ಕೋವ್ಯಾಕ್ಸಿನ್‌ ಲಸಿಕೆ ದರದಲ್ಲಿ 210 ರೂಪಾಯಿಗಳ ರಿಯಾಯಿತಿ ನೀಡಲು ಜಯನಗರ ಯುನೈಟೆಡ್‌ ಆಸ್ಪತ್ರೆ ಘೋಷಣೆ

 

ಕೋವ್ಯಾಕ್ಸಿನ್‌ ಲಸಿಕೆ ದರದಲ್ಲಿ 210 ರೂಪಾಯಿಗಳ ರಿಯಾಯಿತಿ ನೀಡಲು ಜಯನಗರ ಯುನೈಟೆಡ್‌ ಆಸ್ಪತ್ರೆ ಘೋಷಣೆ

– 20,000 ಕ್ಕೂ ಹೆಚ್ಚು ಕೋವ್ಯಾಕ್ಸಿನ್‌ ಡೋಸ್‌ ಲಭ್ಯ

– ನಗರದ 12-15 ಸಹಯೋಗಿ ಆಸ್ಪತ್ರೆಯಲ್ಲಿ ವ್ಯಾಕ್ಸಿನ್‌ ನೀಡಲು ನಿರ್ಧಾರ

– ಸರಕಾರಿ ನಿಗದಿತ ದರದಲ್ಲೂ ರಿಯಾಯಿತಿ ನೀಡಲು ನಿರ್ಧಾರ

– ಸಾಮಾಜಿಕ ಕಾಳಜಿ ಉದ್ದೇಶದಿಂದ ರಿಯಾಯಿತಿಗೆ ಆಡಳಿತ ಮಂಡಳಿ ನಿರ್ಧಾರ

– ಕೋವಿಡ್‌ ಲಸಿಕೆಗಾಗಿಯೇ ಯುನೈಟೆಡ್‌ ಆಸ್ಪತ್ರೆ ಮೀಸಲು

 

 

ಬೆಂಗಳೂರ: ಸುಮಾರು 20 ಸಾವಿರಕ್ಕೂ ಹೆಚ್ಚು ಡೋಸ್‌ ಕೋವ್ಯಾಕ್ಸಿನ್‌ ಲಸಿಕೆಯನ್ನು ಹೊಂದಿರುವ ಜಯನಗರದ ಯುನೈಟೆಡ್‌ ಆಸ್ಪತ್ರೆ, ಸರಕಾರ ನಿಗದಿಪಡಿಸಿರುವ ದರದಲ್ಲಿ (As per Cowin App Rate 1410-210=1200) 210 ರೂಪಾಯಿ ರಿಯಾಯಿತಿ ನೀಡಲಿದೆ. ಸಾಮಾಜಿಕ ಕಾಳಜಿಯಿಂದ ಹಾಗೂ ನಮ್ಮ ಬಳಿ ಇರುವ ಲಸಿಕೆಯಿಂದ ಹೆಚ್ಚು ಜನರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಯುನೈಟೆಡ್‌ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ ವಿಕ್ರಮ್‌ ಸಿದ್ದಾರೆಡ್ಡಿ ಹೇಳಿದ್ದಾರೆ.

 

 

