ಬಜರಂಗದಳ ಜಿಲ್ಲಾ ಸಂಚಾಲಕ ಮಂಜು ಭಾರ್ಗವ ಮೇಲೆ ಮಾರಣಾಂತಿಕ ಹಲ್ಲೆ
ತುಮಕೂರು ನಗರದ ಬಿಜೆ ಪಾಳ್ಯ ಸರ್ಕಲ್ ಬಳಿ ಜಿಲ್ಲಾ ಬಜರಂಗದಳದ ಸಂಚಾಲಕ ಮಂಜು ಭಾರ್ಗವ ಅವರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಅವರಿಗೆ ರಾಡ್ ನಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಮಂಜು ಬಾರ್ಗವ ರವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬೈಕ್ ನಲ್ಲಿ ವೀಲಿಂಗ್ ಮಾಡಿಕೊಂಡು ಬರುತ್ತಿದ್ದು ಅವರಿಗೆ ತೊಂದರೆ ಕೊಡುತ್ತಿದ್ದರು ಅದನ್ನು ಪ್ರಶ್ನಿಸಿದ ಮಂಜು ಭಾರ್ಗವ್ ಹಾಗೂ ಅವರ ಸ್ನೇಹಿತ ಬಜರಂಗದಳದ ಕಾರ್ಯಕರ್ತ ಕಿರಣ್ ಎಂಬುವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕೂಡಲೇ ಪೊಲೀಸರು 24ಗಂಟೆಗಳಲ್ಲಿ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ನಗರ ಶಾಸಕ ಜ್ಯೋತಿ ಗಣೇಶ್ ಮೇಲ್ನೋಟಕ್ಕೆ ಹಲ್ಲೆ ಉದ್ದೇಶಪೂರಿತವಾಗಿ ಕಂಡುಬರುತ್ತಿದೆ ಮಂಜು ಬಾರದವರು ಅಕ್ರಮ ಗೋವುಗಳನ್ನು ಕಸಾಯಿಖಾನೆಗೆ ಸಲ್ಲಿಸುತ್ತಿದ್ದ ವಿರುದ್ಧ ಸಮರ ಸಾರಿ ಅವರನ್ನು ಪೊಲೀಸರಿಗೆ ಒಪ್ಪಿಸುವ ಕೆಲಸ ಮಾಡುತ್ತಿದ್ದರು ಈ ಹಿನ್ನೆಲೆಯಲ್ಲಿ ಸಾಕಷ್ಟು ದೂರುಗಳು ಈಗಾಗಲೇ ಇದರ ಬಗ್ಗೆ ಕೇಳಿಬಂದಿದ್ದು ಎಂದು ಮಂಜು ಅವರ ಮೇಲೆ ಹಾಗೂ ಅವರ ಸ್ನೇಹಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದು ನಿಜವಾಗಿಯೂ ಖಂಡನೀಯ ಕೂಡಲೇ ಪೊಲೀಸರು ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಸ್ಥಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಾಪುರವಾಡ್ ಸೇರಿದಂತೆ ಹಿರಿಯ ಪೋಲಿಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.
ಘಟನೆ ಹಿನ್ನೆಲೆ ನಾಳೆ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಮುಖಂಡರಾದ ಸಿ. ಟಿ ರವಿ, ಪ್ರತಾಪ್ ಸಿಂಹ, ಹಾಗೂ ತೇಜಸ್ವಿ ಸೂರ್ಯ ಸೇರಿದಂತೆ ಹಲವು ಮುಖಂಡರು ತುಮಕೂರಿಗೆ ಆಗಮಿಸುವ ನಿರೀಕ್ಷೆಯಿದೆ.
ಘಟನೆಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾ ಪೊಲೀಸ್ ಸಾಕಷ್ಟು ಅಗತ್ಯ ಕ್ರಮಗಳನ್ನು ಕೈಗೊಂಡು ಸೂಕ್ತ ಬಂದೋಬಸ್ತ್ ಮಾಡಿ ಎಚ್ಚರವಹಿಸಿದ್ದಾರೆ.