾನುಭೂತಿ ತೋರಿಸಿಲ್ಲ ರೈತರು ಬೆಳೆದ ಬೆಳೆಗೆ ದರ ಸಿಗುತ್ತಿಲ್ಲ ಎಂದ ಅವರು ದೇಶದ ಜನತೆ ನೆಮ್ಮದಿಯಿಂದ ಜೀವನ ನಡೆಸಲು ಕಾಂಗ್ರೇಸ್ ಸರಕಾರವನ್ನು ಅಧಿಕಾರಕ್ಕೆ ತರಬೇಕು ಎಂದರು.

ತಾಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲೂ ಕಾಂಗ್ರೇಸ್ ಪಕ್ಷದ ಪದಾಧಿಕಾರಿಗಳು ಮೋದಿಜೀ ಬಡವರ ಮೇಲೆ ಕರುಣೆ ಇರಲಿ, ಪ್ರಟ್ರೋಲ್ 100 ನಾಟ್ ಓಟ್ ಇನ್ನೂ ಆಟ ಬಾಕಿ , ಅಣ್ಣ ಮೋದಿಯಣ್ಣಾ ಬದುಕಲು ಬಿಡಣ್ಣ ಎಂಬ ಮತ್ತಿತರರ ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಲ್ಲಿಕಾರ್ಜುನಯ್ಯ, ಎಸ್.ಆರ್.ರಾಜಗೋಪಾಲ್, ಗ್ರಾ.ಪಂ.ಅಧ್ಯಕ್ಷ ಸಿದ್ದಾಪುರ ವೀರಣ್ಣ, ಪುರಸಭಾ ಸದಸ್ಯರಾದ ಲಾಲಾಪೇಟೆ ಮಂಜುನಾಥ್, ಎಂ.ವಿ.ಮಂಜುನಾಥ್, ಮುಖಂಡರಾದ ಎಂ.ಎಸ್.ಶಂಕರನಾರಾಯಣ್, ಧ್ರುವ ಕುಮಾರ್, ಎಸ್.ಆರ್.ಮಂಜುನಾಥ್, ಆನಂದ್‍ಕೃಷ್ಣ, ಪಿ.ಸಿ.ಕೃಷ್ಣ ರೆಡ್ಡಿ, ಯುವ ಕಾಂಗ್ರೇಸ್ ತಾಲೂಕು ಅಧ್ಯಕ್ಷ ಎಸ್.ಡಿ.ಕೆ. ವೆಂಕಟೇಶ್, ರಂಗಾಶ್ಯಾಮಣ್ಣ, ಕಾರ್ಯಾಧ್ಯಕ್ಷ ಬಿ.ಎನ್. ನಾಗಾರ್ಜುನ ಮಿಲ್ಟ್ರೀ ಹೋಟೆಲ್ ಚಂದ್ರಶೇಖರ್, ಎಂ.ಡಿ.ಆನಂದ್, ಹೆಚ್.ಟಿ.ತಿಮ್ಮರಾಜು ಹಾಜರಿದ್ದರು.

ಪೋಟೋ ಶೀರ್ಷಿಕೆ 14 ಮಧುಗಿರಿ 02 : ಮಧುಗಿರಿ ಪಟ್ಟಣದ ಟಿ.ವಿ.ವಿ. ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅಭಿಮಾನಿಗಳ ಬಳಗ ಹಾಗೂ ತಾಲೂಕು ಕಾಂಗ್ರೇಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬೆಲೆ ಏರಿಕೆ ವಿರುದ್ದ ಪ್ರತಿ ಭಟನಾ ಸಭೆಯಲ್ಲಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!