ತುಮಕೂರು ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ಹಿನ್ನೆಲೆ.ಸಚಿವ ಮಾಧುಸ್ವಾಮಿ ಹಾಗೂ ಸಚಿವ ಬಿಸಿ ನಾಗೇಶ್ ಜಂಟಿ ಸುದ್ದಿಗೊಷ್ಠಿ.
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕೆಬಿ ಕ್ರಾಸ್ ನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೊಷ್ಠಿ ನಡೆಸಿದ ಶಿಕ್ಷಣ ಸಚಿವ ಹಾಗೂ ಕಾನೂನು ಸಚಿವ ಮಾಧುಸ್ವಾಮಿ ರವರು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ನಿರ್ಧಿಷ್ಟ ಗುರಿ ಇಲ್ಲ ಎಂದು ಕಿಡಿ ಕಾರಿದರು.
ಜೋಡೋ ಪದ ಬಳಸುವ ಅಗತ್ಯವಿತ್ತ? ದೇಶ ವಿಭಜನೆ ಆಗಿತ್ತಾ? .
ಇತಿಹಾಸದಲ್ಲಿಭಾರತ ಜೋಡಿಸುವ ಅಗತ್ಯವಿದ್ದಾಗ ಆ ಕೆಲಸ ಮಾಡಲಿಲ್ಲ.ಕಾಂಗ್ರೆಸ್ ಅಸ್ತಿತ್ವಕ್ಕೆ ಭಾರತ್ ಜೋಡೋ ಪದ ಬಳಸಿದ್ದಾರೆ, ಜನರಿಗೆ ಹೇಳಲು ಯಾವುದೇ ವಿಷಯವಿಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಕೊನೆಯಲ್ಲಿ ಕೊನೆಯಲ್ಲಿ ಬಂದಿದ್ದು ಅಂದಿನ ಕಾಂಗ್ರೆಸ್ 1969ರಲ್ಲಿ ಇಬ್ಭಾಗವಾದಾಗಲೇ ಮುಗಿಯಿತು.
ರಾಷ್ಟ್ರಪತಿ ಅಭ್ಯರ್ಥಿ ವಿರುದ್ಧವಾಗಿ ಅಂದಿನ ಪ್ರಧಾನಿ ಪ್ರಚಾರ ನಡೆಸಿ ಸೋಲಿಸಿದ್ದರಿಂದ ನೈಜ ಕಾಂಗ್ರೆಸ್ ಇಬ್ಭಾಗವಾಯಿತು ಎಂದರು.
ಇದು ರಾಜಕೀಯ ಪಾದಯಾತ್ರೆ ಎಂದು ಘೋಷಿಸಬೇಕು ಎಂದ ಶಿಕ್ಷಣ ಸಚಿವರು ಕಾಂಗ್ರೆಸ್ ಯಾತ್ರೆಯೂ ಅಥವಾ ರಾಹುಲ್ ಗಾಂಧಿ ಪಾದಯಾತ್ರೆಯೊ ತಿಳಿಯಬೇಕಿದೆ ರಾಹುಲ್ ಗಾಂಧಿ ರಾಜಕೀಯ ಅಂತ್ಯವಾಗುತ್ತಿದ್ದು ದೇಶ ನೋಡಲು ಹೋಗುತ್ತಿರಬಹುದು ಎಂದರು .
ಜನರ ಕಷ್ಟ ಕೇಳುವಷ್ಟು ದೊಡ್ಡ ಮಟ್ಟದ ನಾಯಕತ್ವ ರಾಹುಲ್ ಗಾಂಧಿ ಅವರಲ್ಲಿ ಬೆಳೆದಿಲ್ಲ. ಪಾದಯಾತ್ರೆ ನಡೆಸುತ್ತಿರುವ ಮಾರ್ಗದ ಆಯ್ಕೆ ಬಗ್ಗೆಯೂ ಸ್ಪಷ್ಟತೆ ಇಲ್ಲ.ಸುಲಭವಾಗಿ ಸಾಗಬಹುದಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಪಾದಯಾತ್ರೆ ನಡೆಸುತ್ತಿದ್ದಾರೆ.ಆರ್ ಎಸ್ ಎಸ್, ಬಿಜೆಪಿ ಬಗ್ಗೆ ಟೀಕೆ ಮಾಡುವುದೇ ಅವರ ಸಾಧನೆಯಾಗಿದೆ.
