ಬಾಜಪ ಅವರ ಬಣ್ಣ ಆರು ತಿಂಗಳಲ್ಲಿ ಬಯಲಾಗುತ್ತದೆ ಭವಿಷ್ಯ ನುಡಿದ ಟಿಬಿಜೆ…
ಶಿರಾ:-ಮೂರು ದಶಕಗಳ ನಂತರ ತುಂಬಿ ಕೋಡಿ ಹರಿದ ಕಳ್ಳಂಬೆಳ್ಳ ಹೋಬಳಿಯ ಅಜ್ಜೇನಹಳ್ಳಿ ಕೆರೆಗೆ ಸ್ಥಳೀಯ ರೈತರು ಮತ್ತು ಗ್ರಾಮಸ್ಥರ ಒತ್ತಾಸೆಯಂತೆ ಮಾಜಿ ಸಚಿವರಾದ ಸನ್ಮಾನ್ಯ ಟಿ.ಬಿ.ಜಯಚಂದ್ರರವರು ಇಂದು ಗಂಗಾಪೂಜೆ ನೆರವೇರಿಸಿ ಬಾಗೀನ ಸಲ್ಲಿಸಿ ಮಾತನಾಡಿದ ಟಿಬಿಜೆ ಅವರು.
ಕಳ್ಳಂಬೆಳ್ಳ ಕ್ಷೇತ್ರ ವಿದ್ದಾಗ 44 ವರ್ಷಗಳ ರಾಜಕೀಯ ಅನುಭವಗಳನ್ನು ಇಲ್ಲಿನ ಜನ ನನಗೆ ಕಲ್ಪಿಸಿಕೊಟ್ಟಿದ್ದಾರೆ ನೀರಾವರಿ ಯೋಜನೆಗಳನ್ನು ಕಲ್ಪಿಸಿಕೊಡುವಂತೆ ಪ್ರತಿ ಚುನಾವಣೆಯಲ್ಲಿ ಮಾಡಿಬಿಡುತ್ತಿದ್ದ ಇಲ್ಲಿನ ಜನತೆಗೆ ಈಗ ತೃಪ್ತಿ ಕಂಡಿದೆ ಎಂದರು.
ಈಗ ಮದಲೂರು ಕೆರೆಗೆ ನೀರು ಹರಿಸಿದ್ದು ನಾವೇ ಎಂದು ಬೀಗುತ್ತಿರುವ ಮುಖಂಡರು ಮುಖ ಮುಂದಿನ ಆರು ತಿಂಗಳಲ್ಲಿ ಕಳಚಿ ಬೀಳಲಿದೆ ನಂತರ ಜನತೆಗೆ ಸತ್ಯ ಗೊತ್ತಾಗಲಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು
ಮದಲೂರು ಕೆರೆಗೆ ಕಾಲುವೆ ತೆಗೆಯುವ ಸಮಯದಲ್ಲಿ ಅಡ್ಡಿ ಪಡಿಸಿದವರು ಇಂದು ಮದಲೂರು ಕೆರೆ ಮುಂದೆ ಜೋರಾಗಿ ಮುಖ ತೋರಿಸುವ ಕೆಲಸ…..
ಎಂದು ರಾಜ್ಯ ರೇಷ್ಮೆ ಅಭಿವೃದ್ಧಿ ಮಂಡಳಿ ಅದ್ಯಕ್ಷ ಹಾಗೂ ತುಮಲ್ ನಿದರ್ಶಕ ಎಸ್.ಅರ್ ಗೌಡ ಮತ್ತಿತರ ಹೆಸರನ್ನು ಹೇಳಿ ತೀವ್ರ ತರಾಟೆಗೆ ತೆಗೆದುಕೊಂಡು ಅವರು ನನ್ನ ನಲವತ್ತು ವರ್ಷಗಳ ರಾಜಕೀಯ ಜೀವನ ಚರಿತ್ರೆ ಯಲ್ಲಿ ಸಾರ್ಥಕವೆನಿಸಿದೆ.
ಮದಲೂರು ಕೆರೆ ಗೆ ಹಿಂದೆ ನನ್ನ ಅವದಿಯಲ್ಲಿ ಕಾಲುವೆ ಮಾಡದಿದರೆ ಮದಲೂರು ಕೆರೆಗೆ ನೀರು ಹರಿಯುತ್ತಿರಲಿಲ್ಲ.
ಇದಕ್ಕೆ ಮಾಜಿ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ.. ಅಧಿಕಾರಿಗಳು ನಮ್ಮ ನನಗೆ ಶಕ್ತಿ ನೀಡಿದ ಜನ ಕೊನೆಯ ಸಾಲಿನಲ್ಲಿ ನಾನು …..ಎಂದು ಮದಲೂರು ಕರೆ ಕಾಲುವೆ ನಿರ್ಮಾಣ ಕಾರ್ಯ ನೆರವು ನೀಡಿದ ಹಾಗೂ ಅಡ್ಡಿ ಪಡಿಸಿದವರನ್ನು ನೆನಪಿಸಿಕೊಂಡು ಹಾಗೂ ಸದ್ಯ ವರುಣನ ಕೃಪೆ ಬಗ್ಗೆ ವಿವರಿಸಿದರು…
ಈ ಸಂದರ್ಭದಲ್ಲಿ ಅಜ್ಜೇನಹಳ್ಳಿ, ಬಾಲೇನಹಳ್ಳಿ, ಕಳ್ಳಿಪಾಳ್ಯ, ಉದ್ದಯ್ಯನಪಾಳ್ಯ, ಭೂಪಸಂದ್ರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು, ರೈತರು ಮತ್ತು ನೂರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.