ಬೆಂಗಳೂರು ನಗರದಲ್ಲೆಡೆ ಲಸಿಕೆಗಳ ಲಭ್ಯತೆಯಲ್ಲಿ ಕೊರತೆ ಕಂಡುಬರುತ್ತಿದೆ. ಅದರಲ್ಲೂ ವ್ಯಾಪಕವಾಗಿ ಹರಡುತ್ತಿರುವ ಡೆಲ್ಟಾ ಪ್ಲಸ್‌ ವೇರಿಯಂಟ್‌ ವಿರುದ್ದ ಪರಿಣಾಮಕಾರಿಯಾಗಿರುವ ಕೋವ್ಯಾಕ್ಸಿನ್‌ ಲಸಿಕೆಯ ಕೊರತೆ ಹೆಚ್ಚಾಗಿದೆ. ನಮ್ಮ ಆಸ್ಪತ್ರೆಯ ಮಂಡಳಿಯ ವತಿಯಿಂದ ನಾವುಗಳು ಎರಡು ತಿಂಗಳ ಹಿಂದೆ ಕೋವ್ಯಾಕ್ಸಿನ್‌ ಹಾಗೂ ಇತರೆ ಲಸಿಕೆಗಳಿಗೆ ಮುಂಗಡ ಹಣವನ್ನು ನೀಡಿ ಖರೀದಿಸಿದ್ದೇವು. ಇತ್ತೀಚಿಗೆ ನಮ್ಮ ಆಸ್ಪತ್ರೆಗೆ 20,000 ಡೋಸ್‌ ನಷ್ಟು ಕೋವ್ಯಾಕ್ಸಿನ್‌ ಲಸಿಕೆ ಸರಬರಾಜು ಆಗಿದೆ. ಇದರಲ್ಲಿ 5000 ಡೋಸ್‌ ಗಳನ್ನು ನಾವು ಕರೋನಾ ಎರಡನೇ ಅಲೆಯಲ್ಲಿ ಅತ್ಯುತ್ತಮ ಸೇವೆಯನ್ನು ಒದಗಿಸಿದ ನಮ್ಮ ಕಲಬುರ್ಗಿಯ ಆಸ್ಪತ್ರೆಯಲ್ಲಿ ಬಳಸಲಿದ್ದೇವೆ ಎಂದು ಹೇಳಿದರು.

 

ಇನ್ನುಳಿದ 15 ಸಾವಿರ ಡೋಸ್‌ ಗಳನ್ನು ನಮ್ಮ 15 ಸಹಯೋಗಿ ಆಸ್ಪತ್ರೆಯ ಮತ್ತು ಕ್ಲಿನಿಕ್‌ಗಳ ಮುಖಾಂತರ ಬೆಂಗಳೂರಿನಲ್ಲಿ ಬಳಸಲಿದ್ದು, ಸರಕಾರ ನಿಗದಿ ಪಡಿಸಿರುವ 1410 ರೂಪಾಯಿಗಳಲ್ಲಿ 210 ರೂಪಾಯಿಗಳ ರಿಯಾಯಿತಿ ನೀಡಿ 1200 ರೂಪಾಯಿ ದರದಲ್ಲಿ ನೀಡಲು ನಮ್ಮ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಧರಿಸಿದೆ. ಎರಡನೇ ಡೋಸ್‌ ಕೋವ್ಯಾಕ್ಸಿನ್‌ ದೊರೆಕದೆ ತೊಂದರೆ ಪಡುತ್ತಿರುವ ಜನರ ಅನುಕೂಲಕ್ಕಾಗಿ ಈ ಯೋಜನೆಯನ್ನು ರೂಪಿಸಿದ್ದೇವೆ ಎಂದು ಯುನೈಟೆಡ್‌ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ ವಿಕ್ರಮ್‌ ಸಿದ್ದಾರೆಡ್ಡಿ ತಿಳಿಸಿದರು.

 

ಜಯನಗರದ ಯುನೈಟೆಡ್‌ ಆಸ್ಪತ್ರೆಯನ್ನು ಕೋವಿಡ್‌ ಲಸಿಕೆ ನೀಡುವ ಸಲುವಾಗಿಯೇ ಕಾಯ್ದಿರಿಸಲಾಗಿದ್ದು. ಇದನ್ನು ಲಸಿಕೆ ನೀಡುವ ಸ್ಪೇಷಾಲಿಟಿ ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ. ಇದರಿಂದಾಗಿ ಲಸಿಕೆ ಪಡೆಯುವವರು ಯಾವುದೇ ಭಯವಿಲ್ಲದೆ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯಬಹುದಾಗಿದೆ. *ಈ ಆಸ್ಪತ್ರೆಯನ್ನು ಲಸಿಕೆ ಪಡೆಯುವವರಿಗೆ ಸೇಫ್‌ ಜೋನ್‌ ಎನ್ನಬಹುದೆಂದು ಯುನೈಟೆಡ್‌ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ ವಿಕ್ರಮ್‌ ಸಿದ್ದಾರೆಡ್ಡಿ ತಿಳಿಸಿದರು.*

