ಬಸ್ ಬೈಕ್ ನಡುವೆ ಡಿಕ್ಕಿ ಬಂತೇಜಿ ದಾರುಣ ಸಾವು
ಕೊಳ್ಳೇಗಾಲ :- ತಾಲೂಕಿನ ಮಧುವನಹಳ್ಳಿ ಗ್ರಾಮದ ಬುದ್ಧ ವಿಹಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೂಜ್ಯ ಬಂತೆ ಬೋಧಿ ಪಣ್ಯನಂದರವರು ಮಂಡ್ಯ ಜಿಲ್ಲೆಯ ಮದ್ದೂರು ಹಾಗೂ ಕೆ ಎಂ ದೊಡ್ಡಿ ನಡುವೆ ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಅಪಘಾತದಲ್ಲಿ ಕೊನೆ ಉಸಿರು ಎಳೆದಿದ್ದಾರೆ.
ಪೂಜ್ಯ ಬಂತೆಜಿಗಳು ಬೆಂಗಳೂರಿನಿಂದ ಕೊಳ್ಳೇಗಾಲದ ಕಡೆ ಆಗಮಿಸುತ್ತಿದ್ದ ವೇಳೆಯಲ್ಲಿ ಮಂಡ್ಯ ವಿಭಾಗದ ಮದ್ದೂರು ಡಿಪೋಗೆ ಸೇರಿರುವಂತಹ ಕೆ ಎ.11ಎಫ್. 0140 ಸಂಖ್ಯೆಯ ವಾಹನಕ್ಕೆ ಚಿಕ್ಕರಸಿನ ಕೆರೆ ಸಮೀಪದಲ್ಲಿ ಶುಕ್ರವಾರ ಬೆಳಗ್ಗೆ 8:30 ರ ಸಮಯದಲ್ಲಿ ಮುಕಾಮುಕಿ ಡಿಕ್ಕಿಯಾಗಿದೆ ಆದ ಪರಿಣಾಮ ತೀವ್ರ ರಕ್ತಸ್ತವದಿಂದ ಇದ್ದ ಬಂತೆಜಿಯನ್ನು ಸ್ಥಳೀಯರು ಕೂಡಲೇ ಮಂಡ್ಯ ಆಸ್ಪತ್ರೆಗೆ ಕೊಂಡೋಯ್ಯಿದ್ದರು.
ಚಿಕಿತ್ಸೆ ಫಲಕಾರಿಯಾಗದೆ.ಕೊನೆ ಉಸಿರು ಚೆಲ್ಲಿದ್ದಾರೆ. ಪೂಜ್ಯ ಬಂತೆ ಬೋಧಿ ಪಣ್ಯನಂದರವರು ಉಪ್ಪಾರ ಸಮುದಾಯದಕ್ಕೆ ಸೇರಿದ ನಿವೃತ್ತ ಬಿ ಎಂ ಟಿ ಸಿ ನೌಕರರು ಆಗಿದ್ದರು ಎಂದು ತಿಳಿದು ಬಂದಿದೆ ಸರ್ಕಾರಿ ನೌಕರಿಯಿಂದ ನಿವೃತ್ತರಾದ ಕೂಡಲೇ ಭಗವಾನ್ ಗೌತಮ ಬುದ್ಧರ ವಿಚಾರಗಳ ಬಗ್ಗೆ ತಿಳಿದು ಧ್ಯಾನ ಪಡೆದು ಪೂಜ್ಯ ಬಂತೇಜಿಗಳಾಗಿ ಸೇವೆ ಸಲ್ಲಿಸುತ್ತಿದ್ದರು.
ಇನ್ನು ಪೂಜ್ಯ ಬಂತೇಜಿಗಳ ಅಕಾಲಿಕ ಮರಣದಿಂದಾಗಿ ಇಡೀ ರಾಜ್ಯದ ಲಕ್ಷಾಂತರ ಭಗವಾನ್ ಬುದ್ಧರ ಅನುಯಾಯಿಗಳು. ದಮ್ಮ ಸದ್ಗತಿ ಸಿಗಲಿ ಎಂದು ಭಗವಾನ್ ಬುದ್ಧರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಹಾಗೂ ಪೂಜ್ಯ ಬಂತೆಜಿಗಳ ಅಂತ್ಯ ಕ್ರಿಯೆಯೂ ಮದುವನಹಳ್ಳಿ ಗ್ರಾಮದಲ್ಲಿ ಬೌದ್ಧ ಸಂಪ್ರದಾಯದಂತೆ ಇಂದು ಸಂಜೆಯೊಳಗೆ ನೆರವೇರಲಿದೆ
ವರದಿ :-ನಾಗೇಂದ್ರ ಪ್ರಸಾದ್