ತುಮಕೂರು
ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಆರೋಗ್ಯ ಕ್ಷೇತ್ರದ ಉದ್ದೇಶಿತ ವಿವಿಧ ಕೌಶಲ್ಯ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿದೆ.
ಆರೋಗ್ಯ ಕ್ಷೇತ್ರದ ಜನರಲ್ ಡ್ಯೂಟಿ ಅಸಿಸ್ಟೆಂಟ್(ಜೆಡಿಎ), ಜೆಡಿಎ ಅಡ್ವಾನ್ಸ್, ಹೋಮ್ ಹೆಲ್ತ್ ವರ್ಕರ್, ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್, ಲೆಬೊಟಾಮಿಸ್ಟ್, ಮೆಡಿಕಲ್ ರೆಕಾರ್ಡ್ ಅಸಿಸ್ಟೆಂಟ್, ಮೆಡಿಕಲ್ ಎಕ್ಯೂಪ್‌ಮೆಂಟ್ ಟೆಕ್ನಾಲಜಿ ಅಸಿಸ್ಟೆಂಟ್ ವಿಷಯಗಳಿಗೆ ತರಬೇತಿ ನೀಡಲಾಗುವುದು.
ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.(ವಿಜ್ಞಾನ) ವಿದ್ಯಾರ್ಹತೆಯುಳ್ಳ ಆಸಕ್ತ 18 ರಿಂದ 35 ವಯೋಮಿತಿಯೊಳಗಿನ ನಿರುದ್ಯೋಗಿ ಯುವಕ/ಯುವತಿಯರು ಜಾಲತಾಣ https://forms.gle/JK5Q577WRBpCfhAV9 ಅಥವಾ ಇ-ಮೇಲ್ skillmissiontumkur@gmail.com ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ತಮ್ಮ ಸ್ವ-ವಿವರದೊಂದಿಗಿನ ಅರ್ಜಿಯನ್ನು ಜೂನ್ 4 ರೊಳಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂ. 9844734943, 9971723577, 9448308395ನ್ನು ಸಂಪರ್ಕಿಸಬಹುದಾಗಿದೆ.
your training scheme is very good for unemployed