ಮತದಾನದ ಬಗ್ಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮ
ಹನೂರು :- 2023 ರ ಕರ್ನಾಟಕ ಸಾರ್ವರ್ಥಿಕ ಚುನಾವಣೆ ಹಿನ್ನೆಲೆ ಹನೂರು ಪಟ್ಟಣದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಂದ ಮತದಾನದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲಾಯಿತು ಗೌತಮ್ ಶಾಲೆಯ ಮಕ್ಕಳ ತಮಟೆ ವಾದ್ಯದ ಜೊತೆಗೆ ಪಟ್ಟಣದ ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದಿಂದ ಖಾಸಗಿ ಬಸ್ ನಿಲ್ದಾಣ ಹಾಗೂ ಹೆಚ್ ನಾಗಪ್ಪ ವೃತ್ತದ ಮೂಲಕ ಜಾತ ಸಾಗಿ ತಪ್ಪದೆ ಮತದಾನ ಮಾಡಲು ಹಾಗೂ ಚುನಾವಣೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಪೋಸ್ಟರ್ ಗಳನ್ನು ಹಿಡಿದು ಮತದಾನದ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಇದೆ ವೇಳೆ ಮಾತನಾಡಿದ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ (EO) ಶ್ರೀನಿವಾಸ್ ರವರು ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಹನೂರು ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತಿಯ ಎಲ್ಲಾ ನೌಕರ ಸಿಬ್ಬಂದಿ ವರ್ಗದವರು ಸೇರಿ ಈ ದಿನ ತಾಲೂಕಿನದ್ಯoತ ಹೆಚ್ಚಿನ ಪ್ರಮಾಣದ ಶೇಕಡಾವರು ಮತದಾನ ಮಾಡಬೇಕೆನ್ನುವ ಉದ್ದೇಶದಿಂದ ಮತದಾನ ಪ್ರಕ್ರಿಯೆಯಿಂದ ಯಾರು ಹಿಂದೆ ಸರಿಯಾಬಾರದು ಮತದಾನ ವೆಂಬುದು ಪ್ರಜಾಪ್ರಭುತ್ವದ ಸ್ರೇಷ್ಟ ಹಕ್ಕು ಯಾವುದೇ ಹಣ ಆಮಿಷಕ್ಕೆ ಬಲಿಯಾಗದೆ ಸೂಕ್ತ ಹಾಗೂ ಪ್ರಾಮಾಣಿಕವಾದ ಜನಸೇವೆ ಕೆಲಸ ಮಾಡುವ ವ್ಯಕ್ತಿಯನ್ನು ಹಾರಿಸುವ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಚುನಾವಣಾ ಅಧಿಕಾರಿ ಮಧುಸೂದನ್ ಹನೂರು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಎ ಡಿ ರವೀಂದ್ರ. ಶಿವರಾಜ್. ಹಾಗೂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ಎಲ್ಲಾ ನೌಕರ ಸಿಬ್ಬಂದಿ ವರ್ಗದವರು ಹಾಜರಿದ್ದರು
ವರದಿ :- ನಾಗೇಂದ್ರ ಪ್ರಸಾದ್