ಕೊರಟಗೆರೆಯಲ್ಲಿ ಅಪಘಾತ ವೃದ್ಧೆ ಸಾವು

ಕೊರಟಗೆರೆಯಲ್ಲಿ ಅಪಘಾತ ವೃದ್ಧೆ ಸಾವು

ಕೊರಟಗೆರೆ ತಾಲೂಕಿನ ಕಂಬದಹಳ್ಳಿ ಸಮೀಪ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ವೃದ್ದೆಯೊಬ್ಬರು(83) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಪೆಮ್ಮೆದೇವರಹಳ್ಳಿ ಗ್ರಾಮದ ಗಂಗಮ್ಮ (83) ಮೃತಪಟ್ಟ ದುರ್ದೈವಿ. ಸಮೀಪದ ಕಂಬದಹಳ್ಳಿ ಗ್ರಾಮದಲ್ಲಿದ್ದ ತನ್ನ ಮಗಳನ್ನು ನೋಡಿಕೊಂಡು ಬರಲು ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಯಾವುದೋ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ ಆದರೆ ಅಪಘಾತಕ್ಕೀಡಾದ ವೃದ್ಧಿ ಗಂಗಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುತ್ತುರಾಜು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!