 

ಯುನೈಟೆಡ್‌ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಶಾಂತಕುಮಾರ್‌ ಮುರುಡಾ ಮಾತನಾಡಿ ಐಸಿಎಂಆರ್‌ ಸಂಸ್ಥೆಯ ವತಿಯಿಂದ ನಡೆಸಲಾದ ಸಂಶೋಧನೆಯಲ್ಲಿ ಕೋವ್ಯಾಕ್ಸಿನ್‌ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್‌ ವೇರಿಯೆಂಟ್‌ ವಿರುದ್ದ ಬಹಳ ಪರಿಣಾಮಕಾರಿ ಎಂದು ತಿಳಿದುಬಂದಿದೆ. ನಮ್ಮ ಆಸ್ಪತ್ರೆಯಲ್ಲಿ ಈ ಲಸಿಕೆ ಲಭ್ಯವಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕರೋನಾ ಮಹಾಮಾರಿಯ ವಿರುದ್ದ ರಕ್ಷಣೆ ಪಡೆದುಕೊಳ್ಳಲು ಅನುವು ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಜನರಿಗೆ ಈ ಲಸಿಕೆಯನ್ನು ತಲುಪಿಸುವ ನಿಟ್ಟಿನಲ್ಲಿ ನಮ್ಮ ಸಹಯೋಗಿ ಆಸ್ಪತ್ರೆಗಳ ಮೂಲಕವೂ ಲಸಿಕೆಯನ್ನು ಸಾರ್ವಜನಿಕರಿಗೆ ದೊರಕಿಸಿಕೊಡಲಿದ್ದೇವೆ.

 

ಆಸ್ಪತ್ರೆಯ ವತಿಯಿಂದ ಕಡಿಮೆ ದರದಲ್ಲಿ ಸದಸ್ಯತ್ವ ಕಾರ್ಡನ್ನೂ ಪಡೆದುಕೊಳ್ಳುವ ಮೂಲಕ ಎರಡನೇ ಡೋಸ್‌ ಕೋವ್ಯಾಕ್ಸಿನನ್ನು ಕಾಯ್ದಿರಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈಗಾಗಲೇ ನಮ್ಮ ಆಸ್ಪತ್ರೆಯ ವತಿಯಿಂದ 4 ಸಾವಿರಕ್ಕೂ ಹೆಚ್ಚು ಸ್ಪುಟ್ನಿಕ್‌-ವಿ ಲಸಿಕೆಯ ಎರಡೂ ಡೋಸನ್ನು ನೀಡಲಾಗಿದ್ದು, ಇನ್ನೂ 12 ಸಾವಿರ ಡೋಸ್‌ಗೆ ಆರ್ಡರ್‌ ನೀಡಿದ್ದೇವೆ ಎಂದು ಹೇಳಿದರು.

 

ಬೆಂಗಳೂರಿನ ಜಯನಗರದ ಮಾಧವ ಪಾರ್ಕ್‌ನಲ್ಲಿರುವ ಯುನೈಟೆಡ್‌ ಆಸ್ಪತ್ರೆಯಲ್ಲಿ ಈ ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

 

ವಾಟ್ಸಾಪ್‌ ಮೂಲಕ ಸುಲಭವಾಗಿ ಸ್ಲಾಟ್‌ ಬುಕ್‌ ಮಾಡುವ ಸೌಲಭ್ಯ – ವಾಟ್ಸಾಪ್‌ ನಂ: 99169 77777

 

For more information, please reach out to United Hospital at 080 4566 6666 / 080 6933 3333/ Toll No: 1860 419 4444 or E-mail us at info@unitedhospital.in

Leave a Reply

Your email address will not be published. Required fields are marked *

You cannot copy content of this page

error: Content is protected !!