ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಬಿಇಓ ತಮ್ಮ ಕಚೇರಿಯಲ್ಲಿ ಶಿಕ್ಷಕರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಸಾಕ್ಷಿ ಸಮೇತವಾಗಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ವೆಂಕಟೇಶ್ ಲಂಚ ಪಡೆಯುತ್ತಿದ್ದ ಬಿಇಓ.
ಶಿಕ್ಷಕ ಆಂಜನೇಯ ನಾಯಕ್ ಎಂಬುವವರನ್ನ ವರ್ಗಾವಣೆ ಮಾಡಲು ಬಿಇಓ 50,000ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಎಸಿಬಿ ಅಧಿಕಾರಿಗಳ ಬಳಿ ತೆರಳಿ ದೂರು ನೀಡಿದ್ದರು. ಅವರ ಮಾಹಿತಿಯಂತೆ ಬಿಇಓಗೆ ಶಿಕ್ಷಕರು 10,000 ರೂಪಾಯಿ ಲಂಚ ಕೊಡಲು ಮುಂದಾಗಿದ್ದರು. ಈ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಸಾಕ್ಷಿ ಸಮೇತ ಅಧಿಕಾರಿಯನ್ನ ಹಿಡಿದಿದ್ದಾರೆ.