ಸಿದ್ಧಗಂಗಾ ಮಠಕ್ಕೆ ನೂತನ ಸಚಿವ ಜೆ.ಸಿ. ಮಾಧುಸ್ವಾಮಿ ಭೇಟಿ
ತುಮಕೂರು_
ನಗರದ ಸಿದ್ಧಗಂಗಾ ಮಠಕ್ಕೆ ಇಂದು ರಾತ್ರಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಜೆ.ಸಿ. ಮಾಧುಸ್ವಾಮಿಯವರು ಭೇಟಿ ನೀಡಿ ಲಿಂ.ಡಾ.ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಗದ್ಧುಗೆಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ಅವರು ಮಠದ ಆಡಳಿತ ಕಛೇರಿಯಲ್ಲಿ ಸಿದ್ಧಲಿಂಗ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಮಾಧುಸ್ವಾಮಿಯವರನ್ನು ಹೂಗುಚ್ಚ ನೀಡಿ ಜಿಲ್ಲಾಡಳಿತದ ಪರವಾಗಿ ಸ್ವಾಗತ ನೀಡಿದರು.
ಇದೇ ವೇಳೆ ಅವರು ಸುದ್ಧಿಗಾರರೊಂದಿಗೆ ಮಾತನಾಡಿ ಪ್ರಸ್ತುತ ಜಿಲ್ಲೆಯಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡಿದ್ದು ಮುಖ್ಯಮಂತ್ರಿಗಳು ಯಾವ ಖಾತೆ ನೀಡಿದರು ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ತಮ್ಮ ಮೇಲೆ ವಿಶ್ವಾಸವಿಟ್ಟು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಯಾವ ಖಾತೆ ನೀಡಿದರೂ ಸಹ ಅದನ್ನು ಸ್ವೀಕರಿಸುವುದಾಗಿ ತಿಳಿಸಿದರು.
ಹಿಂದೆ ತಮ್ಮ ಬಳಿಯಿದ್ದ ಸಣ್ಣ ನೀರಾವರಿ ಖಾತೆಯನ್ನು ಮುಂದುವರೆಸುವ ಬಗ್ಗೆ ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸಿದ ಸಚಿವರು ತಮ್ಮ ಕ್ಷೇತ್ರದಲ್ಲಿ ಕೆಲವು ಅಭಿವೃದ್ಧಿ ಕೆಲಸಗಳಾಗಬೇಕಿದ್ದರಿಂದ ಸಣ್ಣ ನೀರಾವರಿ ಖಾತೆಗೆ ಸಹಜವಾಗಿ ಬೇಡಿಕೆಯಿಟ್ಟು ಹಠ ಮಾಡಿದ್ದು ಸತ್ಯ. ಆದರೆ ಈಗ ಆ ಕಾಮಗಾರಿಗಳೆಲ್ಲಾ ಪ್ರಾರಂಭವಾಗಿರುವುದರಿಂದ ಪ್ರಸ್ತುತ ಖಾತೆಗಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ. ಖಾತೆ ಹಂಚಿಕೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದಾದ್ದರಿಂದ ಅವರು ಯಾವುದೇ ಖಾತೆ ನೀಡಿದರೂ ಅದನ್ನು ಸ್ವೀಕರಿಸುವುದಾಗಿ ತಿಳಿಸಿದರು
ಜಿಲ್ಲೆಯಲ್ಲಿ ತಮ್ಮ ಮುಂದಿನ ಕಾರ್ಯಕ್ರಮಗಳ ಬಗ್ಗೆ ಪ್ರಶ್ನಿಸಿದಾಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ನೀರಾವರಿ ಯೋಜನೆಗಳು, ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಅಶಕ್ತರಿಗೆ ಉದ್ಯೋಗ ಕಲ್ಪಿಸುವ ಯೋಜನೆಗಳನ್ನು ವ್ಯವಸ್ಥಿತವಾಗಿ ರೂಪಿಸುವುದಾಗಿ ತಿಳಿಸಿದರು.
ಜಿಲ್ಲೆಯ ಕೋವಿಡ್ ನಿರ್ವಹಣೆಯ ಬಗ್ಗೆ ಪ್ರತಿಕ್ರಯಿಸಿದ ಸಚಿವರು ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಮಾಡುವಲ್ಲಿ ತಮ್ಮ ಜೊತೆಗೆ ಜಿಲ್ಲೆಯ ಎಲ್ಲ ಇಳಾಖೆಗಳ ಅಧಿಕಾರಿ ವರ್ಗದವರ ಸಹಕಾರದಿಂದ ಕೋವಿಡ್ ನಿರ್ವಹಣೆ ಹೇಗೆ ಮಾಡಬೇಕೆಂಬುದನ್ನು ನಿರೂಪಿಸಿದ್ದು, ಮುಂದೆಯೂ ಸಹ ಉತ್ತಮವಾಗಿ ಕಾರ್ಯನಿರ್ವಹಿಅಉವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಬಿ.ಜೆ.ಪಿ.ಮುಖಂಡತಾದ ದಿಲೀಪ್ ಕುಮಾರ್, ಎಂ.ಬಿ.ನಂದೀಶ್ ಮಹದೇವ್, ಡಿ.ಸಿ. ವೈ.ಎಸ್ ಪಾಟೀಲ್, ಎಸ್.ಪಿ. ರಾಹುಲ್ ಕುಮಾರ್, ಜಿ.ಪಂ. ಸಿ.ಇ.ಓ. ಡಾ.ಕೆ.ವಿದ್ಯಾಕುಮಾರಿ, ಎ ಸಿ.ಅಜಯ್, ತಹಶೀಲ್ದಾರ್ ಮೋಹನ್, ಡಿ.ಹೆಚ್.ಓ. ಡಾ. ನಾಗೇಂದ್ರಪ್ಪ, ಮುಂತಾದವರು ಉಪಸ್ಥಿತರಿದ್ದರು