ಸಾರ್ವಜನಿಕರ ಸಂಕಷ್ಟಕ್ಕೆ ಮರುಗಿದ ನೂತನ ಸಚಿವ_ ಬಿ .ಸಿ ನಾಗೇಶ್.

ಸಾರ್ವಜನಿಕರ ಸಂಕಷ್ಟಕ್ಕೆ ಮರುಗಿದ ನೂತನ ಸಚಿವ_ ಬಿ .ಸಿ ನಾಗೇಶ್.

 

ನೂತನವಾಗಿ ಸಚಿವರಾಗಿ ಆಯ್ಕೆಯಾದ ತಿಪಟೂರು ಶಾಸಕ ಬಿಸಿ ನಾಗೇಶ್ ಅವರು ತುಮಕೂರಿಗೆ ಭೇಟಿ ನೀಡಿದರು .

 

ಮೊದಲು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಚಿವರು ಶಿವಕುಮಾರ ಶ್ರೀಗಳ ಗದ್ದುಗೆ ನಮಿಸಿ ನಂತರ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದು ನಂತರ ತುಮಕೂರಿನ ಭದ್ರಮ್ಮ ವೃತ್ತದಲ್ಲಿ ಇರುವ ಶಂಕರ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು ನಂತರ ದೇವಸ್ಥಾನದ ಅರ್ಚಕರು ನೂತನ ಸಚಿವರಿಗೆ ತಮಗೆ ಸಿಕ್ಕಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ನೊಂದವರ ದನಿಯಾಗಬೇಕು ಎಂದು ಮಾರ್ಗದರ್ಶನ ನೀಡಿದರು .ನಂತರ ಅಲ್ಲಿಂದ ನಿರ್ಗಮಿಸುವ ವೇಳೆ ಸಚಿವರ ಬೆಂಬಲಿಗರು ಫೋಟೋಗಾಗಿ ಮುಗಿಬಿದ್ದರು ಇದೇ ವೇಳೆ ಪ್ರಮುಖ ಸರ್ಕಲ್ ಆಗಿರುವ ಉದ್ದೇಶದಿಂದ ನಾಲ್ಕೂ ಬದಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು ಇದರಿಂದ ಸಾರ್ವಜನಿಕರು ದಿನನಿತ್ಯದ ಕೆಲಸಗಳಿಗೆ ಹೊರಡುವ ಜನರಿಗೆ ತೀವ್ರ ತೊಂದರೆ ಹಾಗೂ ಕಿರಿಕಿರಿ ಉಂಟಾಗುತ್ತಿತ್ತು ಅದೇ ವೇಳೆ ಅರ್ಚಕರೊಬ್ಬರು ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿರು ಇದೇ ವೇಳೆ ಇದನ್ನು ಗಮನಿಸಿದ ನೂತನ ಸಚಿವರು ಫೋಟೋ ನಂತರ ತೆಗೆದುಕೊಳ್ಳಲು ತಿಳಿಸಿದರು ಆದರೆ ಅರ್ಚಕರು ಫೋಟೋ ತೆಗೆಸಿಕೊಳ್ಳಲು ಮುಂದಾದರುು

 

. ಇದೇ ವೇಳೆ ನನ್ನಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಇದನ್ನು ನನ್ನಿಂದ ಸಹಿಸಲು ಸಾಧ್ಯವಿಲ್ಲ ಸಾರ್ವಜನಿಕರಿಗೆ ಎಂದು ಕೂಡ ತೊಂದರೆಯಾಗದಂತೆ ನಡೆದುಕೊಂಡು ಬಂದಿರುವೆ ಆದ್ದರಿಂದ ಇಂದು ಆಗಿರುವ ಟ್ರಾಫಿಕ್ ಜಾಮ್ ನಿಂದ ತಮಗೆ ತೀವ್ರ ನೋವು ಉಂಟಾಗಿದ್ದು ಆದ್ದರಿಂದ ಮುಂದಿನ ದಿನಗಳಲ್ಲಿ ತಾವು ತುಮಕೂರಿಗೆ ಭೇಟಿ ನೀಡುವ ವೇಳೆ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆ ಉಂಟಾಗಬಾರದು ಹಾಗೂ ನಾನು ಕೂಡ ತುಮಕೂರಿಗೆ ಭೇಟಿ ನೀಡುವ ವೇಳೆ ಯಾವುದೇ ಕಾರಣಕ್ಕೂ  ಟ್ರಾಫಿಕ್ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಬೇಡಿ ಎಂದು ಸ್ಥಳದಲ್ಲಿದ್ದ ಪೊಲೀಸರಿಗೆ ಸೂಚಿಸಿದರು.

 

ಅದೇನೇ ಇರಲಿ ಸಾರ್ವಜನಿಕರಿಗೆ ಅಚಾನಕ್ಕಾಗಿ ರಸ್ತೆಯನ್ನು ಬಂದ್ ಮಾಡಿದ್ದನ್ನು ಗಮನಿಸಿದ ನೂತನ ಸಚಿವರು ಸಾರ್ವಜನಿಕರ ಸಂಕಷ್ಟಕ್ಕೆ ಮರಗುವ ಮೂಲಕ ಮಾನವೀಯತೆ ತೋರಿದ್ದಾರೆ ಅದಕ್ಕಾಗಿ ಸ್ಥಳದಲ್ಲಿದ್ದ ಸಾರ್ವಜನಿಕರು ಮಂತ್ರಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!