ದಲಿತರ ಜಮೀನು ಕಬಳಿಸಿದ ಭೂಪ. ಮನನೊಂದ ಸಂತ್ರಸ್ತರು ದಯಾಮರಣ ಕೋರಿ ಅರ್ಜಿ

ದಲಿತರ ಜಮೀನು ಕಬಳಿಸಿದ ಭೂಪ….. ??ಮನನೊಂದ ಸಂತ್ರಸ್ತರು ದಯಾಮರಣ ಕೋರಿ ಅರ್ಜಿ

ಹನೂರು: ಕಂದಾಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಹಣದಾಹದ ಹೊಡೆತಕ್ಕೆ ತುತ್ತಾದ ದಲಿತ ಕುಟುಂಬಗಳು ತಾವು ತಲತಲಾಂತರದಿಂದ ಬೇಸಾಯ ಮಾಡುತ್ತಿದ್ದ ಜಮೀನು ಅನ್ಯರ ಪಾಲಾಗಲು ಮುಂದಾಗಿರುವುದರಿಂದ ಮನನೊಂದು ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಸೇರಿದಂತೆ ರಾಷ್ಟ್ರಪತಿಯವರಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ.

 

ತಾಲೋಕಿನಲ್ಲಿ ದಯಾಮರಣ ಪ್ರಕರಣ ಅಪರೂಪದಲ್ಲೆ ಅಪರೂಪ ಎಂಬಂತೆ ಹನೂರು ತಾಲ್ಲೂಕಿನ ಬಿ.ಗುಂಡಾಪುರ ಗ್ರಾಮದ ರಾಮಯ್ಯ, ಮಂಜಯ್ಯ, ನಂಜಯ್ಯ, ಮಲ್ಲಯ್ಯ ಈ ನಾಲ್ಕು ಕುಟುಂಬಗಳ ಸದಸ್ಯರು ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ.

 

 

 

 

 

 

 

 

 

 

 

 

 

 

 

 

ಏನಿದು ಪ್ರಕರಣ: ಕಳೆದ 70-80 ವರ್ಷಗಳಿಂದ ಬಿ. ಗುಂಡಾಪುರ ಗ್ರಾಮದ ಮೇಲ್ಕಂಡ ಕುಟುಂಬಗಳು ತಾತಾ ತಂದೆ ವ್ಯವಸಾಯ ಮಾಡಿಕೊಂಡು ಬಂದಿದ್ದು, ಹಾಲಿ ಇವರೇ ವ್ಯವಸಾಯ ಮಾಡುತ್ತಿದ್ದಾರೆ. ಆದರೆ ಕಳೆದ ಎರ್ಡರಿಂದ ಎರಡುವರೆ ವರ್ಷಗಳಿಂದ ಮಂಗಲ ಗ್ರಾಮದ ಮುಸ್ಲಿಂ ಸಮುದಾಯದ ಎರಡು ಕುಟುಂಬದವರು ಜಮೀನು ತಮಗೆ ಸೇರಬೇಕೆಂದು ಈ ಹಿಂದೆ ಇದ್ದ ಉಪ ನೋಂದಾಣಿಧಿಕಾರಿಗಳು, ಕಂದಾಯ ಅಧಿಕಾರಿಗಳು, ಪೊಲೀಸ್, ಲಾಯರ್, ಕೋರ್ಟ್ ಎಂದು ಎದುರಿಸಿ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿ ದಲಿತ ರೈತ ಕುಟುಂಬವನ್ನು ಒಕ್ಕಲೆಬ್ಬಿಸುವ ಷಡ್ಯಂತ್ರ ರೂಪಿಸುತ್ತಿದ್ದಾರೆ.

