ಕೆ.ಎನ್ ಆರ್ ಬೆಂಬಲಕ್ಕೆ ನಿಂತ ಅಹಿಂದ ಒಕ್ಕೂಟ.
ತುಮಕೂರು_ಕಳೆದ ಎರಡು ದಿನಗಳ ಹಿಂದೆ ಮಧುಗಿರಿಯ ಕವನದಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಧುಗಿರಿಯ ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರು ಮಾಜಿ ಪ್ರಧಾನಿ ದೇವೇಗೌಡ ಅವರ ಬಗ್ಗೆ ನೀಡಿದ್ದ ಹೇಳಿಕೆ ಸಂಬಂಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು ನಂತರ ಪಕ್ಷದ ವರಿಷ್ಠರು ಸಮುದಾಯದ ಮುಖಂಡರು ಸೇರಿದಂತೆ ಹಲವರಿದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಕೆ ಎನ್ ರಾಜಣ್ಣ ವಿಷದವನ್ನು ಸಹ ವ್ಯಕ್ತಪಡಿಸಿದ್ದರು ಘಟನೆ ಸಂಭಂದ ರಾಜ್ಯದೆಲ್ಲೆಡೆ ಹಲವು ಪ್ರತಿಭಟನೆ ನಡೆಯುತ್ತಿದ್ದು ಇದರ ಬೆನ್ನಲ್ಲೇ ಇಂದು ತುಮಕೂರಿನಲ್ಲಿ ಅಹಿಂದ ವರ್ಗಗಳ ಒಕ್ಕೂಟದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿದ ಅಹಿಂದ ವರ್ಗಗಳ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಕೆ ಎನ್ ರಾಜಣ್ಣ ರವರ ವಿರುದ್ಧವಾಗಿ ಹೇಳಿಕೆಗಳು ಹಾಗೂ ಪೋಸ್ಟ್ಗಳು ಹರಿದಾಡುತ್ತಿದ್ದು ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಹಿಂದ ವರ್ಗಗಳ ಮುಖಂಡ ಅಂಜಿನಪ್ಪ ಅವರ ನೇತೃತ್ವದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಅವರು ಕೆ.ಎನ್ ರಾಜಣ್ಣಪರ ಅಹಿಂದ ವರ್ಗ ಇದೆ ಇನ್ನೂ ಕೆ ಎನ್ ರಾಜಣ್ಣತುಮಕೂರು ಜಿಲ್ಲೆಯ ಅಹಿಂದ ವರ್ಗಗಳ ನಾಯಕರಾಗಿದ್ದು ಅವರ ವಿರುದ್ಧ ಹಲವು ನಾಯಕರು ರಾಜಣ್ಣ ವಿರುದ್ಧವಾಗಿ ಸಾಕಷ್ಟು ಹೇಳಿಕೆಗಳನ್ನು ನೀಡುತ್ತಿದ್ದು ಇದು ಸರಿಯಲ್ಲ ಹಾಗಾಗಿ ಜಿಲ್ಲೆಯ ಎಲ್ಲ ಅಹಿಂದ ವರ್ಗಗಳ ಸಂಘಟನೆ ಕೆ.ಎನ್ ಆರ್ ಬೆಂಬಲಕ್ಕೆ ನಿಂತಿದ್ದು ಇನ್ನೂ ಅವರ ವಿರುದ್ಧದ ಹೇಳಿಕೆಗಳು ನಿಲ್ಲದೆ ಇದ್ದರೆ ಪ್ರತಿಭಟನೆ ನಡೆಸಲಾಗುವುದು ಈ ಮೂಲಕ ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದರು.
