ಭಗೀರಥ ಮಹರ್ಷಿ ಜಯಂತಿ : ಆರ್ ಎಸ್ ದೊಡ್ಡಿ ಗ್ರಾಮದಲ್ಲಿ ಸರಳವಾಗಿ ಆಚರಣೆ

ಭಗೀರಥ ಮಹರ್ಷಿ ಜಯಂತಿ : ಆರ್ ಎಸ್ ದೊಡ್ಡಿ ಗ್ರಾಮದಲ್ಲಿ ಸರಳವಾಗಿ ಆಚರಣೆ

ಹನೂರು :- ತಾಲೂಕಿನ ಆರ್ ಎಸ್ ದೊಡ್ಡಿ ಗ್ರಾಮದಲ್ಲಿ ಸುತ್ತ ಮುತ್ತಲಿನ ಹದಿನಾಲ್ಕು ಗ್ರಾಮದ ಯಜಮಾನರು ಹಾಗೂ ಆರ್ ಎಸ್ ದೊಡ್ಡಿ ಗ್ರಾಮದ ಯಜಮಾನರು ಯುವಕರು ಮುಖಂಡರು ಸೇರಿ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಇರುವುದರಿಂದ ಬಹಳ ಸರಳವಾಗಿ ಭಗೀರಥ ಜಯಂತಿ ಆಚರಣೆ ಮಾಡಿದ್ದಾರೆ ಇದೆ ವೇಳೆ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ದೊಡ್ಡಿoದುವಾಡಿ ರಾಚಪ್ಪ ರವರು ಎರಡನೇ ಬಾರಿಗೆ ಆರ್ ಎಸ್ ದೊಡ್ಡಿ ಗ್ರಾಮದಲ್ಲಿ ತಾಲೂಕಿನ ಹಲವಾರು ಗ್ರಾಮದ ಯಜಮಾನರು ಮುಖಂಡರುಗಳು ಸೇರಿ ಭಗೀರಥ ಮಹರ್ಷಿ ಜಯಂತಿ ಆಚರಣೆ ಮಾಡುತ್ತಿದ್ದೇವೆ ಛಲ ಮತ್ತು ದೃಢ ಸಂಕಲ್ಪದ ಪ್ರತೀಕ ಭಗೀರಥ ಮಹರ್ಷಿರವರು ಇವರ ವಿಚಾರಗಳ ಬಗ್ಗೆ ನಾವು ಇನ್ನಷ್ಟು ತಿಳಿದುಕೊಳ್ಳಬೇಕಾಗಿದೆ ಭಗೀರಥ ಮಹರ್ಷಿರವರು ಗಂಗೆಯನ್ನು ನೀರಿಗೆ ತಂದ ಸಾಧನೆ ನಮಗೆ ಅತ್ಯಂತ ಉಪಯೋಗಕಾರಿಯಾಗಿದೆ ಈ ದಿನ ಅವರ ಜನ್ಮದಿನದ ಪ್ರಯುಕ್ತ ಸರಳವಾಗಿ ಮಜ್ಜಿಗೆ ಪಾನಕ ಹಾಗೂ ಸಿಹಿ ಹಂಚುವ ಮೂಲಕ ಸರಳವಾಗಿ ಆಚರಣೆ ಮಾಡಿದ್ದೇವೆ ಎಂದು ಹೇಳಿದರು.

 

 

 

 

 

 

ಇನ್ನು ಈ ಸಂದರ್ಭದಲ್ಲಿ ಗಡಿ ಯಜಮಾನರು ರಾಜು.ಕಟ್ಟೆಮನೆ ಯಜಮಾನರು ಅಂಕಶೇಟ್ಟಿ. ಸುರೇಶ್. ರಾಜು.ಜಯರಾಮ್.ಸಣ್ಮುಖ. ಸಿದ್ದಪ್ಪ.ಸತ್ತೇಗಾಲ. ಸಿದ್ದಪ್ಪ.ದೊಡ್ಡಿಂದುವಾಡಿ. ಸುರೇಶ್.ಪುಟ್ಟಸ್ವಾಮಿ ಹೊಸದೊಡ್ಡಿ ಕೃಷ್ಣ.ಶೆಟ್ಟಿ ನಿಂಗರಾಜು. ಕಾಂತರಾಜು. ರಾಜಪ್ಪಾಜಿ. ಹಾಗೂ ವಿವಿಧ ಗ್ರಾಮದ ಯಜಮಾನ್ರು ಮುಖಂಡರು ಯುವಕರು ಉಪಸ್ಥಿತರಿದ್ದರು.

 

 

 

 

ವರದಿ:- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!