 

 

 

 

 

 

 

 

 

 

 

 

 

 

ಇದರಿಂದ ನೊಂದ ದಲಿತ ಕುಟುಂಬಗಳು ಈ ಅನ್ಯಾಯವನ್ನು ಸಹಿಸದೇ ದಯಾಮರಣಕ್ಕೆ ಮುಂದಾಗಿದೆ. ಮಾನವೀಯ ದೃಷ್ಟಿಯಿಂದ ಈ ಪ್ರಕರಣವನ್ನು ಪರಿಶೀಲಿಸಿ ದಯಾ ಮರಣಕ್ಕೆ ಅವಕಾಶ ನೀಡಬೇಕು ಇಲ್ಲವೇ ನ್ಯಾಯ ದೊರಕಿಸದೆ ಹೋದರೆ ಆತ್ಮಹತ್ಯೆ ಮೊರೆ ಹೋಗಲು ನಿರ್ಧರಿಸಿದ್ದಾರೆ.

 

ಜಮೀನೇ ಗುರುತಿಸದ ಪರ ಇದಿಯಾ ಅಧಿಕಾರಿ ವರ್ಗ: ಬಡ ಶೋಷಿತ ದಲಿತ ಕುಟುಂಬಗಳ ಜಮೀನನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಂಡಿರುವ ಮಂಗಲ ಗ್ರಾಮದ ಮುಸ್ಲಿಂ ಕುಟುಂಬದವರಿಗೆ ಜಮೀನು ಎಲ್ಲಿದೇ ಎಂಬುದು ತಿಳಿದಿಲ್ಲ.

 

 

 

 

 

 

 

 

 

 

 

 

 

ಎಲ್ಲೋ ಕುಳಿತು ಸಾಗುವಳಿ ಮಾಡದೇ ಜಮೀನನ್ನು ತಮ್ಮ ಹೆಸರಿಗೆ ಮಾಡಿರುವುದನ್ನು ಗಮನಿಸಿದರೆ ಇಂತಹ ಅಕ್ರಮಕೋರರ ಪರವಾಗಿ ಹಣದಾಹಿ ಅಧಿಕಾರಿಗಳು ಇದ್ದಾರಾ ಎಂಬುದಕ್ಕೆ ಮಾರಾಟಕ್ಕೆ ಅನುವು ಮಾಡಿಕೊಟ್ಟಿರುವುದೇ ಸಾಕ್ಷಿಯಾಗಿದೆ. ನೊಂದ ದಲಿತ ಕುಟುಂಬಗಳು ಬಿದಿಪಾಲಾಗಿದ್ದಾರೆ. ಈ ವಿಚಾರವಾಗಿ ಸಂಬಂಧ ಪಟ್ಟ ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಂಡು ಸ್ಥಳೀಯ ಗ್ರಾಮದಲ್ಲಿ ಸಾಗುವಳಿ ಮಾಡಿಕೊಂಡು ಬಂದಿಂತಹ ಕುಟುಂಬ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ.

 

 

 

 

 

 

 

 

 

 

 

 

 

 

ಕಳೆದ 2021 ರಿಂದಲೂ ಈ ಅನ್ಯಾಯದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು ಈ ನಡುವೆಯೂ ಹಣದಾಹಿ ಅಧಿಕಾರಿ ವರ್ಗ ಒಳಗೊಳಗೆ ಜಮೀನು ಉಳುಮೆ ಮಾಡದವರ ಪರವಾಗಿ ದಾಖಲೆಗಳನ್ನು ನೀಡುತ್ತಾ ಬಂದು ಅನ್ಯರಿಗೆ ಮಾರಾಟ ಮಾಡಲು ಕಾರಣವಾಗಿದೆ. ಎಂಬ ಮಾತು ನೊಂದ ದಲಿತ ಕುಟುಂಬ ಸದಸ್ಯರುಗಳಿಂದ ಆರೋಪಿಸಿದ್ದಾರೆ. ಈ ವಿಚಾರವಾಗಿ ಹಲವಾರು ರೈತ ಸಂಘಟನೆ ಮತ್ತು ದಲಿತ ಪರ ಸಂಘಟನೆಗಳು ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಸಜ್ಜಾಗಿದ್ದಾರೆ.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!