ಅನದಿಕೃತ ಖಾಸಗಿ ಪಿಯು ಕಾಲೇಜು ಮೇಲೆ ಕ್ರಮಕ್ಕೆ -ದಾಸೇಗೌಡ ಆಗ್ರಹ.
ತುಮಕೂರಿನ ನಗರಕ್ಕೆ ಸಮೀಪವಿರುವ ಬೇಳಗುಂಬದಲ್ಲಿ ಖಾಸಗಿ ಒಡೆತನದ ಪಿಯು ಕಾಲೇಜು ಅನಧಿಕೃತವಾಗಿ ನಡೆಯುತ್ತಿದ್ದು ಇಂತಹ ಅನಧಿಕೃತ ಕಾಲೇಜು ಮೇಲೆ ಕ್ರಮಕೈಗೊಳ್ಳಬೇಕೆಂದು ಬೆಳಗುಂಬ ಗ್ರಾಮದ ಕೆಂಪೇಗೌಡ ಕಾಲೇಜಿನ ಮುಖ್ಯಸ್ಥ ದಾಸೇಗೌಡ ಆಗ್ರಹಿಸಿದ್ದಾರೆ.
ತುಮಕೂರು ನಗರಕ್ಕೆ ಸಮೀಪವಿರುವ ಬೆಳಗುಂಬದಲ್ಲಿ ದೀಕ್ಷಾ ಎನ್ನುವ ಪಿಯು ಕಾಲೇಜು ಕಾರ್ಯನಿರ್ವಹಿಸುತ್ತಿದೆ ಎಂದು ಪತ್ರಿಕೆಗಳು ಹಾಗೂ ಭಿತ್ತಿಪತ್ರಗಳ ಮೂಲಕ ಪ್ರಚಾರ ಕೈಗೊಳ್ಳುವ ಮೂಲಕ ಸ್ಥಳೀಯ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ದಿಕ್ಕುತಪ್ಪಿಸುವ ದೊಡ್ಡ ಹುನ್ನಾರ ನಡೆದಿದ್ದು .ಇದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕಿಸಿ ಚರ್ಚಿಸಿದ ನಂತರ ತುಮಕೂರು ನಗರದಲ್ಲಿ ದೀಕ್ಷಾ ಎನ್ನುವ ಪಿಯು ಕಾಲೇಜು ಜಿಲ್ಲೆಯಲ್ಲಿಯೇ ನೋಂದಣಿಯಾಗಿಲ್ಲ ದೀಕ್ಷಾ ಪದವಿ ಪೂರ್ವ ಕಾಲೇಜು ತುಮಕೂರು ಜಿಲ್ಲೆ ಹಾಗೂ ತುಮಕೂರು ನಗರದಲ್ಲಿ ಮಾನ್ಯತೆ ಪಡೆದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದು. ಇದಕ್ಕೆ ಸಂಬಂಧಿಸಿದಂತೆ ಪ್ರಚಾರದ ಮೂಲಕ ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುತ್ತಿರುವ ದೀಕ್ಷಾ ಕಾಲೇಜಿನ ಆಡಳಿತ ಮಂಡಳಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಸಂಬಂಧಪಟ್ಟ ಪಿಯು ವಿಭಾಗದ ಉಪನಿರ್ದೇಶಕರು, ತುಮಕೂರು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟವರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ದೇಶಾದ್ಯಂತ ಕೋವಿಡ್ ಮಹಾಮಾರಿ ಬಂದಾಗಿನಿಂದ ಸಾರ್ವಜನಿಕರ ಜೀವನ ಕಷ್ಟಕರವಾಗಿದ್ದು ಇಂತಹ ಸಮಯದಲ್ಲಿ ಕೇವಲ ಭಿತ್ತಿಪತ್ರಗಳು ಹಾಗೂ ಫ್ಲೆಕ್ಸ್ ಬ್ಯಾನರ್ ಗಳ ಮೂಲಕ ಪ್ರಚಾರ ಕೈಗೊಂಡು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದಾಗಿ ನಂಬಿಸಿ ಸಾವಿರಾರು ರೂಪಾಯಿಗಳನ್ನು ಪಡೆದು ವಿದ್ಯಾರ್ಥಿಗಳನ್ನು ಅನಧಿಕೃತವಾಗಿ ದಾಖಲು ಮಾಡಿಕೊಳ್ಳಲಾಗುತ್ತಿದೆ ಇದರಿಂದ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಎಲ್ಲರೂ ಎಚ್ಚರದಿಂದಿರಬೇಕು ಎಂದು ತಿಳಿಸಿದ್ದಾರೆ.
ಪಿಯು ಡಿಡಿ ಸ್ಪಷ್ಟನೆ.
ಬೆಳಗುಂಬದ ದೀಕ್ಷಾ ಕಾಲೇಜಿಗೆ ಸಂಬಂಧಪಟ್ಟಂತೆ ತುಮಕೂರು ಜಿಲ್ಲೆಯ ಪಿಯು ಉಪನಿರ್ದೇಶಕ ಹೆಚ್ ಕೆ ನರಸಿಂಹಮೂರ್ತಿರನ್ನು ಪತ್ರಿಕೆ ಸಂಪರ್ಕಿಸಲಾಗಿ ತುಮಕೂರು ಜಿಲ್ಲೆಯಲ್ಲಿ ದೀಕ್ಷಾ ಪಿಯು ಕಾಲೇಜು ನೊಂದಣಿ ಯಾಗಿಲ್ಲ ಅಧಿಕೃತವಾಗಿ ಮಾನ್ಯತೆಯನ್ನು ಪಡೆದಿಲ್ಲ ಹಾಗಾಗಿ ಇಂತಹ ಅನಧಿಕೃತ ಪಿಯು ಕಾಲೇಜುಗಳ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳು ಎಚ್ಚರದಿಂದಿರಬೇಕು ಎಂದು ತಿಳಿಸಿದರು.