ಆಪರೇಷನ್ ಬ್ಲೂಸ್ಟಾರ್ ಮುಂಚೆ ಆ ಸಂಘಟನೆ ಹುಟ್ಟು ಹಾಕಿದ್ದು ಇವರೇ,ಅದಕ್ಕೆ ಇವರೇ ಬಲಿಯಾದರು.
ಶ್ರೀಲಂಕಾ ಆಡಳಿತದಲ್ಲಿ ನಮ್ಮ ಸೈನ್ಯ ಬಿಟ್ಟು ತಮಿಳರ ವಿರೋಧ ಕಟ್ಟಿಕೊಂಡಿದ್ದರು. ಅಂದು ಶಾಂತಿಯಾತ್ರೆ ಕಾಂಗ್ರೆಸ್ ಮಾಡಬೇಕಿತ್ತು. ನೂರು ಸರಿ ಸುಳ್ಳು ಹೇಳಿ ಸತ್ಯ ಮಾಡಲು ಹೋರಟಿದ್ದಾರೆ,ಭ್ರಷ್ಟಾಚಾರದ ಬಗ್ಗೆ ಹುಡುಕಿ ಕ್ರಮಕೈಗೊಳ್ಳುತ್ತಿರುವ ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡುವುದನ್ನು ಖಂಡಿಸುತ್ತೇವೆ.ರಾಜಕೀಯ ಮಾಡಲು ಯಾತ್ರೆ ಮಾಡಬೇಡಿ,
ಈ ಭಾಗದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸುವ ಆತಂಕ ನಮಗಿದೆ, ಸಾವರ್ಕರ್ ಬಗ್ಗೆ, ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡುವುದು ಶೋಭೆ ತರುವುದಿಲ್ಲ ಎಂದು ಶಿಕ್ಷಣ ಸಚಿವ ನಾಗೇಶ್ ಕಿಡಿಕಾರಿದರು.
ಸುದ್ದಿಗೊಷ್ಠಿಯಲ್ಲಿ ಸಚಿವ ಮಾಧುಸ್ವಾಮಿ ಮಾತನಾಡಿ.
ಮಹಮದ್ ಆಲಿ ಜಿನ್ನಾ ಕೂಡ ಕಾಂಗ್ರೆಸ್ ಗೆ ಹೋರಾಡಿದ್ದರು, ಮಹಾತ್ಮಗಾಂಧಿಗೂ ಪಿರೋಜ್ ಗಾಂಧಿಗೂ ಏನು ಸಂಬಂಧ, ಆ ಗಾಂಧಿ ಹೆಸರನ್ನು ಬಳಸಿಕೊಂಡು ರಾಜಕೀಯ ಬೇಳೆಬೇಯಿಸಿಕೊಳ್ಳಲು ನೋಡಬಾರದು.
ರಾಜಕೀಯದಲ್ಲಿ ನೈತಿಕತೆ ಇಟ್ಟುಕೊಂಡು ಶಾಂತಿಯುತವಾಗಿ ಪಾದಯಾತ್ರೆ ಮಾಡಿಕೊಳ್ಳಲಿ, ಶಾಂತಿ ಭಂಗವೇ ಆಗದ ರಾಜ್ಯಗಳಲ್ಲಿ ಅವರು ಯಾತ್ರೆ ನಡೆಸುತ್ತಿರುವುದು.
ಟಿಪ್ಪು ಸಾಧನೆ ನಮಗೆ ಗೊತ್ತಿಲ್ಲ ಆದರೆ, ಮೈಸೂರು ಒಡೆಯರ್ ರಾಜ್ಯವನ್ನು ಸಾಕಿದ್ದಾರೆ ಅವರನ್ನು ಸ್ಮರಿಸುವ ಕೆಲಸ ಮಾಡಿದ್ದೇವೆ ಎಂದರು.