ಹಿಂದು ಮುಸ್ಲಿಂ ಸಮುದಾಯದವರಿಂದ ಬಸವ ಜಯಂತಿ ಆಚರಣೆ.
ತುಮಕೂರು- ತಾಲ್ಲೂಕು ಕೋರ ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಹಿಂದೂ ಮುಸ್ಲಿಂ ಸಮುದಾಯದವರು ಒಟ್ಟಿಗೆ ಸೇರಿ ಆಚರಿಸುವ ಮೂಲಕ ಭಾವೈಕ್ಯತೆ ಸಾರಿದ್ದಾರೆ.
ಮಂಗಳವಾರ ಕೋರ ಗ್ರಾಮಪಂಚಾಯ್ತಿ ವತಿಯಿಂದ ನಡೆದ ಬಸವೇಶ್ವರ ಜಯಂತಿ ಹಾಗೂ ಅಂಭೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರು ಹಾಗೂ ಅಂಭೇಡ್ಕರ್ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು.
ರಂಜಾನ್ ಹಬ್ಬ ಆಚರಣೆ ಬಳಿಕ ಬಸವ ಜಯಂತಿ ಹಾಗೂ ಅಂಭೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರು ಭಾಗಿಯಾದರು
ಮುಸ್ಲಿಂ ಭಾಂಧವರು ಖರ್ಜೂರ ನೀಡಿ ಹಿಂದೂ ಬಾಂದವರಿಗೆ ಶುಭಕೋರಿದರೆ ಹಿಂದೂ ಬಾಂದವರು ಮುಸ್ಲಿಂ ಬಾಂಧವರಿಗೆ ಪಾನಕ ,ಮಜ್ಜಿಗೆ,ಕೋಸಂಬರಿ ನೀಡಿ ಹಬ್ಬದ ಶುಭಕೋರಿದರು.
ಇದೇ ಸಂದರ್ಭದಲ್ಲಿ ಕೋರ ಗ್ರಾಮಪಂಚಾಯ್ತಿ ಅಧ್ಯಕ್ಷೆ ನಾಗರತ್ನ ಸೋಮಶೇಖರ್,ಮಾಜಿ ಗ್ರಾಮಪಂಚಾಯ್ತಿ ಅಧ್ಯಕ್ಷ ನಜೀರ್ ಅಹಮದ್,ಗ್ರಾಮಪಂಚಾಯ್ತಿ ಸದಸ್ಯ ಶರತ್ ಕುಮಾರ್, ಗ್ರಾಮಸ್ತರಾದ ಕಾಂತರಾಜು,ನರಸಿಂಹಮೂರ್ತಿ ಗ್ರಾಮದ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಉಪಸ್ತಿತರಿದ್ದರು.
ವರದಿ _ಮಾರುತಿ ಪ್ರಸಾದ್