ಬೆಸ್ಕಾಂ ಕಚೇರಿಯ ದಾಖಲೆಗಳ ಬ್ಯಾಗ್ ಕಳವು ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಪಾವಗಡ ಪಟ್ಟಣದ ಬೆಸ್ಕಾಂ ಇಲಾಖೆಯ ಕಾಮಗಾರಿಗಳು ಟೆಂಡರ್ ಹಾಗೂ ಟ್ರಾನ್ಸ್ಫಾರ್ಮರ್ ದುರಸ್ತಿ ಡೀಟೇಲ್ಸ್ ಗೆ ಸಂಬಂಧಿಸಿದಂತೆ ಇಲ್ಲಿನ ಬೆಸ್ಕಾಂ ಸಹಾಯಕ ಇಂಜಿನಿಯರ್ ಸಂಜೀವ ರಾಯಪ್ಪ ಎಂಬುವರು ನೀಡಿದ ದೂರಿನ ಮೇರೆಗೆ ಬೆಸ್ಕಾಂ ಅಧಿಕಾರಿಯೊಬ್ಬರ ಮೇಲೆ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಹಾಯಕ ಇಂಜಿನಿಯರ್ ಒಬ್ಬರು ಪಟ್ಟಣದ ಚಳ್ಳಕೆರೆ ಕ್ರಾಸ್ ಸಮೀಪದ ಹೋಟೆಲೊಂದಕ್ಕೆ ತೆರಳಿ ಆಹಾರ ತೆಗೆದುಕೊಳ್ಳುತ್ತಿರುವ ವೇಳೆ ಹೋಟೆಲ್ ಹೊರಗಡೆ ನಿಲ್ಲಿಸಿದ್ದ ತಮ್ಮ ಬೈಕ್ನಲ್ಲಿ ಇದ್ದ ಬ್ಯಾಗ್ ಕಳ್ಳತನ ವಾಗಿರುವುದನ್ನು ಗಮನಿಸಿದ ಅಧಿಕಾರಿ ಗಾಬರಿಗೊಂಡು ಕಳ್ಳತನವಾಗಿರುವ ಬ್ಯಾಗನ್ನುಪತ್ತೆ ಮಾಡಿಕೊಡುವಂತೆ ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು.
ಆದರೆ ಬ್ಯಾಗ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಬೇರೆ ತರಹದ ಸುದ್ದಿ ಹರಿದಾಡುತ್ತಿದೆ ಬ್ಯಾಗ್ ಕಳೆದುಕೊಂಡಿರುವ ಅಧಿಕಾರಿ ಹಾಗೂ ಅದನ್ನು ಕೊಂಡೊಯ್ದಿರುವ ಬೆಸ್ಕಾಂ ಇಲಾಖೆಯ ಮತ್ತೊಬ್ಬ ಅಧಿಕಾರಿ ಯಲೆಂದ್ರಬಾಬುರವರು ದಾಖಲಾತಿಗಳನ್ನು ಕದ್ದಿರುವುದು ಸಿಸಿಟಿವಿಯಲ್ಲಿ ಸರಿಯಾಗಿದೆ .
ಇನ್ನು ಎಲ್ಲ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ದಾಖಲೆಗಳ ಬ್ಯಾಗ್ ಕಳವು ಮಾಡಿರುವ ಅಧಿಕಾರಿ ವೈಯಕ್ತಿಕ ದ್ವೇಷಕ್ಕಾಗಿ ಮೇಲಧಿಕಾರಿಗೆ ಕೆಟ್ಟ ಹೆಸರು ತರುವ ದೃಷ್ಟಿಯಿಂದ ಇಂತಹ ಕೆಲಸವನ್ನು ಮಾಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿ ಬರುತ್ತಿದೆ.
ಅದೇನೇ ಇರಲಿ ಇಲಾಖೆಗೆ ಸಂಬಂಧಿಸಿದ ದಾಖಲೆಗಳನ್ನು ಇಲಾಖೆಯ ಅಧಿಕಾರಿಯೊಬ್ಬರು ಕಳ್ಳತನ ಮಾಡಿರುವುದನ್ನು ಗಮನಿಸಿದರೆ ಇಂತಹ ಅಧಿಕಾರಿಗಳಿಂದ ಇಲಾಖೆಯ ಅಭಿವೃದ್ಧಿ ಸಾಧ್ಯವೇ ಎನ್ನುವ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ
ದೂರು ದಾಖಲಿಸಿಕೊಂಡ ಪೊಲೀಸರು ಹೋಟೆಲ್ ಬಳಿ ಇದ್ದ ಸಿಸಿ ಕ್ಯಾಮೆರಾದಲ್ಲಿ ಸರೆಯಾದ ದೃಶ್ಯಾವಳಿಗಳ ಆದರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.
ವರದಿ _ಮಾರುತಿ ಪ್ರಸಾದ್ ತುಮಕೂರು