ಇನ್ನು ಮುಖಂಡ ದನಿಯ ಕುಮಾರ್ ಮಾತನಾಡಿ ಇನ್ನು ರಾಜಣ್ಣನವರು ತಮ್ಮ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಹೇಳಿಕೆ ಸಂಬಂಧ ಸ್ಪಷ್ಟನೆಯನ್ನು ನೀಡಿ ವಿಷದ ವ್ಯಕ್ತಪಡಿಸಿದರು ಸಹ ಅವರ ವಿರುದ್ಧವಾಗಿ ಹಲವು ನಾಯಕರು ಇಲ್ಲಸಲ್ಲದ ಆರೋಪಗಳನ್ನ ಮಾಡುತ್ತ ಮನಸು ಈಚೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸಹ ಅವರ ವಿರುದ್ಧವಾದ ಪೋಸ್ಟುಗಳು ಹರಿದಾಡುತ್ತಿದ್ದು ಇಂತಹ ಘಟನೆಗಳಿಂದ ಸಮಾಜಕ್ಕೆ ಬೇರೆ ಸಂದೇಶ ರವಾನೆಯಾಗುತ್ತಿದ್ದು ಕೂಡಲೇ ಕಡಿವಾಣ ಬೀಳಬೇಕು ಎಂದರು. ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಎಲ್ಲರಿಗೂ ಸಹ ಅಪಾರವಾದ ಗೌರವ ಪ್ರೀತಿ-ವಿಶ್ವಾಸ ಎಲ್ಲರಲ್ಲೂ ಇದೆ ರಾಜಣ್ಣನವರಿಗೂ ಸಹ ಹಿರಿಯರಾದ ದೇವೇಗೌಡರ ಬಗ್ಗೆ ಅಪಾರವಾದ ಗೌರವ ಇದೆ ಇನ್ನು ಅವರ ಮನೆಗೆ ಭೇಟಿ ಸ್ಪಷ್ಟನೆ ನೀಡುತ್ತೇನೆ ಎಂದಿದ್ದಾರೆ .
ಇನ್ನು ಜಿಲ್ಲೆಯ ನಾಯಕರಾದ ಕೆಎನ್ ರಾಜಣ್ಣ ರವರು ತಳ ಸಮುದಾಯಗಳ ಉತ್ತಮ ನಾಯಕರಾಗಿದ್ದು ಇನ್ನೂ ಅವರ ತೇಜೋವದೆಯನ್ನ ಜಿಲ್ಲೆಯ ಜನರು ಸಹಿಸುವುದಿಲ್ಲ ಕೂಡಲೇ ಇದಕ್ಕೆಲ್ಲ ಕಡಿವಾಣ ಬೀಳಬೇಕು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಲವು ಮುಖಂಡರು ಮಾತನಾಡಿದ್ದು ಇನ್ನೂ ಕೆಎನ್ ರಾಜಣ್ಣನವರ ವಿರುದ್ಧವಾಗಿ ಪ್ರತಿಭಟನೆಗಳು ಹೇಳಿಕೆಗಳು ಮುಂದುವರಿದರೆ ಅದರ ವಿರುದ್ದವಾಗಿ ಪ್ರತಿಭಟನೆ ನಡೆಸಲಾಗುವುದು ಈ ಮೂಲಕ ನಮ್ಮ ಉತ್ತರವನ್ನು ರವಾನಿಸಲಾಗುವುದು ಎಂದು ಎಚ್ಚರಿಕೆಯನ್ನು ಸಹ ರವಾನಿಸಿದ್ದಾರೆ.
ಇನ್ನು ಪತ್ರಿಕಾಗೋಷ್ಠಿಯಲ್ಲಿ ರೇವಣಸಿದ್ದಯ್ಯ ಕೊಟ್ಟ ಶಂಕರ್ ಪಿ ಮೂರ್ತಿ, ಅಜಯ್ ಕುಮಾರ್, ರಾಜಕುಮಾರ್, ಗಂಗಣ್ಣ, ಮಲ್ಲಿಕಾರ್ಜುನ್ ,ಮಂಜುನಾಥ್, ರಾಜು, ಮಾಲಿಂಗಯ್ಯ ಗೋಪಾಲ್, ರಾಮಯ್ಯ ,ಸೇರಿದಂತೆ ಜಿಲ್ಲೆಯ ಹಲವು ಸಮಾಜದ ಮುಖಂಡರು ಹಾಜರಿದ್ದರು.
ವರದಿ_ ಮಾರುತಿ ಪ್ರಸಾದ್ ತುಮಕೂರು