ಪ್ರಧಾನಿ ಆಗೋ ಯೋಗ ಒಬ್ಬ ಮಹಿಳೆ ಎಂದು ಸ್ಟೋಟಕ ಭವಿಷ್ಯ ನುಡಿದ ಕಾಲಜ್ಞಾನಿ ಡಾ. ಯಶ್ವಂತ ಗುರೂಜಿ.

ಪ್ರಧಾನಿ ಆಗೋ ಯೋಗ ಒಬ್ಬ ಮಹಿಳೆ ಎಂದು ಸ್ಟೋಟಕ ಭವಿಷ್ಯ ನುಡಿದ ಕಾಲಜ್ಞಾನಿ ಡಾ. ಯಶ್ವಂತ ಗುರೂಜಿ.

 

ತುಮಕೂರು: ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲ ಮೂಡಿಸಿದ ಕಾಲಜ್ಞಾನ ಭವಿಷ್ಯ. ಕಾಲಜ್ಞಾನ ಪ್ರಕಾರ ಮುಂದಿನ ಪ್ರಧಾನಿ ಆಗೋ ಯೋಗ ಒಬ್ಬ ಮಹಿಳೆ ಎಂದು ಸ್ಟೋಟಕ ಭವಿಷ್ಯ ನುಡಿದ ಕಾಲಜ್ಞಾನಿ ಡಾ. ಯಶ್ವಂತ ಗುರೂಜಿ.

 

 

 

 

 

 

ತುಮಕೂರು ಜಿಲ್ಲೆಯ ಟಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿ ಭವಿಷ್ಯ ನುಡಿದ ಯಶ್ವಂತ ಗುರೂಜಿ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ ಅಂತಾ ಈ ಹಿಂದೆ ಗುರೂಜಿ ಭವಿಷ್ಯ ನುಡಿದಿದ್ದರು. ಆ ಭವಿಷ್ಯ ನಿಜ ಆಯ್ತು. ಇದೀಗ ರಾಷ್ಟ್ರ ರಾಜಕಾರಣದ ಭವಿಷ್ಯ ಯಶ್ವಂತ ಗುರೂಜಿ ತಿಳಿಸಿದರು.

 

 

 

ಇಂದಿರಾಗಾಂಧಿ ನಂತರ ರಾಷ್ಟ್ರ ರಾಜಕಾರಣದ ಚುಕ್ಕಾಣಿಯನ್ನ ಮಹಿಳೆಯೇ ಹಿಡಿಯಲಿದ್ದಾರೆ. ಮಹಾಶಿವರಾತ್ರಿ ಹಬ್ಬದ ನಂತರ ಒಂದು ಶಕ್ತಿ ಅಂದರೆ ಒಂದು ಸ್ತ್ರೀ ದೇಶವನ್ನ ಆಳ್ತಾರೆ. ಆಗಂತಾ ಕಾಲಜ್ಞಾನದ ಭವಿಷ್ಯವಾಣಿ ಭವಿಷ್ಯವನ್ನ ಹೇಳ್ತಿದೆ. 35 ವರ್ಷಗಳ ಹಿಂದಿನ ದಿನಮಾನಗಳಲ್ಲಿ ಒಂದು ಸ್ತ್ರಿ ದೇಶವನ್ನ ಆಳಿರ್ತಾಳೆ. ಮತ್ತೂ ಕೂಡ ಮಹಾಶಿವರಾತ್ರಿ ನಂತರ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಕಾಲಜ್ಞಾನ ಭವಿಷ್ಯದ ಪ್ರಕಾರ ಒಂದು ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ. ಅತಂತ್ರ ಪರಿಸ್ಥಿತಿ ಆಗ್ತದೆ. ಮಿತ್ರಗಳ ಪಕ್ಷಗಳ ಸಹಾಯದಿಂದ ಒಂದು ಪಕ್ಷ ಅಧಿಕಾರಕ್ಕೆ ಬರುತ್ತೆ.

 

 

 

ಮಹಾಶಿವರಾತ್ರಿ ಹಬ್ಬದ ಒಳಗೆ ಲೋಕಸಭೆ ಚುನಾವಣೆ ನಡೆದ್ರೆ ಪ್ರಧಾನಿ ಮೋದಿಗೆ ಅವಕಾಶವಿದೆ. ಮಾರ್ಚ್ ನಂತರ ಚುನಾವಣೆ ನಡೆದ್ರೆ ಬೇರೆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆ ಒಬ್ಬ ಮಹಿಳೆಯೇ ಪ್ರಧಾನಿ ಆಗೋ ಯೋಗವಿದೆ. ಪ್ರಧಾನಿ ಯೋಗವಿರುವ ಸ್ತ್ರೀ ಯಾರೆಂದು ಮಕರ ಸಂಕ್ರಮಣದ ಹಬ್ಬದಂದು ಹೇಳಲಾಗುತ್ತದೆ. ಇಂತಹದ್ದೇ ಪಕ್ಷ ಅಧಿಕಾರದ ಗದ್ದುಗೆ ಏರ್ತದೆ ಅಂತಾ ಮಕರ ಸಂಕ್ರಮಣ ಪರ್ವ ಕಾಲದಲ್ಲಿ ಹೇಳಲಾಗ್ತದೆ.

 

 

 

 

ಅಂದೇ ಯಾವ ಪಕ್ಷ, ಯಾವ ಮಹಿಳೆ ಅಂತಾ ಸ್ಪಷ್ಟವಾಗಿ ಹೇಳಲಾಗ್ತದೆ. ಆ ಸ್ತ್ರೀ ಯಾವುದೇ ಪಕ್ಷದವರು ಆಗಿರಬಹುದು. ದೇಶವನ್ನ ಆ ಸ್ತ್ರೀ ದೇಶ ಆಳೋದು ಶತಃ ಸಿದ್ಧ ಎಂದು ತುಮಕೂರಿನ ನೊಣವಿನಕೆರೆಯಲ್ಲಿ ಭವಿಷ್ಯ ಡಾ.ಯಶ್ವಂತ ಗುರೂಜಿ ಹೇಳಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!